Lorry crashes into bakery, Bangles store, two die on the spot
x

ಬೇಕರಿಗೆ ನುಗ್ಗಿರುವ ಲಾರಿ

ಬೇಕರಿ, ಬ್ಯಾಂಗಲ್ಸ್‌ ಸ್ಟೋರ್‌ಗೆ ನುಗ್ಗಿದ ಲಾರಿ, ಇಬ್ಬರು ಸ್ಥಳದಲ್ಲೇ ಸಾವು

ಮೃತರನ್ನು ಕಾಟೇನಹಳ್ಳಿ ಗ್ರಾಮದ ರಂಗಶಾಮಯ್ಯ(65) ಹಾಗೂ ಪುರದಹಳ್ಳಿ ಗ್ರಾಮದ ಬೈಲಪ್ಪ (65) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.


ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಬೇಕರಿ ಹಾಗೂ ಬ್ಯಾಂಗಲ್‌ ಸ್ಟೋರ್‌ಗೆ ನುಗ್ಗಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಕೊರಟಗೆರೆ ತಾಲೂಕಿನ ಕೋಳಾಲ ಗ್ರಾಮದ ವೃತ್ತದಲ್ಲಿ ಮಂಗಳವಾರ ನಡೆದಿದೆ.

ಮೃತರನ್ನು ಕಾಟೇನಹಳ್ಳಿ ಗ್ರಾಮದ ರಂಗಶಾಮಯ್ಯ(65) ಹಾಗೂ ಪುರದಹಳ್ಳಿ ಗ್ರಾಮದ ಬೈಲಪ್ಪ (65) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡಿರುವ ಕಾಂತರಾಜು, ಜಯಣ್ಣ, ಸಿದ್ದಗಂಗಮ್ಮ ಹಾಗೂ ಮೋಹನ್‌ ಕುಮಾರ್‌ ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಲಾರಿಯು ತುಮಕೂರು ಮಾರ್ಗವಾಗಿ ಕಾಟೇನಹಳ್ಳಿ ಕಡೆಗೆ ಬರುತ್ತಿದ್ದಾಗ ಕೋಳಾಲ ವೃತ್ತದ ಕಡಿದಾದ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡಿದೆ. ಚಾಲಕ ನೇರವಾಗಿ ಬ್ಯಾಂಗಲ್ಸ್‌ ಹಾಗೂ ಬೇಕರಿಗೆ ಲಾರಿಯನ್ನು ನುಗ್ಗಿಸಿದ್ದಾನೆ. ಘಟನೆಯಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೋಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More
Next Story