Loksabha Election 2024 | ಮೊದಲ ಹಂತದಲ್ಲಿ ಶೇ.65ರಷ್ಟು ಮತದಾನ; ಹಕ್ಕು ಮರೆತ ಬೆಂಗಳೂರಿಗರು
x

Loksabha Election 2024 | ಮೊದಲ ಹಂತದಲ್ಲಿ ಶೇ.65ರಷ್ಟು ಮತದಾನ; ಹಕ್ಕು ಮರೆತ ಬೆಂಗಳೂರಿಗರು


ಲೋಕಸಭಾ ಚುನಾವಣೆ ಮತದಾನ ನಡೆಯುತ್ತಿರುವ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಸಂಜೆ 7.30 ವೇಳೆಗೆ ಒಟ್ಟಾರೆ ಶೇ. 65ರಷ್ಟು ಮತದಾನವಾಗಿದೆ. ಒಟ್ಟಾರೆ ಮತದಾನದ ಪ್ರಮಾಣದಲ್ಲಿ ಅಂತಿಮವಾಗಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಸದ್ಯ ಮಂಡ್ಯದಲ್ಲಿ ಅತಿ ಹೆಚ್ಚು ಶೇ.74.87 ರಷ್ಟು ಮತದಾನವಾಗಿದ್ದರೆ, ಬೆಂಗಳೂರು ಕೇಂದ್ರದಲ್ಲಿ ಶೇ.49 ರಷ್ಟು ಮತದಾನವಾಗಿದೆ. ಈ ಮೂಲಕ ಬೆಂಗಳೂರು ಕೇಂದ್ರ ಈ ಬಾರಿಯೂ ಅತಿ ಕಡಿಮೆ ಮತದಾನ ಕ್ಷೇತ್ರವಾಗಿಯೇ ಮುಂದುವರೆದಿದೆ.

ಬಿಸಿಲು ಹೆಚ್ಚಾದಂತೆ ಮತಗಟ್ಟೆಯಿಂದ ದೂರ

ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಬಿಸಿಲು ಕಡಿಮೆ ಇದ್ದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿ ಮತ ಚಲಾವಣೆ ಮಾಡಿದ್ದರು. ಬೆಳಿಗ್ಗೆ 10 ಗಂಟೆಗೆ ಶೇ. 20ರಷ್ಟು ಮತದಾನ ರಾಜ್ಯದಲ್ಲಾಗಿತ್ತು. ಬಿಸಿಲು ಹೆಚ್ಚಾದಂತೆ ಜನ ಮತಗಟ್ಟೆಯಿಂದ ದೂರ ಉಳಿದರು.

ಸಂಜೆ ಬಳಿಕ ಹೆಚ್ಚಿದ ಮತದಾರರು

ಬಿಸಲು ತಗ್ಗಿ ಸಂಜೆ 4 ಗಂಟೆಯ ಬಳಿಕ ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಕೊನೆಯ ಕ್ಷಣದಲ್ಲಿ ಮತ ಚಲಾವಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಸಂಜೆ 6 ಕ್ಕೆ ಮತಗಟ್ಟೆಗಳು ಬಂದ್‌ ಆಗಿದ್ದು, ನಿಗದಿತ ಮತದಾರರಿಗೆ ಅವಕಾಶ ನೀಡಿ ಆ ಬಳಿಕ ಮತದಾನ ಪ್ರತಿಕ್ರಿಯೆ ಕೊನೆಗೊಳಿಸಲಾಗಿದೆ.

ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?

ಲೋಕಸಭಾ ಕ್ಷೇತ್ರ ಮತದಾನ ಪ್ರಮಾಣ

ಉಡುಪಿ ಚಿಕ್ಕಮಗಳೂರು 72.1 %

ಹಾಸನ 72.1 %

ದಕ್ಷಿಣ ಕನ್ನಡ 72 %

ಚಿತ್ರದುರ್ಗ 67 %

ತುಮಕೂರು 72.1 %

ಮಂಡ್ಯ 74.9 %

ಮೈಸೂರು 66 %

ಚಾಮರಾಜ ನಗರ 69.6 %

ಬೆಂಗಳೂರು ಗ್ರಾಮಾಂತರ 61.7 %

ಬೆಂಗಳೂರು ಉತ್ತರ 51 %

ಬೆಂಗಳೂರು ಕೇಂದ್ರ 48.6 %

ಬೆಂಗಳೂರು ದಕ್ಷಿಣ 49.3%

ಚಿಕ್ಕಬಳ್ಳಾಪುರ 71 %

ಕೋಲಾರ 73 %

Read More
Next Story