ಧರ್ಮಸ್ಥಳ ಪ್ರಕರಣ | ಆ.16 ರಂದು 400 ಕಾರುಗಳಲ್ಲಿ ಧರ್ಮಸ್ಥಳಕ್ಕೆ ಜಾಥಾ -ವಿಶ್ವನಾಥ್‌
x

ಧರ್ಮಸ್ಥಳ ಪ್ರಕರಣ | ಆ.16 ರಂದು 400 ಕಾರುಗಳಲ್ಲಿ ಧರ್ಮಸ್ಥಳಕ್ಕೆ ಜಾಥಾ -ವಿಶ್ವನಾಥ್‌

ನಾವು ಕ್ಷೇತ್ರದ ಪರವಾಗಿ ಮಾತನಾಡಿದರೆ ಕೆಲ ಯೂಟ್ಯೂಬರ್‌ ನಮ್ಮ ವಿರುದ್ಧ ಕೆಟ್ಟ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಒಬ್ಬ ನಕಲಿ ವಕೀಲ ನನ್ನ, ಸಿಎಂ ಹಾಗೂ ಡಿಸಿಎಂ ಕುರಿತು ತಪ್ಪು ಹೇಳಿಕೆ ನೀಡುತ್ತಿದ್ದಾನೆ ಎಂದು ಎಸ್‌.ಆರ್‌.ವಿಶ್ವನಾಥ್‌ ಕಿಡಿಕಾರಿದರು.


ಧರ್ಮಸ್ಥಳದ ಕುರಿತು ಇಂತಹ ದೊಡ್ಡ ಪ್ರಮಾಣದ ಅಪಪ್ರಚಾರವನ್ನು ಸಹಿಸಲು ಸಾಧ್ಯವಿಲ್ಲ ಎಂದು ಯಲಹಂಕ ಶಾಸಕ ಎಸ್‌.ಆರ್‌. ಅಶೋಕ್‌ ಎಚ್ಚರಿಕೆ ನೀಡಿದರು.

ವಿಧಾನಸಭೆಯಲ್ಲಿ ಧರ್ಮಸ್ಥಳ ಪ್ರಕರಣದ ಕುರಿತು ಮಾತನಾಡಿದ ಅವರು, ಧರ್ಮಸ್ಥಳದ ಮಂಜುನಾಥ ಸ್ವಾಮಿ ಹಿಂದೂಗಳ ಶ್ರದ್ಧಾಕೇಂದ್ರ. ನೇತ್ರಾವತಿ ನದಿಯಲ್ಲಿ ಕಲ್ಲು ತೆಗೆದುಕೊಂಡು ಬಂದ್ರೆ ಬಸ್ ನಿಲ್ಲುತ್ತದೆ ಎಂದು ನಾನು ಚಿಕ್ಕವನಿದ್ದಾಗಿನಿಂದಲೂ ಅಪ್ಪ-ಅಮ್ಮ ಹೇಳುತ್ತಿದ್ದರು. ಅಷ್ಟು ಶಕ್ತಿಯ ದೇವರು ಮಂಜುನಾಥ ಸ್ವಾಮಿ. ಇಂತಹ ಪವಿತ್ರ ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಯುವುದನ್ನು ಹಿಂದೂಗಳು ಸಹಿಸಲ್ಲ. ಆ.16 ರಂದು 400 ಕಾರುಗಳಲ್ಲಿ ಭಗವಾಧ್ವಜದೊಂದಿಗೆ ಜಾಥಾ ನಡೆಸಲಾಗುವುದು ಎಂದು ಹೇಳಿದರು.

ನಾವು ಕ್ಷೇತ್ರದ ಪರವಾಗಿ ಮಾತನಾಡಿದರೆ ಕೆಲ ಯೂಟ್ಯೂಬರ್‌ ನಮ್ಮ ವಿರುದ್ಧ ಕೆಟ್ಟ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಒಬ್ಬ ನಕಲಿ ವಕೀಲ ನನ್ನ, ಸಿಎಂ ಹಾಗೂ ಡಿಸಿಎಂ ಕುರಿತು ತಪ್ಪು ಹೇಳಿಕೆ ನೀಡುತ್ತಿದ್ದಾನೆ. ಗೃಹಮಂತ್ರಿಗಳ ಮೇಲೆಯೇ 500 ಕೋಟಿ ರೂ.ಆರೋಪ ಮಾಡಿದ್ದಾನೆ. ಆದರೂ, ಆತನ ವಿರುದ್ಧ ಇಂದಿನವರೆಗೂ ಒಂದೇ ಒಂದು ಕೇಸ್‌ ದಾಖಲಾಗಿಲ್ಲ. ಜೈಲಿನಲ್ಲಿ ಹೊರಬಂದ ನಂತರ ಈ ನಕಲಿ ವಕೀಲನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ನನಗೆ ಅನುಮತಿ ನೀಡಿದರೆ ನಾನೇ ಬಾಯಿ ಮುಚ್ಚಿಸುತ್ತೇನೆ. ಇಲ್ಲವೇ ಸಿಎಂ ಶಿಷ್ಯರೇ ಅದನ್ನು ಮಾಡುತ್ತಾರೆ. ಆದರೆ, ನಮ್ಮ ಮೇಲೆ ಕೇಸ್‌ ಹಾಕಬಾರದು ಎಂದು ಹೇಳಿದರು.

Read More
Next Story