ಕಾರ್ಗಿಲ್ ವಿಜಯ್ ದಿವಸ್: ಸೈನಿಕರ ಅಪ್ರತಿಮ ಧೈರ್ಯ ಸ್ಮರಿಸಿದ ಪ್ರಧಾನಿ ಮೋದಿ
x

ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ

https://thefederal.com/category/news/kargil-vijay-diwas-reminder-of-unparalleled-courage-of-our-soldiers-pm-modi-198740

ಕಾರ್ಗಿಲ್ ವಿಜಯ್ ದಿವಸ್: ಸೈನಿಕರ ಅಪ್ರತಿಮ ಧೈರ್ಯ ಸ್ಮರಿಸಿದ ಪ್ರಧಾನಿ ಮೋದಿ

1999 ರಲ್ಲಿ ಪಾಕಿಸ್ತಾನಿ ಪಡೆಗಳು ಕಾಶ್ಮೀರ ಮತ್ತು ಲಡಾಖ್ ನಡುವಿನ ಸಾರಿಗೆ ಸಂಪರ್ಕವನ್ನು ಕಡಿತಗೊಳಿಸುವ ಗುರಿಯೊಂದಿಗೆ ಕಾರ್ಗಿಲ್‌ನ ಪರ್ವತಗಳಲ್ಲಿನ ಕಾರ್ಯತಂತ್ರದ ಸ್ಥಾನಗಳನ್ನು ರಹಸ್ಯವಾಗಿ ಆಕ್ರಮಿಸಿಕೊಂಡಿದ್ದವು.


1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆ ವಿಜಯ ಸಾಧಿಸಿದ ಪ್ರಯುಕ್ತ 26 ನೇ ಕಾರ್ಗಿಲ್ ವಿಜಯ್ ದಿವಸ್‌ ವಾರ್ಷಿಕೋತ್ಸವದಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸೈನಿಕರ ಅಪ್ರತಿಮ ಧೈರ್ಯ ಹಾಗೂ ಶೌರ್ಯವನ್ನು ಶ್ಲಾಘಿಸಿದ್ದಾರೆ.

ಎರಡು ದಿನಗಳ ಮಾಲ್ಡೀವ್ಸ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು, ಭಾರತೀಯ ಸೈನಿಕರು ತಮ್ಮ ಪ್ರಾಣ ಪಣಕ್ಕಿಟ್ಟು ಪಾಕಿಸ್ತಾನದ ಮೇಲೆ ವಿಜಯ ಸಾಧಿಸುವ ಮೂಲಕ ರಾಷ್ಟ್ರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಮಾತೃಭೂಮಿಗಾಗಿ ಪ್ರಾಣಾರ್ಪಣೆ ಮಾಡಿದ ಯೋಧರ ಮನೋಭಾವವು ಪ್ರತಿ ಪೀಳಿಗೆಗೂ ಸ್ಫೂರ್ತಿ ನೀಡಲಿದೆ. ಈ ಸಂಘರ್ಷದಲ್ಲಿ 540 ಕ್ಕೂ ಹೆಚ್ಚು ಭಾರತೀಯ ಸೈನಿಕರು ಹುತಾತ್ಮರಾದರು. ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡರು ಎಂದು ಸ್ಮರಿಸಿದರು.

ಭಾರತದ ಆಪರೇಷನ್ ವಿಜಯ್

1999 ರಲ್ಲಿ ಪಾಕಿಸ್ತಾನಿ ಪಡೆಗಳು ಕಾಶ್ಮೀರ ಮತ್ತು ಲಡಾಖ್ ನಡುವಿನ ಸಾರಿಗೆ ಸಂಪರ್ಕ ಕಡಿತಗೊಳಿಸುವ ಗುರಿಯೊಂದಿಗೆ ಕಾರ್ಗಿಲ್‌ ಶಿಖರದ ಕೆಲವು ಜಾಗಗಳನ್ನು ರಹಸ್ಯವಾಗಿ ಆಕ್ರಮಿಸಿಕೊಂಡಿದ್ದವು. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತವು 'ಆಪರೇಷನ್ ವಿಜಯ್' ಕಾರ್ಯಾಚರಣೆ ಪ್ರಾರಂಭಿಸಿ, ಒಳನುಗ್ಗಿದ್ದ ಪಾಕಿಸ್ತಾನಿ ಯೋಧರನ್ನು ಹೊರಹಾಕುವಲ್ಲಿ ಯಶಸ್ವಿಯಾಯಿತು.

ಆ ಸಮಯದಲ್ಲಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಯಾಗಿದ್ದ ಬಿಜೆಪಿ ಅಧಿಕಾರದಲ್ಲಿತ್ತು. ಸುಮಾರು ಮೂರು ತಿಂಗಳ ಕಾಲ ನಡೆದ ಈ ಸಂಘರ್ಷದಲ್ಲಿ ಭಾರತೀಯ ಸೇನೆಯು ಅಪ್ರತಿಮ ಶೌರ್ಯ ಪ್ರದರ್ಶಿಸಿತು.

ಮದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದ ಗೋಡೆಗಳ ಮೇಲೆ ಪ್ರತಿಯೊಬ್ಬ ಹುತಾತ್ಮ ಸೈನಿಕನ ಹೆಸರನ್ನು ಕೆತ್ತಲಾಗಿದೆ. ಇದು ಹುತಾತ್ಮರಾದ ವೀರರಿಗೆ ಗೌರವ ಸಲ್ಲಿಸುವ ಸಂಕೇತವಾಗಿದೆ. ಶನಿವಾರ ರಾಷ್ಟ್ರಪತಿ ದ್ರೌಪದಿ ಮುರ್ಮು, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹುತಾತ್ಮ ಸೈನಿಕರ ಕುಟುಂಬಗಳು ಹಾಗೂ ಜನಸಾಮಾನ್ಯರು ಸ್ಮಾರಕಕ್ಕೆ ಭೇಟಿ ನೀಡಿ ನಮಿಸಿದರು.

Read More
Next Story