Leopard that fell into well dies after being bitten by electric wire of pump while coming out
x

ಮೃತ ಚಿರತೆ

ಬಾವಿಗೆ ಬಿದ್ದ ಚಿರತೆ ಮೇಲಕ್ಕೆ ಬರುವಾಗ ಪಂಪ್​ನ ವಿದ್ಯುತ್​ ವೈರ್​ ಕಚ್ಚಿ ಸಾವು

ಬಾವಿಯಲ್ಲಿ ಬಿದ್ದಿದ್ದ ಚಿರತೆಯು, ಪಂಪ್‌ಗೆ ಕಟ್ಟಿದ್ದ ನೈಲಾನ್ ಹಗ್ಗ ಮತ್ತು ಪೈಪ್ ಅನ್ನು ಹಿಡಿದು ಮೇಲಕ್ಕೆ ಬರಲು ವಿಫಲ ಯತ್ನ ನಡೆಸಿದೆ. ಅದರ ಭಾರಕ್ಕೆ ಹಗ್ಗ ಮತ್ತು ಪೈಪ್ ತುಂಡಾಗಿವೆ.


ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಿನ್ನಿಗೋಳಿ ಸಮೀಪದ ಮೆನ್ನಬೆಟ್ಟು ಗ್ರಾಮದಲ್ಲಿ ಸೋಮವಾರ ದುರದೃಷ್ಟಕರ ಘಟನೆಯೊಂದು ನಡೆದಿದೆ. ಮನೆಯೊಂದರ ಬಾವಿಗೆ ಬಿದ್ದ ಚಿರತೆಯೊಂದು, ಮೇಲೆ ಬರಲು ಯತ್ನಿಸುವಾಗ ವಿದ್ಯುತ್ ತಂತಿ ಕಚ್ಚಿ ವಿದ್ಯುತ್ ಆಘಾತದಿಂದ ಸಾವನ್ನಪ್ಪಿದೆ.

ಮೆನ್ನಬೆಟ್ಟು ಗ್ರಾಮದ ನಿವಾಸಿ ರಾಬರ್ಟ್ ಎಂಬುವವರ ಮನೆಯ ಬಾವಿಯಲ್ಲಿ ಈ ಘಟನೆ ಸಂಭವಿಸಿದೆ. ಸೋಮವಾರ ಬೆಳಿಗ್ಗೆ ರಾಬರ್ಟ್ ಅವರು ತಮ್ಮ ಮನೆಯ ಬಾವಿಯ ಪಂಪ್ ಚಾಲು ಮಾಡಿದಾಗ ನೀರು ಬಂದಿಲ್ಲ. ಅನುಮಾನಗೊಂಡು ಬಾವಿಗೆ ಇಣುಕಿ ನೋಡಿದಾಗ, ಚಿರತೆಯೊಂದು ಬಿದ್ದಿರುವುದು ಕಂಡುಬಂದಿದೆ. ಅವರು ತಕ್ಷಣ ಪಂಪ್ ಸ್ವಿಚ್ ಆಫ್ ಮಾಡಿದ್ದಾರೆ.

ಬಾವಿಯಲ್ಲಿ ಬಿದ್ದಿದ್ದ ಚಿರತೆಯು, ಪಂಪ್‌ಗೆ ಕಟ್ಟಿದ್ದ ನೈಲಾನ್ ಹಗ್ಗ ಮತ್ತು ಪೈಪ್ ಅನ್ನು ಹಿಡಿದು ಮೇಲಕ್ಕೆ ಬರಲು ವಿಫಲ ಯತ್ನ ನಡೆಸಿದೆ. ಅದರ ಭಾರಕ್ಕೆ ಹಗ್ಗ ಮತ್ತು ಪೈಪ್ ತುಂಡಾಗಿವೆ. ಸ್ವಲ್ಪ ಸಮಯದ ನಂತರ, ಚಿರತೆಯು ಪಂಪ್‌ಗೆ ಸಂಪರ್ಕ ಕಲ್ಪಿಸಿದ್ದ ವಿದ್ಯುತ್ ವೈರನ್ನು ಬಾಯಿಯಲ್ಲಿ ಕಚ್ಚಿ ಹಿಡಿದುಕೊಂಡ ಪರಿಣಾಮ, ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದೆ.

Read More
Next Story