ಪೂರ್ಣಾವಧಿ ನ್ಯಾಯಾಧೀಶರಾಗಿ ಎರಡೇ ತಾಸು! ದಾಖಲೆ ಬರೆದ ಹೈಕೋರ್ಟ್‌ ನ್ಯಾ. ಅನಿಲ್‌ ಬಿ ಕಟ್ಟಿ
x

ಪೂರ್ಣಾವಧಿ ನ್ಯಾಯಾಧೀಶರಾಗಿ ಎರಡೇ ತಾಸು! ದಾಖಲೆ ಬರೆದ ಹೈಕೋರ್ಟ್‌ ನ್ಯಾ. ಅನಿಲ್‌ ಬಿ ಕಟ್ಟಿ

ಕರ್ನಾಕದ ಹೈಕೋರ್ಟ್‌ನ ಇತಿಹಾಸದಲ್ಲಿ ಇದೊಂದು ದಾಖಲೆ ಎನ್ನಲಾಗಿದ್ದು, ಇದಕ್ಕೆ ಕಾರಣರಾದವರು ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಾಧೀಶರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನ್ಯಾಯಮೂರ್ತಿ ಅನಿಲ್‌ ಭೀಮಸೇನ್‌ ಕಟ್ಟಿಯವರು.


ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನಲ್ಲಿ ಪೂರ್ಣಾವಧಿ ನ್ಯಾಯಾಧೀಶರಾಗಿ ಈ ನ್ಯಾಯಾಧೀಶರು ಕಲಸ ಮಾಡಿದ್ದು ಕೇವಲ ಎರಡು ತಾಸು ಮಾತ್ರ.

ಕರ್ನಾಕದ ಹೈಕೋರ್ಟ್‌ನ ಇತಿಹಾಸದಲ್ಲಿ ಇದೊಂದು ದಾಖಲೆ ಎನ್ನಲಾಗಿದ್ದು, ಇದಕ್ಕೆ ಕಾರಣರಾದವರು ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಾಧೀಶರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನ್ಯಾಯಮೂರ್ತಿ ಅನಿಲ್‌ ಭೀಮಸೇನ್‌ ಕಟ್ಟಿಯವರು. ಅವರು ಹೆಚ್ಚುವರಿ ನ್ಯಾಯಾಧೀಶರ ಹುದ್ದೆಯಿಂದ (ಅಡಿಷನಲ್‌ ಜಡ್ಜ್‌) ಪೂರ್ಣಾವಧಿ ನ್ಯಾಯಾಧೀಶ (ಪರ್ಮನೆಂಟ್‌ ಜಡ್ಜ್‌)ರಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ಏ.16 (ಮಂಗಳವಾರ) ಮಾತ್ರ.

ಯಾಕೆಂದರೆ ಅವರು ಪೂರ್ಣಾವಧಿ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದ್ದು ಅವರ ಸೇವಾ ನಿವೃತ್ತಿ ದಿನದ ಮುನ್ನಾ ದಿನದಂದು! ಈ ಹಿಂದೆ ಪೂರ್ಣಾವಧಿ ನ್ಯಾಯಾಧೀಶರನ್ನು ನೇಮಕ ಮಾಡುವ ಸುಪ್ರೀಂಕೋರ್ಟ್‌ ಕೊಲಿಜಿಯಂ ಕಟ್ಟಿಯವರನ್ನೂ ಸೇರಿದಂತೆ ಕರ್ನಾಟಕ ಹೈಕೋರ್ಟ್‌ನ ಐವರು ನ್ಯಾಯಾಧೀಶರನ್ನು ಪೂರ್ಣಾವಧಿ ನ್ಯಾಯಾಧೀಶರಾಗಿ ನೇಮಕಾತಿ ಮಾಡಿ ಆದೇಶವವನ್ನು ಏ.15ರಂದು ಪ್ರಕಟಿಸಿತ್ತು.

ಮಂಗಳವಾರ ರಾಜಭವನದಲ್ಲಿ ರಾಜ್ಯಪಾಲರಿಂದ ಐವರೂ ನ್ಯಾಯಾಧೀಶರು ಪೂರ್ಣಕಾಲಿಕ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದರು. ನ್ಯಾಯಮೂರ್ತಿಗಳಾ ಸಿ.ಎಂ. ಪೂಣಚ್ಚ, ಅನಿಲ್‌ ಕಟ್ಟಿ, ಸಿ ಎಂ ಜೋಷಿ, ಉಮೇಶ್‌ ಅಡಿಗ ಹಾಗೂ ಟಿ.ಜಿ. ಶಿವಶಂಕರೇಗೌಡ ಅವರು ಪ್ರಮಾಣವಚನ ಸ್ವೀಕರಿಸಿದರು. ಆದರೆ ನ್ಯಾ. ಕಟ್ಟಿಯವರ ನಿವೃತ್ತಿ ದಿನ ಮಂಗಳವಾರ (ಏ.16) ಆಗಿದ್ದರಿಂದ ಎರಡು ಗಂಟೆಗಳ ಕಾಲ ತಮ್ಮ ಪೀಠದಲ್ಲಿ ಆಸೀನರಾಗಿ ನ್ಯಾಯದಾನ ಪ್ರಕ್ರಿಯೆಯಲ್ಲಿ ಭಾಗಿಯಾದರು.

ಅವರು 1962 ಏಪ್ರಿಲ್‌ 17ರಂದು ಜನಿಸಿದ್ದು, ಈ ವರ್ಷ ಏಪ್ರಿಲ್‌ 17ರಂದು ನಿವೃತ್ತಿಯಾಗಬೇಕಿತ್ತು. ಆದರೆ ಅಂದು (ಏ.17) ಹೈಕೋರ್ಟ್‌ಗೆ ರಜೆ ಇರುವುದರಿಂದ ಮುನ್ನಾದಿನದ (ಏ.16) ಕಲಾಪದಲ್ಲಿ ಎರಡು ತಾಸು ಕಾರ್ಯ ನಿವರ್ಹಿಸಿ ಜಸ್ಟಿಸ್‌ ಕಟ್ಟಿಯವರು ನಿರ್ಗಮಿಸಬೇಕಾಯಿತು.

ಬೆಳಗಾವಿ ಮೂಲದ ಕಟ್ಟಿಯವರು ಬೆಳಗಾವಿಯಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ (ಅಡಿಷನಲ್‌ ಜಡ್ಜ್‌) ಆಗಿ 2022ರ ಆಗಸ್ಟ್‌ 16ರಂದು ಆಯ್ಕೆಯಾಗಿ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಬೆಳಗಾವಿಯಲ್ಲಿ ಕಾನೂನು ಪದವಿ ಪೂರೈಸಿದ್ದ ಅವರು ಸಿವಿಲ್‌ ನ್ಯಾಯಾಧೀಶರಾಗಿ, ಜಿಲ್ಲಾ ನ್ಯಾಯಾಧೀಶರಾಗಿ, ಪ್ರಧಾನ ನಗರ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದರು. ದಾವಣಗೆರೆ, ಬೆಂಗಳೂರಿನ ಕೌಟುಂಬಿಕ ನ್ಯಾಯಾಯಲದಲ್ಲಿ ನ್ಯಾಯಾಧೀಶರಾಗಿಯೂ ಕಾರ್ಯನಿರ್ವಹಿಸಿದ್ದರು. ಬಳಿಕ 2022 ರಲ್ಲಿ ಹೈಕೋರ್ಟ್‌ ಹೆಚ್ಚುವರಿ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದರು.

Read More
Next Story