ಟಿ-20 ಕ್ರಿಕೆಟ್ ವಿಶ್ವಕಪ್ನಲ್ಲಿ ಕೆಎಂಎಫ್| ಸ್ಕಾಟ್ಲೆಂಡ್ ಜೆರ್ಸಿ ಮೇಲೆ ಕನ್ನಡದ ʼನಂದಿನಿʼ!
ಈ ಬಾರಿ ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್ ಜೆರ್ಸಿಯಲ್ಲಿ ನಂದಿನಿ ಲೋಗೋ ಕಾಣಸಿಗಲಿದೆ. ಸದ್ಯ ನಂದಿನಿ ಲೋಗೋ ಇರುವ ಅಧಿಕೃತ ಜೆರ್ಸಿಯನ್ನು ಸ್ಕಾಟ್ಲೆಂಡ್ ಬಿಡುಗಡೆ ಮಾಡಿದೆ. ಈ ಬಗ್ಗೆ ಅಧಿಕೃತವಾಗಿ ಸ್ಕಾಟ್ಲೆಂಡ್ ಕ್ರಿಕೆಟ್ ಸಂಸ್ಥೆ X ನಲ್ಲಿ ಜೆರ್ಸಿ ಫೋಟೋ ಜೊತೆಗೆ ಮಾಹಿತಿ ಹಂಚಿಕೊಂಡಿದೆ. ಜೆರ್ಸಿಯ ಭುಜ ಮೇಲೆ ಕೆಎಂಎಫ್ ಲೋಗೋ ರಾರಾಜಿಸುತ್ತಿದ್ದು, ಕನ್ನಡದಲ್ಲೂ ನಂದಿನಿ ಎಂದು ಬರೆದಿರುವ ಲೋಗೋ ಕಾಣಬಹುದು!
ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳವು (ಕೆಎಂಎಫ್) ಮುಂಬರುವ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಕಾಟ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳ ಜೊತೆ ಪ್ರಾಯೋಜಕತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.
ಹಾಗಾಗಿ ಈ ಬಾರಿ ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್ ಜೆರ್ಸಿಯಲ್ಲಿ ನಂದಿನಿ ಲೋಗೋ ಕಾಣಸಿಗಲಿದೆ. ಸದ್ಯ ನಂದಿನಿ ಲೋಗೋ ಇರುವ ಅಧಿಕೃತ ಜೆರ್ಸಿಯನ್ನು ಸ್ಕಾಟ್ಲೆಂಡ್ ಬಿಡುಗಡೆ ಮಾಡಿದೆ. ಈ ಬಗ್ಗೆ ಅಧಿಕೃತವಾಗಿ ಸ್ಕಾಟ್ಲೆಂಡ್ ಕ್ರಿಕೆಟ್ ಸಂಸ್ಥೆ X ನಲ್ಲಿ ಜೆರ್ಸಿ ಫೋಟೋ ಜೊತೆಗೆ ಮಾಹಿತಿ ಹಂಚಿಕೊಂಡಿದೆ. ಜೆರ್ಸಿಯ ಭುಜ ಮೇಲೆ ಕೆಎಂಎಫ್ ಲೋಗೋ ರಾರಾಜಿಸುತ್ತಿದ್ದು, ಕನ್ನಡದಲ್ಲೂ ನಂದಿನಿ ಎಂದು ಬರೆದಿರುವ ಲೋಗೋ ಕಾಣಬಹುದು.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ʻʻಮಲೇಷಿಯಾ, ವಿಯೆಟ್ನಾಂ, ಸಿಂಗಾಪುರ, ಅಮೇರಿಕಾ, ದುಬೈ, ಯುಎಇ ಮುಂತಾದ ರಾಷ್ಟ್ರಗಳಲ್ಲಿ ಹೆಸರುವಾಸಿಯಾಗಿರುವ ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ಈಗ T20 ವಿಶ್ವಕಪ್ ಪಂದ್ಯಕೂಟದಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಪ್ರಾಯೋಜಕತ್ವ ಪಡೆದಿದೆ. ರಾಜ್ಯದ ಉತ್ಕೃಷ್ಟ ಗುಣಮಟ್ಟದ ಹಾಲಿನ ಉತ್ಪನ್ನಗಳು ಮತ್ತು ನಾಡಿನ ರೈತರ ಶ್ರಮವೆರಡನ್ನೂ ವಿಶ್ವಕ್ಕೆ ಪರಿಚಯಿಸುವ ಸಂಕಲ್ಪ ನಮ್ಮದು. ನಂದಿನಿಯನ್ನು ಜಾಗತಿಕ ಬ್ರಾಂಡ್ ಆಗಿ ರೂಪಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ. ಈ ಬಾರಿ ವಿಶ್ವಕಪ್ನಲ್ಲಿ ರಾರಾಜಿಸಲಿದೆ ನಂದಿನಿ, ಕಂಗೊಳಿಸಲಿದೆ ಕನ್ನಡʼʼ ಎಂದು ಬರೆದುಕೊಂಡಿದ್ದಾರೆ.
ಈ ಕುರಿತಂತೆ ಮನಿ ಕಂಟ್ರೋಲ್ ಜೊತೆಗೆ ಮಾತನಾಡಿರುವ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ಅವರು, ʻʻಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಎರಡು ತಿಂಗಳಿಗೆ ಪ್ರಾಯೋಜಿಕತ್ವ ವಹಿಸಲು ನಾವು ಏಪ್ರಿಲ್ 20 ರಂದು ITW ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ಗೆ ವರ್ಕ್ ಆರ್ಡರ್ ನೀಡಲಾಗಿದೆ. ತಂಡದ ಜರ್ಸಿಯಲ್ಲಿ ನಂದಿನಿ ಲೋಗೋ ಇರಲಿದೆ. ಎಡಗೈ ಬ್ಯಾಟ್ಸ್ಮನ್ಗಳಿಗೆ ಬಲಗೈ ಮತ್ತು ಬಲಗೈ ಬ್ಯಾಟ್ಸ್ಮನ್ಗಳಿಗೆ ಎಡಗೈ ಜೆರ್ಸಿ ಮೇಲೆ ನಂದಿನಿ ಲೋಗೋ ಇರಲಿದೆ. ಎರಡು ತಂಡಗಳು ನಮ್ಮ ಜಾಹೀರಾತುಗಳು, ಸೋಶಿಯಲ್ ಮೀಡಿಯಾ ಕ್ಯಾಂಪೇನ್, ಫೋಟೋ ಶೂಟ್ ಮತ್ತು ನಮ್ಮ ಉತ್ಪನ್ನಗಳನ್ನು ಲೋಗೋ ಇರಲಿದೆ. ಇದನ್ನು ನಾವು ಪಂದ್ಯಾವಳಿಯ ಸಮಯದಲ್ಲಿ ಪ್ರಸಾರ ಮಾಡುತ್ತೇವೆ. ಇದು ಕರ್ನಾಟಕದ ಪ್ರತಿಯೊಬ್ಬರಿಗೂ ಹೆಮ್ಮೆಯ ಕ್ಷಣವಾಗಲಿದೆʼʼ ಎಂದು ತಿಳಿಸಿದ್ದಾರೆ.
''ಗುಜರಾತ್ನ ಅಮೂಲ್, ಈ ಹಿಂದೆ ನೆದರ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನದ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡಿತ್ತು. ಅದೇ ರೀತಿ ಕೆಎಂಎಫ್ನಿಂದ ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಂಗಳೂರು ಬುಲ್ಸ್ ತಂಡಕ್ಕೆ ಪ್ರಾಯೋಜಕತ್ವ ನೀಡಿದ್ದೆವು. ಈ ಬಾರಿ ಟಿ-20 ವಿಶ್ವಕಪ್ ಕ್ರಿಕೆಟ್ನಲ್ಲಿ ಶ್ರೀಲಂಕಾ, ದಕ್ಷಿಣ ಆಫ್ರಿಕಾ ಅಥವಾ ಅಫಘಾನಿಸ್ತಾನ ತಂಡದ ಪ್ರಾಯೋಜಕತ್ವ ಪಡೆಯಲು ಪ್ರಯತ್ನಿಸಿದ್ದೆವು. ಅಂತಿಮವಾಗಿ ಟೆಂಡರ್ನಲ್ಲಿ ಸ್ಕಾಟ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳ ಪ್ರಾಯೋಜಕತ್ವದ ಅವಕಾಶ ಸಿಕ್ಕಿತು. ಮುಂದೆ ಐಪಿಎಲ್, ವಿಶ್ವಕಪ್ ಕ್ರಿಕೆಟ್ ಹಾಗೂ ಒಲಿಂಪಿಕ್ಸ್ನಲ್ಲಿ ಪ್ರಾಯೋಜಕತ್ವ ಪಡೆಯುವ ಚಿಂತನೆಯಿದೆ'' ಎಂದು ವಿವರಿಸಿದರು.
ಜೂನ್ 01 ರಿಂದ 29 ವರೆಗೂ ವೆಸ್ಟ್ ಇಂಡೀಸ್ ಹಾಗೂ ಅಮೆರಿಕಾದಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಈ ಟೂರ್ನಿಯಲ್ಲಿ ಭಾಗಿಯಾಗುತ್ತಿರುವ ಎರಡು ತಂಡಗಳ ಜೆರ್ಸಿ ಮೇಲೆ ಕೆಎಂಎಫ್ ಲೋಗೋ ಅನಾವರಣಗೊಳ್ಳಲಿದೆ. ಅಲ್ಲದೇ ಪಂದ್ಯಾವಳಿ ಸಮಯದಲ್ಲಿ ಜಾಹೀರಾತು, ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಸಿಗಲಿದೆ. ಪರಿಣಾಮ ಜಾಗತಿಕ ಮಟ್ಟದಲ್ಲಿ ನಂದಿನಿ ಉತ್ಪನ್ನಗಳ ಪ್ರಚಾರ ಲಭ್ಯವಾಗಲಿದೆ. ಸಣ್ಣ ತಂಡಗಳೊಂದಿಗೆ ಪಾಲುದಾರಿಕೆ ಮಾಡುವ ಮೂಲಕ ಕಡಿಮೆ ವೆಚ್ಚದಲ್ಲಿ ಬ್ರ್ಯಾಂಡ್ ಮಾಡಲು ಕೆಎಂಎಫ್ ಮುಂದಾಗಿದೆ.
ದೇಶದ ಸಹಕಾರಿ ವಲಯದ ಹೈನು ಉದ್ಯಮದಲ್ಲಿ ಎರಡನೇ ಸ್ಥಾನದಲ್ಲಿರುವ ಕೆಎಂಎಫ್, ನಂದಿನಿಯನ್ನು ಗುಜರಾತ್ನ ಅಮೂಲ್ನಂತೆಯೇ ಜಾಗತಿಕ ಬ್ರ್ಯಾಂಡ್ ಆಗಿ ಪರಿವರ್ತಿಸಲು ಈ ಮಹತ್ವದ ಹೆಜ್ಜೆಯಿಟ್ಟಿದೆ. ಇದರೊಂದಿಗೆ ಅಮೂಲ್ನ ಹಾದಿಯಲ್ಲೇ ಕೆಎಂಎಫ್ ಸಾಗಿದೆ.