ಪ್ರಜ್ವಲ್ ಲೈಂಗಿಕ ಹಗರಣ: ತಮ್ಮ ಹೆಸರು, ದೇವೇಗೌಡ ಹೆಸರು ಬಳಸದಂತೆ ತಡೆಯಾಜ್ಞೆ ತಂದ ಕುಮಾರಸ್ವಾಮಿ
x

ಪ್ರಜ್ವಲ್ ಲೈಂಗಿಕ ಹಗರಣ: ತಮ್ಮ ಹೆಸರು, ದೇವೇಗೌಡ ಹೆಸರು ಬಳಸದಂತೆ ತಡೆಯಾಜ್ಞೆ ತಂದ ಕುಮಾರಸ್ವಾಮಿ


ಸಂಸದ ಪ್ರಜ್ವಲ್ ರೇವಣ್ಣನ ಲೈಂಗಿಕ ದೌರ್ಜನ್ಯ ಮತ್ತು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಇಡೀ ಕುಟುಂಬವೇ ಮುಜುಗರಕ್ಕೀಡಾಗಿದ್ದು, ಇದೀಗ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಾಗೂ ಹೆಚ್‌ಡಿಕೆ ಹೆಸರು ಬಳಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದೆ.

ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಅನಾವಶ್ಯಕವಾಗಿ ತಮ್ಮ ಹೆಸರನ್ನು ಎಳೆದು ತರಲಾಗುತ್ತಿದೆ, ಹೆಚ್ ಡಿ ದೇವೇಗೌಡರ ಹೆಸರನ್ನು ಕೂಡ ಉಲ್ಲೇಖಿಸಲಾಗುತ್ತಿದೆ. ಇದರಿಂದ ದೇವೇಗೌಡರು ಬಹಳ ನೊಂದಿದ್ದಾರೆ. ಹೀಗಾಗಿ ತಮ್ಮ ಹೆಸರನ್ನು ಈ ಪ್ರಕರಣದ ವಿಚಾರವಾಗಿ ಸುದ್ದಿ ಪ್ರಸಾರ ಮಾಡುವಾಗ ಅವರುಗಳ ಹೆಸರು ಬಳಸದಂತೆ ಹೆಚ್‌ಡಿಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.

ಅಶ್ಲೀಲ ವಿಡಿಯೋ ಕೇಸ್‌ಗೂ ತಮಗೂ ಸಂಬಂಧವಿಲ್ಲ ಎಂದು ಅನೇಕ ಬಾರಿ ಮಾಧ್ಯಮದ ಮುಂದೆ ಹೆಚ್‌ಡಿಕೆ ಹೇಳಿದ್ದರೂ ಕೂಡ, ಅವರ ಹಾಗೂ ದೇವೇಗೌಡರ ಹೆಸರನ್ನು ಬಳಸಲಾಗುತ್ತಿದೆ. ಇನ್ನುಮುಂದೆ ಅವರ ಹೆಸರು ಬಳಸದಂತೆ ಸೆಷನ್ಸ್ ಕೋರ್ಟ್ ಸೂಚನೆ ನೀಡಿದೆ.

Read More
Next Story