KSRTC-BMTC Bus Strike |  ಬಿಎಂಟಿಸಿ ಬಸ್‌ ಸೇವೆ ಅಭಾದಿತ; ರಸ್ತೆಗಿಳಿದ ಶೇ 97 ರಷ್ಟು ಬಸ್‌ಗಳು
x
ಬಿಎಂಟಿಸಿ ಬಸ್‌ ಸೇವೆ ಎಂದಿನಂತೆ ಇತ್ತು

KSRTC-BMTC Bus Strike | ಬಿಎಂಟಿಸಿ ಬಸ್‌ ಸೇವೆ ಅಭಾದಿತ; ರಸ್ತೆಗಿಳಿದ ಶೇ 97 ರಷ್ಟು ಬಸ್‌ಗಳು

ನಗರದ ಮೆಜೆಸ್ಟಿಕ್‌ನಲ್ಲಿ ಕೆಎಸ್ಆರ್‌ಟಿಸಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಆದರೆ, ಬಿಎಂಟಿಸಿ ಬಸ್‌ಗಳು ಶೇ 97 ರಷ್ಟು ಸಂಚಾರದಲ್ಲಿ ತೊಡಗಿಸಿಕೊಂಡಿವೆ. 3121 ಬಿಎಂಟಿಸಿ ಬಸ್‌ಗಳ ಪೈಕಿ 3040 ಬಸ್‌ಗಳು ಕಾರ್ಯಾಚರಿಸುತ್ತಿವೆ.


ರಾಜ್ಯ ಸಾರಿಗೆ ನಿಗಮಗಳ ನೌಕರರ ಮುಷ್ಕರಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಕೆಎಸ್ಆರ್‌ಟಿಸಿ ಬಸ್‌ಗಳು ರಸ್ತೆಗಿಳಿಯದೇ ಮುಷ್ಕರದಲ್ಲಿ ಪಾಲ್ಗೊಂಡರೆ, ಬಿಎಂಟಿಸಿ ಬಸ್‌ಗಳ ಸೇವೆ ಅಭಾದಿತವಾಗಿದೆ.

ನಗರದ ಮೆಜೆಸ್ಟಿಕ್‌ನಲ್ಲಿ ಕೆಎಸ್ಆರ್‌ಟಿಸಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಆದರೆ, ಬಿಎಂಟಿಸಿ ಬಸ್‌ಗಳು ಶೇ 97 ರಷ್ಟು ಸಂಚಾರದಲ್ಲಿ ತೊಡಗಿಸಿಕೊಂಡಿವೆ. 3121 ಬಿಎಂಟಿಸಿ ಬಸ್‌ಗಳ ಪೈಕಿ 3040 ಬಸ್‌ಗಳು ಕಾರ್ಯಾಚರಿಸುತ್ತಿವೆ. ದೂರದ ಊರುಗಳಿಗೆ ಪ್ರಯಾಣಿಸುವವರು ಕೆಎಸ್ಆರ್‌ಟಿಸಿ ಬಸ್‌ಗಳಿಲ್ಲದೇ ಪರದಾಡುತ್ತಿದ್ದ ದೃಶ್ಯಗಳು ಮೆಜೆಸ್ಟಿಕ್‌ನಲ್ಲಿ ಕಂಡು ಬಂದವು. ಆದರೆ, ಬೆಂಗಳೂರು ವ್ಯಾಪ್ತಿಯಲ್ಲಿ ಕಚೇರಿ ಕೆಲಸಗಳಿಗೆ ಹೋಗುವವರಿಗೆ ಎಲ್ಲಾ ಮಾರ್ಗಗಳಲ್ಲಿ ಬಿಎಂಟಿಸಿ ಬಸ್‌ಗಳು ಸೇವೆ ಒದಗಿಸಿವೆ.

ಬಹುತೇಕ ಜಿಲ್ಲೆಗಳಲ್ಲಿ ಸ್ಥಳೀಯ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಹೊರ ಜಿಲ್ಲೆಗಳಿಗೆ ಹೋಗುವವರಿಗೆ ಮಾತ್ರ ಸಮಸ್ಯೆಯಾಗಿದೆ.

ಶೇ 97 ರಷ್ಟು ಬಿಎಂಟಿಸಿ ಬಸ್ ಸೇವೆ

ಬಿಎಂಟಿಸಿ ಬಸ್‌ಗಳು ಮಂಗಳವಾರ ಬೆಳಿಗ್ಗೆ 9 ರ ಹೊತ್ತಿಗೆ ಪೂರ್ಣ ಪ್ರಮಾಣದಲ್ಲಿ ರಸ್ತೆಗೆ ಇಳಿದಿದ್ದವು. ಪೂರ್ವ ವಿಭಾಗದಲ್ಲಿ ಶೇ98, ಪಶ್ಚಿಮ ವಿಭಾಗದಲ್ಲಿ ಶೇ 99, ಉತ್ತರ ವಿಭಾಗದಲ್ಲಿ ಶೇ 98, ದಕ್ಷಿಣ ವಿಭಾಗದಲ್ಲಿ ಶೇ 98, ಈಶಾನ್ಯ ವಿಭಾಗದಲ್ಲಿ ಶೇ100, ವಾಯವ್ಯ ವಿಭಾಗದಲ್ಲಿ ಶೇ 92, ಕೇಂದ್ರ ವಿಭಾಗದಲ್ಲಿ ಶೇ100 ರಷ್ಟು ಬಿಎಂಟಿಸಿ ಬಸ್ಗಳು ಕಾರ್ಯಾಚರಣೆಗೆ ಇಳಿದಿವೆ.

Read More
Next Story