Ranya Rao : ರನ್ಯಾ ವಿರುದ್ಧ ಸುದ್ದಿ ಪ್ರಕಟಿಸದಂತೆ ತಡೆ ನೀಡಲು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್​ ನಿರ್ದೇಶನ
x

Ranya Rao : ರನ್ಯಾ ವಿರುದ್ಧ ಸುದ್ದಿ ಪ್ರಕಟಿಸದಂತೆ ತಡೆ ನೀಡಲು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್​ ನಿರ್ದೇಶನ

ನಟಿ ರನ್ಯಾ ರಾವ್ ಅವರನ್ನು ಬಂಧಿಸಿದ ಡಿಆರ್​ಐ ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಂತೆಯೇ ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಈ ನಡುವೆ ಅವರ ವಿರುದ್ಧ ಸುದ್ದಿಗಳನ್ನು ಪ್ರಕಟಿಸದಂತೆ ನಿರ್ದೇಶನ ನೀಡಲಾಗಿದೆ.


ಚಿನ್ನ ಕಳ್ಳ ಸಾಗಣೆ ಪ್ರಕರಣದ ಆರೋಪಿ ನಟಿ ಹರ್ಷವರ್ಧಿನಿ ರನ್ಯಾ ಮತ್ತು ಅವರ ತಂದೆ ಕರ್ನಾಟಕ ಸರ್ಕಾರದ ಡಿಜಿಪಿ ದರ್ಜೆಯ ಅಧಿಕಾರಿ ಕೆ. ರಾಮಚಂದ್ರ ರಾವ್ ಅವರ ವಿರುದ್ಧ ಸುಳ್ಳು ಮತ್ತು ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಅಥವಾ ಪ್ರಕಟಿಸುವುದನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್​ ನಿರ್ದೇಶನ ನೀಡಿದೆ.

ನಟಿ ರನ್ಯಾ ರಾವ್ ಅವರನ್ನು ಬಂಧಿಸಿದ ಡಿಆರ್​ಐ ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಂತೆಯೇ ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಈ ನಡುವೆ ಅವರ ವಿರುದ್ಧ ಸುದ್ದಿಗಳನ್ನು ಪ್ರಕಟಿಸದಂತೆ ನಿರ್ದೇಶನ ನೀಡಲಾಗಿದೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ರನ್ಯಾ ರಾವ್ ಬಳಿಯಿಂದ 12.56 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡ ಬಳಿಕ ಈ ಪ್ರಕರಣ ಸಂಚಲನ ಮೂಡಿಸಿದೆ. ತನಿಖೆ ಮುಂದುವರಿಯುತ್ತಿರುವಂತೆ ನಾನಾ ರೀತಿಯ ವಿಷಯಗಳು ಬಹಿರಂಗಗೊಳ್ಳುತ್ತಿವೆ. ಈ ನಡುವೆ ಇಂಥ ಸುದ್ದಿಗಳನ್ನು ಪ್ರಕಟಿಸದಂತೆ ಹೇಳಲು ಕೋರ್ಟ್​ ನಿರ್ದೇಶನ ನೀಡಿದೆ.

ರನ್ಯಾ ಶೋಧನೆ ನಡೆಸಿದ ಡಿಆರ್​ಐ ಅಧಿಕಾರಿಗಳು 2 .06 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು ಮತ್ತು 2.67 ಕೋಟಿ ರೂಪಾಯಿ ಪತ್ತೆ ಮಾಡಿದ್ದರು.

ರನ್ಯಾ ತಾಯಿಯಿಂದ ಅರ್ಜಿ

ಮಾರ್ಚ್ 12ರಂದು, ರನ್ಯಾ ರಾವ್ ಅವರ ತಾಯಿ ಎಚ್.ಪಿ. ರೋಹಿಣಿ ಅವರು ಸಿವಿಲ್ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಜೂನ್ 2ರವರೆಗೆ ನಟಿಯ ವಿರುದ್ಧ ಯಾವುದೇ ಹೇಳಿಕೆಗಳನ್ನು ಪ್ರಕಟಿಸದಂತೆ ಮಾಧ್ಯಮಗಳಿಗೆ ತಡೆ ನೀಡುವ ಏಕಪಕ್ಷೀಯ ಆದೇಶ ನೀಡಲಾಗಿತ್ತು. ನಂತರ, ಆಕೆಯ ತಂದೆ ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಹೈಕೋರ್ಟ್ ಅದೇ ರೀತಿ ನಿರ್ದೇಶನ ಹೊರಡಿಸಿತ್ತು.

ನಿರ್ದೇಶನಗಳ ಹೊರತಾಗಿಯೂ ಕೆಲವು ಮಾಧ್ಯಮಗಳು ಸಂವೇದನಾಶೀಲ ಮತ್ತು ಹಾನಿಕಾರಕ ವಿಷಯಗಳನ್ನು ಪ್ರಕಟಿಸುವುದನ್ನು ಮುಂದುವರಿಸಿವೆ ಎಂದು ಕುಟುಂಬವು ವಾದಿಸಿದೆ. ತನಿಖೆಯ ಬಗ್ಗೆ ವಸ್ತುನಿಷ್ಠವಾಗಿ ವರದಿ ಮಾಡುವ ಬದಲು ಚಾರಿತ್ರ್ಯ ಹರಣ ಮಾಡುತ್ತಿವೆ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ದರ್ಶನ್​ ಕೇಸ್​ ಮುಂದಿಟ್ಟು ವಾದ ಮಂಡನೆ

ವಿಚಾರಣೆಯ ಸಂದರ್ಭದಲ್ಲಿ, ನಟ ದರ್ಶನ್ ತೂಗುದೀಪ ಆರೋಪಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್‌ನ ಹಿಂದಿನ ನಿರ್ದೇಶನವನ್ನು ಸ್ಮರಿಸಲಾಯಿತು. ಆ ವೇಳೆ ಮಾಧ್ಯಮ ಸಂಸ್ಥೆಗಳಿಗೆ, ಸುದ್ದಿ ಪ್ರಸಾರ ಮಾಡುವಾಗ ಸಂಯಮ ಕಾಯ್ದುಕೊಳ್ಳಲು ಹೇಳಲಾಗಿತ್ತು.

ಅರ್ಜಿಯಲ್ಲಿ ಪ್ರತಿವಾದಿಗಳಾಗಿ ಹೆಸರಿಸಲಾದ ಎಲ್ಲಾ ಮಾಧ್ಯಮ ಸಂಸ್ಥೆಗಳಿಗೆ ಹೈಕೋರ್ಟ್ ತುರ್ತು ನೋಟಿಸ್ ನೀಡಿದೆ. ಮುದ್ರಣ, ಎಲೆಕ್ಟ್ರಾನಿಕ್, ಆಡಿಯೋ ಮತ್ತು ದೃಶ್ಯ ಮಾಧ್ಯಮಗಳ ಪ್ರಸಾರಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಪ್ರಕರಣಗಳನ್ನು ನಿರ್ವಹಿಸುವಾಗ ಕೇಂದ್ರ ತನಿಖಾ ಸಂಸ್ಥೆಗಳು ಅನುಸರಿಸಬೇಕಾದ ಮುನ್ನೆಚ್ಚರಿಕೆಗಳು ಜಾರಿ ಮಾಡುವಂತೆ ಸೂಚಿಸಲಾಗಿದೆ. ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 8 ಕ್ಕೆ ನಿಗದಿಪಡಿಸಲಾಗಿದೆ.

Read More
Next Story