Live Updates| Loksabha Election: ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಮುಕ್ತಾಯ
x

Live Updates| Loksabha Election: ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಮುಕ್ತಾಯ


ದೇಶದಲ್ಲೆಡೆ ಇಂದು ಲೋಕಸಭೆ ಚುನಾವಣೆ 2024ರ 2ನೇ ಹಂತದ ಮತದಾನ ನಡೆಯುತ್ತಿದ್ದು, ಕರ್ನಾಟಕದಲ್ಲಿ ಇದು ಮೊದಲ ಹಂತದ ಮತದಾನವಾಗಿದೆ. ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ನಗರ ಸೇರಿ 14 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಮತದಾನ ಪ್ರಕ್ರಿಯೆಯ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಲಭ್ಯ...

Live Updates

  • 26 April 2024 4:09 AM GMT

    ರಾಜ್ಯದಲ್ಲಿ ಒಟ್ಟು ಶೇ 9.21ರಷ್ಟು ಮತದಾನ

    ರಾಜ್ಯದ 14 ಕ್ಷೇತ್ರಗಳಲ್ಲಿ ಬೆಳಗ್ಗೆ 9 ಗಂಟೆ ವರೆಗೆ ಒಟ್ಟು ಶೇ 9.21ರಷ್ಟು ಮತದಾನವಾಗಿದೆ.

    9 ಗಂಟೆವರೆಗೆ ಯಾವ ಜಿಲ್ಲೆಯಲ್ಲಿ ಎಷ್ಟಾಯ್ತು ಮತದಾನ?

    ಮಂಡ್ಯ ಜಿಲ್ಲೆಯಲ್ಲಿ ಬೆಳಗ್ಗೆ 9 ಗಂಟೆವರೆಗೆ ಶೇ 7.70 ರಷ್ಟು ಮತದಾನವಾಗಿದೆ.

    ಹಾಸನದಲ್ಲಿ ಬೆಳಗ್ಗೆ 7 ರಿಂದ 9 ಗಂಟೆವರೆಗೆ ಶೇಕಡಾ 8.2ರಷ್ಟು ಮತದಾನವಾಗಿದೆ.

    ಚಿಕ್ಕಬಳ್ಳಾಪುರದಲ್ಲಿ ಮತದಾನ ಬೆಳಗ್ಗೆ 9 ಗಂಟೆಗೆ ಶೇ 8.70 ರಷ್ಟು ಮತದಾನವಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಗ್ಗೆ 9 ಗಂಟೆವರೆಗೆ ಶೇ 12.75ರಷ್ಟು ಮತದಾನ‌ವಾಗಿದೆ.

    ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳಗ್ಗೆ 9 ಗಂಟೆವರೆಗೆ ಶೇ.11.02 ರಷ್ಟು ಮತದಾನವಾಗಿದೆ.

    ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ವ್ಯಾಪ್ತಿಯ ಮತದಾನದ ಶೇಖಡಾವಾರು ಪ್ರಮಾಣ:

    ಬೆಂಗಳೂರು ಕೇಂದ್ರದಲ್ಲಿ ಬೆಳಗ್ಗೆ 9 ಗಂಟೆವರೆಗೆ ಶೇ 8.14ರಷ್ಟು ಮತದಾನ‌ವಾಗಿದೆ.

    ಬೆಂಗಳೂರು ದಕ್ಷಿಣದಲ್ಲಿ ಬೆಳಗ್ಗೆ 9 ಗಂಟೆವರೆಗೆ ಶೇ.9.8ರಷ್ಟು ಮತದಾನ‌ವಾಗಿದೆ.

    ಬೆಂಗಳೂರು ಉತ್ತರದಲ್ಲಿ ಬೆಳಗ್ಗೆ 9 ಗಂಟೆವರೆಗೆ ಶೇ 8.64 ರಷ್ಟು ಮತದಾನ‌ವಾಗಿದೆ.


  • 26 April 2024 4:06 AM GMT

    ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರಿಂದ ಗಲಾಟೆ

    ಮಂಗಳೂರಿನ ಮತಗಟ್ಟೆಯೊಂದರ ಬಳಿ ಬಿಜೆಪಿ ಕಾರ್ಯಕರ್ತರಿಂದ ರಂಪಾಟ ನಡೆಯಿತು. ಈ ವೇಳೆ, ಪೊಲೀಸ್ ಅಧಿಕಾರಿಯನ್ನು ಬಿಜೆಪಿ ಕಾರ್ಯಕರ್ತರು ತಳ್ಳಾಡಿದರು‌. ನಂತರ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಓಡಿಸಿದರು. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಮತ ಚಲಾಯಿಸಿ ಹೊರ ಬಂದಾಗ ಈ ಘಟನೆ ನಡೆಯಿತು.

  • 26 April 2024 4:05 AM GMT

    ಮತ ಯಂತ್ರದಲ್ಲಿ ದೋಷ: ಮತದಾನಕ್ಕೆ ಅಡಚಣೆ

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಎಂಬಲ್ಲಿ ಮತ ಯಂತ್ರದಲ್ಲಿ ದೋಷಕಂಡುಬಂದು ಮತದಾನಕ್ಕೆ ಅಡಚಣೆಯಾಯಿತು. ಬೂತ್ ಸಂಖ್ಯೆ 240 ಪದ್ಯಾಣ ಕರೋಪಡಿಯಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿದೆ. ಮತಯಂತ್ರದಲ್ಲಿರುವ ಒಂದು ಬಟನ್ ಕೆಲಸ ಮಾಡದ ಹಿನ್ನೆಲೆಯಲ್ಲಿ ಮತದಾನಕ್ಕೆ ಅಡ್ಡಿಯಾಯಾಯಿತು. ಸದ್ಯ ಮತಯಂತ್ರ ಸರಿಪಡಿಸಿ ಮತದಾನ ಆರಂಭವಾಗಿದೆ.

  • 26 April 2024 4:04 AM GMT

    ಇವಿಎಂ ತಾಂತ್ರಿಕ ದೋಷದಿಂದ ಮತದಾನ ಸ್ಥಗಿತ

    ಹಾಸನ ನಗರದ ಸಂತೇಪೇಟೆಯ ಶಾಲೆಯ ಮತಗಟ್ಟೆ ಸಂಖ್ಯೆ 189 ರಲ್ಲಿ ತಾಂತ್ರಿಕ ದೋಷದಿಂದ ಮತದಾನ ಸ್ಥಗಿತಗೊಂಡಿದೆ. ಯಂತ್ರ ಸ್ಥಗಿತಗೊಂಡು ಒಂದು ಗಂಟೆ ಕಳೆದರೂ ಮತಯಂತ್ರ ಸರಿಯಾಗಿಲ್ಲ ಎಂದು ಮತದಾರರು ಆರೋಪಿಸಿದ್ದಾರೆ.

  • 26 April 2024 4:02 AM GMT

    ನಟ ಪ್ರಕಾಶ್ ರಾಜ್ ಮತದಾನ

    ಬೆಂಗಳೂರಿನ ಮತಗಟ್ಟೆಯಲ್ಲಿ ನಟ ಪ್ರಕಾಶ್ ರಾಜ್ ಮತದಾನ ಮಾಡಿದರು. ಮತ ಚಲಾಯಿಸಿದ ನಂತರ ಮಾತನಾಡಿದ ನಟ, "ನನ್ನ ಮತ ನನ್ನ ಹಕ್ಕು. ನನ್ನನ್ನು ಪ್ರತಿನಿಧಿಸುವವರನ್ನು ಆಯ್ಕೆ ಮಾಡುವ ನನ್ನ ಶಕ್ತಿಗಾಗಿ, ಸಂಸತ್ತಿನಲ್ಲಿ ಯಾರು ನನ್ನ ಧ್ವನಿ ಎತ್ತುತ್ತಾರೆಯೋ ಅವರಿಗೆ ನನ್ನ ಮತ. ನೀವು ನಂಬುವ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ನಾನು ನಂಬಿದ ಅಭ್ಯರ್ಥಿಗೆ ಮತ್ತು ಅವರು ತಂದ ಪ್ರಣಾಳಿಕೆಗೆ ಮತ್ತು ಬದಲಾವಣೆಗಾಗಿ ನಾನು ಮತ ಹಾಕಿದ್ದೇನೆ. ಏಕೆಂದರೆ ಕಳೆದ ದಶಕದಿಂದ ನಾವು ದ್ವೇಷ ಮತ್ತು ವಿಭಜನೆಯ ರಾಜಕೀಯವನ್ನು ನೋಡುತ್ತಿದ್ದೇವೆʼʼ ಎಂದರು.

  • 26 April 2024 3:31 AM GMT

    ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ರಿಂದ ಮತದಾನ

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಿನ ಬಿಇಎಸ್ ಕಾಲೇಜು ಮತಗಟ್ಟೆಯಲ್ಲಿ ಮತದಾನ ಮಾಡಿದರು.

  • 26 April 2024 3:13 AM GMT

    94 ವರ್ಷದ ನಿವೃತ್ತ ಏರ್ ಮಾರ್ಷಲ್ ಪಿ ವಿ ಅಯ್ಯರ್‌ರಿಂದ ಮತದಾನ

    1929 ರಲ್ಲಿ ಜನಿಸಿರುವ 94 ವರ್ಷದ ಹಿರಿಯ ನಾಗರಿಕರಾದ ನಿವೃತ್ತ ಏರ್ ಮಾರ್ಷಲ್ ಪಿ ವಿ ಅಯ್ಯರ್ ಅವರು ಇಂದು ಬೆಂಗಳೂರಿನಲ್ಲಿಂದು ಮತ ಚಲಾಯಿಸಿದರು. ಎಲ್ಲರೂ ಮತದಾನ ಕೇಂದ್ರಕ್ಕೆ ತೆರಳಿ ಹಕ್ಕು ಚಲಾಯಿಸಿ ಎಂದು ಸಂದೇಶ ನೀಡಿದರು.

  • 26 April 2024 2:59 AM GMT

    ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್‌ರಿಂದ ಮತದಾನ

    ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಇಂದು ಬೆಂಗಳೂರಿನ ಉತ್ತರ ಲೋಕಸಭಾ ವ್ಯಾಪ್ತಿಯ ಜಕ್ಕೂರಿನ‌ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ: 141 ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

  • 26 April 2024 2:56 AM GMT

    ಜಿಲ್ಲಾ ಚುನಾವಣಾಧಿಕಾರಿ ಮತ್ತು ಮುಖ್ಯ ಆಯುಕ್ತರಿಂದ ಮತದಾನ:

    ಸಾರ್ವತ್ರಿಕ ಲೋಕಸಭಾ ಚುನಾವಣೆ ಅಂಗವಾಗಿ ಜಿಲ್ಲಾ ಚುನಾವಣಾಧಿಕಾರಿ ಮತ್ತು ಬಿಬಿಎಂಪಿಯ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಹಾಗೂ ಪತ್ನಿಯಾದ ಶ್ರೀಮತಿ ಮನಿಕಾ ಗಿರಿ ನಾಥ್ ರವರು ಇಂದು ಬೆಳಗ್ಗೆ 7.40ಕ್ಕೆ ಜಕ್ಕೂರು ಮಾದರಿ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.

  • 26 April 2024 2:54 AM GMT

    ಕೊಡಗು ಜಿಲ್ಲೆಯಲ್ಲಿ ಬಿರುಸಿನ ಮತದಾನ

    ಮಡಿಕೇರಿ: ನಗರದಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ಆರಂಭವಾಗಿದೆ. ಇಲ್ಲಿನ ಅನೇಕ ಮತಗಟ್ಟೆಗಳಲ್ಲಿ ಮತದಾರರು ಬೆಳಿಗ್ಗೆಯ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ದೃಶ್ಯಗಳು ಕಂಡು ಬಂದವು. ಕೆಲವು ಮತಗಟ್ಟೆಗಳಲ್ಲಿ ಮತದಾರರು ಸಾಲುಗಟ್ಟಿ ನಿಂತಿದ್ದರು.

Read More
Next Story