ಲೋಕ ಸ್ವಾರಸ್ಯ | ʼರಗ್ಗʼದ್ ಜಗಳ ಮರೆತು ಒಂದಾದ ಕುಮಾರಣ್ಣ– ವಿಶ್ವಣ್ಣ!
x
ಎಚ್‌. ವಿಶ್ವನಾಥ್‌ ಮತ್ತು ಎಚ್‌.ಡಿ ಕುಮಾರಸ್ವಾಮಿ ಭೇಟಿ

ಲೋಕ ಸ್ವಾರಸ್ಯ | ʼರಗ್ಗʼದ್ ಜಗಳ ಮರೆತು ಒಂದಾದ ಕುಮಾರಣ್ಣ– ವಿಶ್ವಣ್ಣ!

ಎರಡು ವರ್ಷಗಳ ಹಿಂದೆ ಬಿಜೆಪಿ ಪಕ್ಷಕ್ಕೆ ʼರಗ್‌ʼ ಹಾಕುವ ವಿಷಯದಲ್ಲಿ ಪರಸ್ಪರ ಕಾಲೆಳೆದುಕೊಂಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಎಚ್. ವಿಶ್ವನಾಥ್ ಇದೀಗ ಇಬ್ಬರು ಜಂಟಿಯಾಗಿ ಬಿಜೆಪಿಗೆ ʼರಗ್‌ʼ ಹಾಕಿದ್ದಾರೆ.


ಎರಡು ವರ್ಷಗಳ ಹಿಂದೆ ಬಿಜೆಪಿ ಪಕ್ಷಕ್ಕೆ ʼರಗ್‌ʼ ಹಾಕುವ ವಿಷಯದಲ್ಲಿ ಪರಸ್ಪರ ಕಾಲೆಳೆದುಕೊಂಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಎಚ್. ವಿಶ್ವನಾಥ್ ಇದೀಗ ಇಬ್ಬರು ಜಂಟಿಯಾಗಿ ಬಿಜೆಪಿಗೆ ʼರಗ್‌ʼ ಹಾಕಿದ್ದಾರೆ.

ಇದಕ್ಕೆ ಕಾರಣವಾಗಿರುವುದು ಲೋಕಸಭೆ ಚುನಾವಣೆ. ಮಂಡ್ಯ ಲೋಕಸಭೆ ಕ್ಷೇತ್ರದಿಂದ ಈ ಬಾರಿ ಬಿಜೆಪಿ ಮಿತ್ರನಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಿದ್ದಾರೆ. ಕೆ.ಆರ್ ನಗರ ವಿಧಾನಸಭೆ ಕ್ಷೇತ್ರವೂ ಸಹ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದು, ಇಲ್ಲಿ ಎಲ್ಲ ನಾಯಕರೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಎಚ್.ಡಿ ಕುಮಾರಸ್ವಾಮಿ ಅವರಿಗೆ ಅನಿವಾರ್ಯವಾಗಿದೆ. ಹೀಗಾಗಿ, ಮೈತ್ರಿ ಪಕ್ಷದ ನಾಯಕರು ಮುನಿಸು ಮರೆತು ಒಂದಾಗುತ್ತಿದ್ದಾರೆ.

ನಾಲ್ಕು ವರ್ಷದ ಹಿಂದೆ ವಿಶ್ವನಾಥ್ ಅವರು ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ʼಬಾಂಬೆ ಬಾಯ್ಸ್ʼ ತಂಡದ ನೇತೃತ್ವ ವಹಿಸಿ ಮುಂಬೈಗೆ ಹಾರಿದ್ದರು. ಆ ಬಳಿಕ ಕುಮಾರಸ್ವಾಮಿ ಹಾಗೂ ವಿಶ್ವನಾಥ್ ಅವರ ನಡುವೆ ಬಿಜೆಪಿ ಸೇರ್ಪಡೆಯ ಬಗ್ಗೆ ʼರಗ್ʼ ವಿಷಯ ಚರ್ಚೆಯಾಗಿತ್ತು. ಬಿಜೆಪಿ ಪಕ್ಷಕ್ಕೆ ಸೇರಲು ಎಚ್‌ ವಿಶ್ವನಾಥ್‌ ಅವರು ತಯಾರಾಗಿದ್ದಾರೆ ಎಂಬ ಕುರಿತು ಕುಮಾರಸ್ವಾಮಿ ಅವರು ʼಈಗಾಗಾಲೇ ಅವರು ಬಿಜೆಪಿಗೆ ರಗ್‌ ಹಾಕಿದ್ದಾರೆʼ ಎಂದು ಹೇಳಿದ್ದರು. ವಿಶ್ವನಾಥ್‌ ಅವರು ಅದಕ್ಕೂ ಮುಂಚೆ ಕುಮಾರಸ್ವಾಮಿ ಅವರನ್ನು ಕುರಿತು, "ಕುಮಾರಸ್ವಾಮಿ ಅವರು ಬಿಜೆಪಿಗೆ ಕರ್ಚೀಫ್‌ ಅಲ್ಲ; ರಗ್ಗನ್ನೇ ಹಾಕಿದ್ದಾರೆ" ಎಂದು ಹೇಳಿದ್ದರು.

ಬಿಜೆಪಿ ಸೇರುವ ವಿಷಯದಲ್ಲಿ ನಾಲ್ಕು ವರ್ಷಗಳ ಹಿಂದೆ ಹೀಗೆ ಪರಸ್ಪರ ಸಾರ್ವಜನಿಕವಾಗಿ ಕಿತ್ತಾಡಿದ್ದ ನಾಯಕರಿಬ್ಬರು ಇದೀಗ ಲೋಕಸಭಾ ಕಣದಲ್ಲಿ ಪರಸ್ಪರ ಕೈಜೋಡಿಸಿದ್ದಾರೆ.

ಲೋಕಸಭೆ ಚುನಾವಣೆಯ ಸಮಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬೆಂಬಲ ಸೂಚಿಸಿದ್ದಾರೆ.

ಮೈಸೂರಿನ ಕೆ.ಆರ್ ನಗರದಲ್ಲಿರುವ ವಿಶ್ವನಾಥ್ ಅವರ ಮನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶನಿವಾರ ಭೇಟಿ ನೀಡಿ ಮಾತುಕತೆ ನಡೆಸಿದರು.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಬೆಂಬಲವನ್ನು ಕುಮಾರಸ್ವಾಮಿ ಪಡೆದುಕೊಳ್ಳುತ್ತಿದ್ದಾರೆ. ಈಚೆಗಷ್ಟೇ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರೊಂದಿಗೆ ಸಂಧಾನ ನಡೆಸಿ, ಅದರಲ್ಲಿ ಯಶಸ್ವಿಯೂ ಆಗಿದ್ದ ಕುಮಾರಸ್ವಾಮಿ ಇದೀಗ ವಿಶ್ವನಾಥ್ ಅವರ ಬೆಂಬಲವನ್ನೂ ಗಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಪರಸ್ಪರ ಬೈದಾಡಿಕೊಂಡಿದ್ದ ನಾಯಕರು ಇದೀಗ ಪರಸ್ಪರ ಹೊಗಳಿಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿ ಅವರು ವಿಶ್ವನಾಥ್ ಅವರನ್ನು ವಿಶ್ವಣ್ಣ ಎಂದು ಹೊಗಳಿದ್ದಾರೆ. ಇಬ್ಬರು ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಇಬ್ಬರನ್ನು ಹೊಗಳಿದ್ದಾರೆ.

Read More
Next Story