ಕೊಪ್ಪಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬರ್ಬರ ಹತ್ಯೆ; ಹಳೆಯ ದ್ವೇಷದಿಂದ ಕೊಲೆ?
x

ಕೊಪ್ಪಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬರ್ಬರ ಹತ್ಯೆ; ಹಳೆಯ ದ್ವೇಷದಿಂದ ಕೊಲೆ?

ವೆಂಕಟೇಶ್ ಅವರು ತಮ್ಮ ಸ್ನೇಹಿತನೊಂದಿಗೆ ದೇವಿ ಕ್ಯಾಂಪ್ ಪ್ರದೇಶದಲ್ಲಿ ರಾತ್ರಿ ಊಟ ಮುಗಿಸಿ ಗಂಗಾವತಿಗೆ ಬೈಕ್‌ನಲ್ಲಿ ವಾಪಸಾಗುತ್ತಿದ್ದಾಗ ಟಾಟಾ ಇಂಡಿಕಾ ಕಾರಿನಲ್ಲಿ ಬಂದ ಏಳೆಂಟು ಮಂದಿ ದುಷ್ಕರ್ಮಿಗಳು ಬೈಕ್‌ಗೆ ಗುದ್ದಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.


ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ (31) ಅವರನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆಗೈದಿರುವ ಘಟನೆ ಮಂಗಳವಾರ ಮಧ್ಯರಾತ್ರಿ ನಡೆದಿದೆ.

ವೆಂಕಟೇಶ್ ಅವರು ತಮ್ಮ ಸ್ನೇಹಿತರೊಂದಿಗೆ ದೇವಿ ಕ್ಯಾಂಪ್ ಪ್ರದೇಶದಲ್ಲಿ ರಾತ್ರಿ ಊಟ ಮುಗಿಸಿ ಗಂಗಾವತಿಗೆ ಬೈಕ್‌ನಲ್ಲಿ ವಾಪಸ್ ಬರುತ್ತಿದ್ದಾಗ ಟಾಟಾ ಇಂಡಿಕಾ ಕಾರಿನಲ್ಲಿ ಬಂದ ಏಳೆಂಟು ಮಂದಿ ದುಷ್ಕರ್ಮಿಗಳು ಬೈಕ್‌ಗೆ ಗುದ್ದಿ, ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ.

ಘಟನೆಯ ವೇಳೆ ಜೊತೆಯಲ್ಲಿದ್ದ ರಾಮು ಎಂಬುವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಮೃತ ವೆಂಕಟೇಶ್ ಅವರ ಸ್ನೇಹಿತ ರಾಮು, “ದುಷ್ಕರ್ಮಿಗಳು ಏಕಾಏಕಿ ದಾಳಿ ಮಾಡಿದರು. ನನ್ನನ್ನು ಬೆದರಿಸಿ ಓಡಿಸಿದರು” ಎಂದು ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ಧಿ, ಡಿವೈಎಸ್ಪಿ ಸಿದ್ದನಗೌಡ ಪಾಟೀಲ್, ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಪರಿಶೀಲನೆ ನಡೆಸಿತು. ಮೇಲ್ನೋಟಕ್ಕೆ ಇದೊಂದು ಗುಂಪು ದಾಳಿಯಾಗಿದ್ದು, ಹಳೆಯ ದ್ವೇಷವೇ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಹಳೆ ವೈಷಮ್ಯವೇ ಕಾರಣ?

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಹಾಗೂ ರವಿ ಎಂಬುವರ ಮಧ್ಯೆ ಕಳೆದ ಏಳೆಂಟು ವರ್ಷಗಳಿಂದ ವೈಮನಸ್ಸಿತ್ತು. ನಾಯಕತ್ವದ ವಿಚಾರವಾಗಿಯೂ ಇಬ್ಬರ ಮಧ್ಯೆ ತೀವ್ರ ಭಿನ್ನಾಭಿಪ್ರಾಯ ಎದುರಾಗಿತ್ತು. ಇದೇ ದ್ವೇಷದಿಂದ ರವಿ ಮತ್ತು ಆತನ ಗುಂಪು ಕೊಲೆ ಎಸಗಿರಬಹುದು ಎಂದು ಶಂಕಿಸಲಾಗಿದೆ. ಹತ್ಯೆ ನಂತರ ದುಷ್ಕರ್ಮಿಗಳು ಬಳಸಿದ ಟಾಟಾ ಇಂಡಿಕಾ ಕಾರು ಗಂಗಾವತಿಯ ಹೆಚ್ಆರ್‌ಎಸ್ ಕಾಲೊನಿಯಲ್ಲಿ ಪತ್ತೆಯಾಗಿದೆ. ಪೊಲೀಸರು ವಾಹನ ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Read More
Next Story