SSLC exams to begin from March 8, 2nd PUC exams to begin from April 25
x
ಸಾಂದರ್ಭಿಕ ಚಿತ್ರ

ಮಾರ್ಚ್‌ 8ರಿಂದ ಎಸ್‌ಎಸ್‌ಎಲ್‌ಸಿ, ಏಪ್ರಿಲ್‌ 25ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ

ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳು ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರು ತಮ್ಮ ಶಾಲಾ ಹಾಗೂ ಕಾಲೇಜುಗಳ ʼಪ್ರಕಟಣಾ ಫಲಕʼದಲ್ಲಿ ವೇಳಾಪಟ್ಟಿಯನ್ನು ಪ್ರಕಟಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ.


Click the Play button to hear this message in audio format

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮಾರ್ಚ್‌ 8ರಿಂದ ಏಪ್ರಿಲ್‌ 1ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದು, ಏಪ್ರಿಲ್‌ 25ರಿಂದ ಮೇ 9ರವರೆಗೂ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ ಎಂದು ಮಂಡಳಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರುಗಳು ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರು ತಮ್ಮ ಶಾಲಾ ಹಾಗೂ ಕಾಲೇಜುಗಳ ʼಪ್ರಕಟಣಾ ಫಲಕʼದಲ್ಲಿ ವೇಳಾಪಟ್ಟಿಯನ್ನು ಪ್ರಕಟಿಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನಾಂಕದ ಕುರಿತು ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ.

ಎಸ್‌ಎಸ್‌ಎಲ್‌ಸಿ ವೇಳಾಪಟ್ಟಿ

ಮಾರ್ಚ್‌ 18: ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ (NCERT), ಸಂಸ್ಕೃತ

ಮಾರ್ಚ್‌ 23: ರಂದು ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ

ಮಾರ್ಚ್‌ 25: ಇಂಗ್ಲೀಷ್‌, ಕನ್ನಡ

ಮಾರ್ಚ್‌ 28: ಗಣಿತ, ಸಮಾಜಶಾಸ್ತ್ರ

ಮಾರ್ಚ್‌ 30: ತೃತೀಯ ಭಾಷೆ ಹಿಂದಿ (NCERT) ಕನ್ನಡ, ಇಂಗ್ಲೀಷ್‌, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ ಎನ್‌ಎಸ್‌ಕ್ಯೂಎಫ್ ವಿಷಯಗಳಾದ ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್, ಬ್ಯೂಟಿ ಅಂಡ್ ವೆಲ್‌ನೆಸ್, ಅಪರೆಲ್ ಮೇಡ್ ಅಪ್ಸ್ ಮತ್ತು ಹೋಮ್ ಫರ್ನಿಷಿಂಗ್‌, ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್‌ ವೇ‌ರ್

ಏಪ್ರಿಲ್‌ 1: ಎಲಿಮೆಂಟ್ಸ್ ಆಫ್ ಎಲೆಕ್ಟಿಕಲ್ ಇಂಜಿನಿಯರಿಂಗ್- IV, ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಇಂಜಿನಿಯರಿಂಗ್-IV, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್-IV , ಪ್ರೋಗ್ರಾಮಿಂಗ್ ಇನ್ ANSI 'C' ,ಅರ್ಥಶಾಸ್ತ್ರ

ಏಪ್ರಿಲ್‌ 2: ಸಮಾಜ ವಿಜ್ಞಾನ

ದ್ವೀತಿಯ ಪಿಯುಸಿ ವೇಳಾಪಟ್ಟಿ

ಏಪ್ರಿಲ್‌ 25: ಕನ್ನಡ, ಅರೇಬಿಕ್

ಏಪ್ರಿಲ್‌ 27: ಐಚ್ಛಿಕ ಕನ್ನಡ, ತರ್ಕ ಶಾಸ್ತ್ರ, ಲೆಕ್ಕ ಶಾಸ್ತ್ರ ಜೀವಶಾಸ್ತ್ರ

ಏಪ್ರಿಲ್‌ 28: ರಾಜ್ಯ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ

ಏಪ್ರಿಲ್‌ 29: ಗಣಿತ, ಗೃಹವಿಜ್ಞಾನ, ಮೂಲ ಗಣಿತ

ಏಪ್ರಿಲ್‌ 30: ಅರ್ಥ ಶಾಸ್ತ್ರ

ಮೇ 2: ಇತಿಹಾಸ, ರಸಾಯನ ಶಾಸ್ತ್ರ

ಮೇ 4: ಇಂಗ್ಲೀಷ್‌

ಮೇ 5:ಹಿಂದಿ

ಮೇ 6: ವ್ಯವಹಾರ ಅಧ್ಯಯನ, ಭೌತ ಶಾಸ್ತ್ರ, ಶಿಕ್ಷಣ ಶಾಸ್ತ್ರ

ಮೇ 7: ಸಂಖ್ಯಾ ಶಾಸ್ತ್ರ, ಸಮಾಜಶಾಸ್ತ್ರ

ಮೇ 8: ಭೂಗೋಳ ಶಾಸ್ತ್ರ, ಮನಃಶಾಸ್ತ್ರ, ಭೂಗರ್ಭ ಶಾಸ್ತ್ರ

ಮೇ 9: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಎಲೆಕ್ಟ್ರಾನಿಕ್ಸ್ ಮತ್ತು ಯಂತ್ರಾಂಶ, ಹಿಂದೂಸ್ತಾನಿ ಸಂಗೀತ, ಉಡುಪುಗಳ ತಯಾರಿಕೆ ಮತ್ತು ಗೃಹೋಪಯೋಗಿ ವಸ್ತುಗಳು, ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಬ್ಯೂಟಿ ಅಂಡ್ ವೆಲ್‌ನೆಸ್ ವಿಷಯಗಳಿಗೆ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Read More
Next Story