ಗ್ಯಾರಂಟಿ ಯೋಜನೆ ಶಕ್ತಿʼಗಾಗಿ  ಪ್ರಶಸ್ತಿ ಗೆದ್ದ  ಕೆಎಸ್‌ಆರ್‌ಟಿಸಿ
x
ಕೆಎಸ್‌ಆರ್‌ಟಿ ಬಸ್‌ಗೆ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

ಗ್ಯಾರಂಟಿ ಯೋಜನೆ "ಶಕ್ತಿʼಗಾಗಿ ಪ್ರಶಸ್ತಿ ಗೆದ್ದ ಕೆಎಸ್‌ಆರ್‌ಟಿಸಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್ ಬ್ರ್ಯಾಂಡಿಂಗ್, ಶಕ್ತಿ ಯೋಜನೆ ಮತ್ತು ನೌಕರರ ಕಲ್ಯಾಣಕ್ಕಾಗಿ ಹಲವಾರು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದೆ.


Click the Play button to hear this message in audio format

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್ ಬ್ರ್ಯಾಂಡಿಂಗ್, ಶಕ್ತಿ ಯೋಜನೆ ಮತ್ತು ನೌಕರರ ಕಲ್ಯಾಣಕ್ಕಾಗಿ ಹಲವಾರು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದೆ. ಕೆ ಎಸ್ ಆರ್ ಟಿ ಸಿ ರಾಷ್ಟ್ರದ ಮಟ್ಟದ 8 ವೀಡಿಯಾ - ViDEA, 5 ಎಮ್ಕ್ಯೂಬ್ - mCUBE ಮತ್ತು 2 ಸ್ಕಾಚ್ ಆರ್ಡರ್ ಆಫ್ ಮೆರಿಟ್ ಮತ್ತು 1 ಸ್ಕಾಚ್ ಪ್ರಶಸ್ತಿಗಳಿಗೆ ಭಾಜನವಾಗಿದೆ ಎಂದು ತನ್ನ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದೆ.

ಈ ವಿಭಾಗಗಳಲ್ಲಿ ವಿಡಿಯಾ ಪ್ರಶಸ್ತಿಗಳು ಲಭಿಸಿವೆ

1. ಪಲ್ಲಕ್ಕಿ ಬ್ರಾಂಡಿಂಗ್ ಗಾಗಿ ಪ್ರಾಡಕ್ಟ್ ಪ್ಲೇಸ್ಮೆಂಟ್‌ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್.

2. ಅಶ್ವಮೇಧ ಬ್ರಾಂಡಿಂಗ್ ಗಾಗಿ ಕಡಿಮೆ ಬಜೆಟ್ ಮಾರ್ಕೆಟಿಂಗ್ ಕ್ಯಾಂಪೇನ್ (ಆಫ್ಲೈನ್) ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್.

3. ಶಕ್ತಿ ಯೋಜನೆಗೆ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಪಾರಂಪರಿಕ ಮಾಧ್ಯಮ ಪ್ರಚಾರಕ್ಕಾಗಿ ಅತ್ಯುತ್ತಮ ವೀಡಿಯೊ ಕಂಟೆಂಟ್.

4. ಅಶ್ವಮೇಧ ಬ್ರಾಂಡಿಂಗ್ ಗಾಗಿ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಬಹುಮಾಧ್ಯಮ ಪ್ರಚಾರಕ್ಕಾಗಿ ಅತ್ಯುತ್ತಮ ವೀಡಿಯೊ ಕಂಟೆಂಟ್.

5. ಪಲ್ಲಕ್ಕಿ ಬ್ರಾಂಡಿಂಗ್ ಗಾಗಿ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಡಿಜಿಟಲ್ ಕ್ಯಾಂಪೇನ್ ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್.

6. ಅಂಬಾರಿ ಉತ್ಸವದ ಬ್ರಾಂಡಿಂಗ್ ಗಾಗಿ ಇನ್ಸ್ಟಾಗ್ರಾಮ್ ಕ್ಯಾಂಪೇನ್‌ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್.

7. ಅಶ್ವಮೇಧ ಬ್ರಾಂಡಿಂಗ್ ಗಾಗಿ ಮೊಬೈಲ್ ಮಾರ್ಕೆಟಿಂಗ್ ಕ್ಯಾಂಪೇನ್ - ಒಟ್ಟಾರೆ ಅತ್ಯುತ್ತಮ ವೀಡಿಯೊ ಕಂಟೆಂಟ್.

8. ಶ್ರೇಷ್ಠ ವೀಡಿಯೊ ಕಂಟೆಂಟ್ ಬ್ರಾಂಡ್ಸ್ ಎಂಟರ್ಪ್ರೈಸ್ -ಕೆ ಎಸ್ ಆರ್ ಟಿ ಸಿ.

ಎಮ್ಕ್ಯೂಬ್ ಪ್ರಶಸ್ತಿ ಗಳು ಈ ಕೆಳಕಂಡ ವಿಭಾಗಗಳಲ್ಲಿ

1. ಬ್ರಾಂಡಿಂಗ್ ಗಾಗಿ ಶ್ರೇಷ್ಠ ಪಿಆರ್ ಕ್ಯಾಂಪೇನ್.

2. ಬ್ರಾಂಡಿಂಗ್ ಗಾಗಿ ಕಡಿಮೆ ಬಜೆಟ್ ಮಾರ್ಕೆಟಿಂಗ್ ಕ್ಯಾಂಪೇನ್ (ಆಫ್ಲೈನ್).

3. ಪ್ರವಾಸ ಮತ್ತು ಪ್ರಯಾಣದ ಶ್ರೇಷ್ಠ ಎಟಿಎಲ್ ಕ್ಯಾಂಪೇನ್.

4. ಶಕ್ತಿ ಯೋಜನೆಗಾಗಿ ಶ್ರೇಷ್ಠ ಬ್ರಾಂಡ್ ಕಂಟೆಂಟ್.

5. ಬ್ರಾಂಡಿಂಗ್ ಗಾಗಿ ಶ್ರೇಷ್ಠ ಆನ್ಲೈನ್ ಪಿಆರ್ ಕ್ಯಾಂಪೇನ್.

ನಿಗಮವು ಸಾರಿಗೆ ಸಂಜೀವಿನಿ- ನೌಕರರ ಹೃದಯ ರೋಗ ತಪಾಸಣೆಗಾಗಿ ಮತ್ತು ರಸ್ತೆ ಸುರಕ್ಷತೆ ಉಪಕ್ರಮ ಗಳಿಗಾಗಿ 2 ಸ್ಕೋಚ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಗಳನ್ನು ಮತ್ತು 1 ಸ್ಕೋಚ್ ಪ್ರಶಸ್ತಿಯನ್ನು ಪಡೆದಿದೆ. ViDEA ಪ್ರಶಸ್ತಿ ಮತ್ತು mCUBE ಪ್ರಶಸ್ತಿಗಳನ್ನು ಗುರುಗಾಂವ್ ನಲ್ಲಿ ಪ್ರದಾನ ಮಾಡಲಾಯಿತು. ಸ್ಕೋಚ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಗಳನ್ನು ಆನ್ ಲೈನ್ ನಲ್ಲಿ ಪ್ರದಾನ ಮಾಡಲಾಯಿತು. ಸ್ಕೋಚ್ ಪ್ರಶಸ್ತಿ ಸಮಾರಂಭವು 2024 ಸೆಪ್ಟೆಂಬರ್ 21ರಂದು ನವದೆಹಲಿಯಲ್ಲಿ ನಡೆಯಲಿದೆ.

Read More
Next Story