Foot In Mouth Statement: ಖರ್ಗೆ, ಮುನಿಯಪ್ಪ ಬಣ್ಣ ಯಾವುದು? ಜಮೀರ್‌ಗೆ ಜೆಡಿಎಸ್‌ ಪ್ರಶ್ನೆ
x

Foot In Mouth Statement: ಖರ್ಗೆ, ಮುನಿಯಪ್ಪ ಬಣ್ಣ ಯಾವುದು? ಜಮೀರ್‌ಗೆ ಜೆಡಿಎಸ್‌ ಪ್ರಶ್ನೆ

ಮಲ್ಲಿಕಾರ್ಜುನ ಖರ್ಗೆ, ಹೆಚ್‌.ಸಿ. ಮಹದೇವಪ್ಪ, ಸತೀಶ್‌ ಜಾರಕಿಹೊಳಿ, ಪ್ರಿಯಾಂಕ್‌ ಖರ್ಗೆ, ಕೆ.ಹೆಚ್. ಮುನಿಯಪ್ಪ, ಕೆ.ಜೆ. ಜಾರ್ಜ್‌, ಡಿ.ಕೆ. ಸುರೇಶ್‌ , ರಹೀಮ್‌ ಖಾನ್‌ ಅವರ ಬಣ್ಣ ಯಾವುದು? ಎಂದು ಜೆಡಿಎಸ್‌ ಪ್ರಶ್ನಿಸಿದೆ.


ಚನ್ನಪಟ್ಟಣ ವಿಧಾನಸಭೆಯ ಉಪಚುನಾವಣಾ ಪ್ರಚಾರ ಸಂದರ್ಭದಲ್ಲಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರನ್ನು "ಕಾಲಾ ಕುಮಾರಸ್ವಾಮಿ (ಕಪ್ಪು ವರ್ಣದ)" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ವಸತಿ ಹಾಗೂ ವಕ್ಫ್‌ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರನ್ನು "ವರ್ಣನಿಂದಕ, ಜನಾಂಗೀಯ ದ್ವೇಷಿ ಮಿಸ್ಟರ್‌ ಜಮೀರ್‌ʼ ಎಂದು ಟೀಕಿಸಿರುವ ಜೆಡಿಎಸ್‌ ಕಾಂಗ್ರೆಸ್‌ ನಾಯಕರ ಪಟ್ಟಿ ಮಾಡಿ, ಅವರ ಚರ್ಮದ ಬಣ್ಣ ಯಾವುದು ಎಂದು ಪ್ರಶ್ನಿಸಿದೆ.

"ನಿನ್ನನ್ನು ರಾಜಕೀಯವಾಗಿ ಬೆಳೆಸಿದ್ದ ದೇವೇಗೌಡರ ಕುಟುಂಬವನ್ನೇ ಖರೀದಿ ಮಾಡುತ್ತೇನೆ ಎನ್ನುವ ನಿನ್ನ ಅಧಿಕಾರ ಮತ್ತು ದುಡ್ಡಿನ ದರ್ಪ ಹೆಚ್ಚು ದಿನ ಉಳಿಯಲ್ಲ.. ನಿನ್ನ ಸೊಕ್ಕಿನ ಮಾತಿಗೆ, ಕಪ್ಪು ವರ್ಣದ ಬಗ್ಗೆ ನಿನಗಿರುವ ಹೊಲಸು ಮನಸ್ಥಿತಿಗೆ ರಾಜ್ಯದ ಜನರು ತಕ್ಕ ಉತ್ತರ ನೀಡುತ್ತಾರೆ," ಎಂದು ಏಕವಚನದಲ್ಲಿ ಟೀಕಿಸಿ ಜೆಡಿಎಸ್‌ ಹೇಳಿಕೆ ಬಿಡುಗಡೆ ಮಾಡಿದೆ.

ಖರ್ಗೆ ಬಣ್ಣ ಯಾವುದು?

ಕಾಂಗ್ರೆಸ್‌ ನಾಯಕರ ಹೆಸರುಗಳನ್ನು ಉಲ್ಲೇಖಿಸಿರುವ ಜೆಡಿಎಸ್‌ ಹಲವು ಮುಖಂಡರ ಬಣ್ಣ ಯಾವುದು ಎಂದು ಪ್ರಶ್ನಿಸಿದೆ. " ಕನ್ನಡಿಗರಾದ ಮಲ್ಲಿಕಾರ್ಜುನ ಖರ್ಗೆ ಅವರ ಬಣ್ಣ ಯಾವುದು ?, ಹೆಚ್‌.ಸಿ. ಮಹದೇವಪ್ಪ ಅವರ ಬಣ್ಣ ಯಾವುದು ? ಸತೀಶ್‌ ಜಾರಕಿಹೊಳಿ ಅವರ ಬಣ್ಣ ಯಾವುದು ? ಪ್ರಿಯಾಂಕ್‌ ಖರ್ಗೆ ಅವರ ಬಣ್ಣ ಯಾವುದು ? ಕೆ.ಹೆಚ್. ಮುನಿಯಪ್ಪ ಅವರ ಬಣ್ಣ ಯಾವುದು ? ಕೆ.ಜೆ. ಜಾರ್ಜ್‌ ಅವರ ಬಣ್ಣ ಯಾವುದು ? ಡಿ.ಕೆ. ಸುರೇಶ್‌ ಅವರ ಬಣ್ಣ ಯಾವುದು ? ರಹೀಮ್‌ ಖಾನ್‌ ಅವರ ಬಣ್ಣ ಯಾವುದು ?" ಎಂದು ಪಟ್ಟಿ ಮಾಡಿ ಜಮೀರ್‌ ಅವರನ್ನು ಪ್ರಶ್ನಿಸಿದೆ.

ಮನುಷ್ಯರ ಚರ್ಮ ಕಪ್ಪಾದರೇನು, ಬಿಳಿಯಾದರೇನು ? ಇಷ್ಟೊಂದು ಕೀಳು ಮನಸ್ಥಿತಿಯ ವ್ಯಕ್ತಿ ಜಮೀರ್‌ ಅಹ್ಮದ್‌ ಖಾನ್‌ ಅವರನ್ನು ಈ ಕೂಡಲೇ ಸಂಪುಟದಿಂದ ವಜಾಮಾಡಬೇಕೆಂದು ಕಾಂಗ್ರೆಸ್‌ ನಾಯಕರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವನ್ನು ಜೆಡಿಎಸ್‌ ಒತ್ತಾಯಿಸಿದೆ.

Read More
Next Story