ಸಿಎಂ ಸೋಷಿಯಲ್‌ ಮೀಡಿಯಾ ನಿರ್ವಹಣೆ | ʼದಿ ಪಾಲಿಸಿ ಫ್ರಂಟ್‌ʼಗೆ ಮಾಸಿಕ 54 ಲಕ್ಷ
x

ಸಿಎಂ ಸೋಷಿಯಲ್‌ ಮೀಡಿಯಾ ನಿರ್ವಹಣೆ | ʼದಿ ಪಾಲಿಸಿ ಫ್ರಂಟ್‌ʼಗೆ ಮಾಸಿಕ 54 ಲಕ್ಷ

ಹಿಂದಿನ ಮುಖ್ಯಮಂತ್ರಿಗಳು ವೆಚ್ಚ ಮಾಡುತ್ತಿದ್ದ ಮಾಸಿಕ 2 ಕೋಟಿ ರೂ.ಗೆ ಹೋಲಿಸಿದರೆ, ಸಿದ್ದರಾಮಯ್ಯ ಅವರು ಖರ್ಚು ಮಾಡಿದ್ದು ಕಡಿಮೆ ಎಂದು ಅಧಿಕಾರಿಗಳು ಹೇಳಿದ್ದಾರೆ


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಅಧಿಕೃತ ಮತ್ತು ವೈಯಕ್ತಿಕವಾಗಿ ನಿರ್ವಹಿಸಲು ಪ್ರತಿ ತಿಂಗಳು ಸುಮಾರು 54 ಲಕ್ಷ ರೂ. ವೆಚ್ಚವಾಗುತ್ತಿದೆ ಎಂದು ಆರ್‌ಟಿಐ ಅರ್ಜಿಗೆ ಉತ್ತರಿಸಲಾಗಿದೆ.

ಆರ್‌ಟಿಐ ಕಾರ್ಯಕರ್ತ ಮಾರಲಿಂಗಗೌಡ ಮಾಲಿ ಪಾಟೀಲ್, ರಾಜ್ಯದಲ್ಲಿ ಹಣದ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿ ರುವ ಸಮಯದಲ್ಲಿ ಈ ʼಭಾರೀʼ ವೆಚ್ಚದ ಬಗ್ಗೆ ತಿಳಿದುಬಂದ ನಂತರ ವಿವರ ಕೇಳಿ ಅರ್ಜಿ ಹಾಕಿದೆ ಎಂದು ಹೇಳಿದ್ದಾರೆ.

ಹೋಲಿಸಿದರೆ ಕಡಿಮೆ ಖರ್ಚು

ವೆಚ್ಚವನ್ನು ದೃಢೀಕರಿಸಿದ ಅಧಿಕಾರಿಗಳು, ಸಿದ್ದರಾಮಯ್ಯ ಅವರು ಖರ್ಚು ಮಾಡಿರುವುದು ಹಿಂದಿನ ಮುಖ್ಯಮಂತ್ರಿಗಳು ಖರ್ಚು ಮಾಡಿದ್ದ 2 ಕೋಟಿ ರೂ.ಗಿಂತ ಕಡಿಮೆ ಎಂದು ಹೇಳಿದ್ದಾರೆ.

ಸರ್ಕಾರಿ ಸ್ವಾಮ್ಯದ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ ಪ್ರಕಾರ, ಮುಖ್ಯಮಂತ್ರಿಗಳ ಕಚೇರಿಯು 2023 ಅಕ್ಟೋಬರ್ 25 ರಿಂದ ಮಾರ್ಚ್ 2024 ರವರೆಗೆ ಸುಮಾರು 3 ಕೋಟಿ ರೂ. ಖರ್ಚು ಮಾಡಿದೆ. ಅಂದರೆ, ಜಿಎಸ್‌ಟಿ ಸೇರಿದಂತೆ ಮಾಸಿಕ ಸುಮಾರು 53.9 ಲಕ್ಷ ರೂ.

ʼದಿ ಪಾಲಿಸಿ ಫ್ರಂಟ್ʼ ಎಂಬ ಖಾಸಗಿ ಕಂಪನಿ ಸಿದ್ದರಾಮಯ್ಯ ಅವರ ಖಾತೆಗಳನ್ನು ನಿರ್ವಹಿಸುತ್ತಿದ್ದು ಆ ತಂಡದಲ್ಲಿ ಸುಮಾರು 35 ಜನ ಇದ್ದಾರೆ ಎಂದೂ ಮಾಹಿತಿ ನೀಡಲಾಗಿದೆ.

Read More
Next Story