ಕವಿ, ಅನುವಾದಕ ಲಕ್ಕೂರು ಸಿ ಆನಂದ ಇನ್ನಿಲ್ಲ
x

ಕವಿ, ಅನುವಾದಕ ಲಕ್ಕೂರು ಸಿ ಆನಂದ ಇನ್ನಿಲ್ಲ


ಕನ್ನಡದ ಪ್ರಮುಖ ಕವಿ ಮತ್ತು ಅನುವಾದಕ ಲಕ್ಕೂರು ಸಿ ಆನಂದ ಅವರು ಸೋಮವಾರ(ಮೇ 20) ನಿಧನರಾಗಿದ್ದಾರೆ.

ಮೂಲತಃ ಕೋಲಾರ ಜಿಲ್ಲೆಯ ಲಕ್ಕೂರು ಗ್ರಾಮದವರಾದ ಆನಂದ ಅವರು ಕನ್ನಡದ ಮೂರನೇ ತಲೆಮಾರಿನ ದಲಿತ- ಬಂಡಾಯ ಕವಿಗಳಲ್ಲಿ ಪ್ರಮುಖರಾಗಿದ್ದರು. ಮಾತೃಭಾಷೆ ತೆಲುಗು ಆದರೂ, ಕನ್ನಡ ಸಾಹಿತ್ಯದಲ್ಲಿ ಕವಿಯಾಗಿ, ವಿಮರ್ಶಕರಾಗಿ ಮತ್ತು ಅನುವಾದಕರಾಗಿ ಅವರು ಹೆಸರು ಮಾಡಿದ್ದರು.

ಈವರೆಗೆ ಐದು ಕವನ ಸಂಕಲನ, ಐದು ಅನುವಾದಿತ ಕೃತಿಗಳು ಮತ್ತು ಮಾತಂಗ ಮಾದಿಗರ ಸಂಸ್ಕೃತಿಯ ಕುರಿತ ಒಂದು ಸಂಶೋಧನಾ ಪ್ರಬಂಧವನ್ನು ಪ್ರಕಟಿಸಿದ್ದರು. ಅವರ ಎಲ್ಲಾ ಕೃತಿಗಳು ಸಾಹಿತ್ಯ ವಲಯದಲ್ಲಿ ವ್ಯಾಪಕ ಚರ್ಚೆ ಮತ್ತು ಪ್ರಶಂಸೆಗೆ ಒಳಗಾಗಿದ್ದವು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ, ಆಂಧ್ರದ ಶ್ರೀ ಶ್ರೀ ಕಾವ್ಯ ಪುರಸ್ಕಾರ, ದೆಹಲಿ ದಲಿತ ಸಾಹಿತ್ಯ ಪರಿಷತ್‌ ಪ್ರಶಸ್ತಿ, ದು ನಿ ಬೆಳಗಲಿ ಪ್ರಶಸ್ತಿ, ವಿಭಾ ಸಾಹಿತ್ಯ ಪ್ರಶಸ್ತಿ, ಕಡೆಂಗೊಡ್ಲು ಶಂಕರಭಟ್ಟ ಪ್ರಶಸ್ತಿ, ಡಾ ತಿಪ್ಪೇರುದ್ರಸ್ವಾಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ- ಪುರಸ್ಕಾರಗಳು ಆನಂದ ಅವರನ್ನು ಅರಸಿಬಂದಿದ್ದವು.

Read More
Next Story