ಅಲ್‌ಖೈದಾ ನಂಟು; ಬೆಂಗಳೂರಿನಲ್ಲಿ ಜಾರ್ಖಂಡ್ ಮಹಿಳೆ ಬಂಧನ
x

ಸಾಂದರ್ಭಿಕ ಚಿತ್ರ

ಅಲ್‌ಖೈದಾ ನಂಟು; ಬೆಂಗಳೂರಿನಲ್ಲಿ ಜಾರ್ಖಂಡ್ ಮಹಿಳೆ ಬಂಧನ

ನ್ಯಾಯಾಲಯದಿಂದ ವರ್ಗಾವಣೆ ಪ್ರಮಾಣ ಪತ್ರ ಪಡೆದು, ಎಟಿಎಸ್ ಅಧಿಕಾರಿಗಳು ಆಕೆಯನ್ನು ಹೆಚ್ಚಿನ ವಿಚಾರಣೆಗಾಗಿ ಗುಜರಾತ್‌ಗೆ ಕರೆದೊಯ್ದಿದ್ದಾರೆ.


ಸಾಮಾಜಿಕ ಜಾಲತಾಣಗಳಲ್ಲಿ ಅಲ್‌ಖೈದಾ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಸಾಧಿಸಿ, ಜಿಹಾದಿ ಬೋಧನೆಗಳಲ್ಲಿ ತೊಡಗಿದ್ದ ಆರೋಪದ ಮೇಲೆ ಜಾರ್ಖಂಡ್ ಮೂಲದ ಮಹಿಳೆಯನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು (ಎಟಿಎಸ್) ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಬಂಧಿತ ಮಹಿಳೆಯನ್ನು ತಬಾ ಪರ್ವೀನ್ ಎಂದು ಗುರುತಿಸಲಾಗಿದೆ. ಈಕೆ ಹೆಬ್ಬಾಳ ಸಮೀಪದ ಮನೋರಾಯನಪಾಳ್ಯದಲ್ಲಿ ನೆಲೆಸಿದ್ದಳು. ಮಂಗಳವಾರ ಬೆಳಿಗ್ಗೆ 9.30ರ ಸುಮಾರಿಗೆ ಆಕೆಯ ಮನೆಯ ಮೇಲೆ ಎಟಿಎಸ್ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಆಕೆಯಿಂದ ಲ್ಯಾಪ್‌ಟಾಪ್ ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿನ ಮೂಲಭೂತವಾದಿ ಸಂಘಟನೆಗಳ ಸಂಪರ್ಕ ಜಾಲದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾಗ ಪರ್ವೀನ್ ಕುರಿತು ಸುಳಿವು ಲಭ್ಯವಾಗಿದೆ ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಗುಜರಾತ್ ಎಟಿಎಸ್ ಪೊಲೀಸರು ಇತ್ತೀಚೆಗೆ ಅಲ್‌ಖೈದಾಕ್ಕೆ ಸೇರಿದ ಒಂದು ತಂಡವನ್ನು ಪತ್ತೆ ಹಚ್ಚಿದ್ದರು. ಆ ತಂಡದ ಸಂಪರ್ಕ ಜಾಲವನ್ನು ಪರಿಶೀಲಿಸಿದಾಗ ಪರ್ವೀನ್ ಕುರಿತು ನಿರ್ದಿಷ್ಟ ಮಾಹಿತಿ ಲಭ್ಯವಾಗಿತ್ತು. ಬಂಧನದ ನಂತರ ಪರ್ವೀನ್‌ಳನ್ನು ನಗರದ ಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯದಿಂದ ವರ್ಗಾವಣೆ ಪ್ರಮಾಣ ಪತ್ರ ಪಡೆದು, ಎಟಿಎಸ್ ಅಧಿಕಾರಿಗಳು ಆಕೆಯನ್ನು ಹೆಚ್ಚಿನ ವಿಚಾರಣೆಗಾಗಿ ಗುಜರಾತ್‌ಗೆ ಕರೆದೊಯ್ದಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಪರ್ವೀನ್ ಇಂಟರ್ನೆಟ್ ಮೂಲಕ ಅಲ್‌ಖೈದಾ ಸಂಪರ್ಕಕ್ಕೆ ಬಂದಿದ್ದಳು. ಸ್ಥಳೀಯರಲ್ಲಿ ಅಥವಾ ತನ್ನ ಕುಟುಂಬ ಸದಸ್ಯರೊಂದಿಗೆ ಆಕೆ ಹೆಚ್ಚಾಗಿ ಬೆರೆಯುತ್ತಿರಲಿಲ್ಲ. ಸ್ನೇಹಿತರೂ ಇರಲಿಲ್ಲ. ಸದಾ ಮನೆಯ ಕೋಣೆಯಲ್ಲಿ ಲ್ಯಾಪ್‌ಟಾಪ್‌ನಲ್ಲಿ ಏನೋ ಕೆಲಸ ಮಾಡುತ್ತಾ ಮೌನವಾಗಿರುತ್ತಿದ್ದಳು ಎಂದು ಸ್ಥಳೀಯರು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ.

Read More
Next Story