ಗಗನಯಾನದಲ್ಲಿ ಇಸ್ರೋದಿಂದ  ಒಂಭತ್ತು ವಿಶ್ವ ದಾಖಲೆ: ಇನ್ನೂ8-10 ದಾಖಲೆಗಳಿಗೆ ಸಜ್ಜು
x

ಗಗನಯಾನದಲ್ಲಿ ಇಸ್ರೋದಿಂದ ಒಂಭತ್ತು ವಿಶ್ವ ದಾಖಲೆ: ಇನ್ನೂ8-10 ದಾಖಲೆಗಳಿಗೆ ಸಜ್ಜು

ಇಸ್ರೋ ಸಂಸ್ಥೆಯು ಗಗನಯಾನಗಳಲ್ಲಿ ಈವರೆಗೆ ಒಂಭತ್ತುವಿಶ್ವ ದಾಖಲೆಗಳನ್ನು ಸಾಧಿಸಿದೆ. ಈ ಮೂಲಕ ವಿಶ್ವದ ಇತರೆ ಬಾಹ್ಯಾಕಾಶ ಸಂಸ್ಥೆಗಳಿಗೆ ಪ್ರಬಲ ಸ್ಪರ್ಧೆವೊಡ್ಡಿದ್ದು, ಇಸ್ರೋ ಸಂಸ್ಥೆಯು ಮೈಲುಗಲ್ಲಾಗಿದೆ.


Click the Play button to hear this message in audio format

ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿ, ಸಂಶೋಧನೆಯಲ್ಲಿ ವಿಶ್ವದ ಗಮನಸೆಳೆದಿರುವ ದೇಶದ ಇಸ್ರೋ ಸಂಸ್ಥೆಯು ಗಗನಯಾನಗಳಲ್ಲಿ ಈವರೆಗೆ ಒಂಭತ್ತುವಿಶ್ವ ದಾಖಲೆಗಳನ್ನು ಸಾಧಿಸಿದೆ. ಈ ಮೂಲಕ ವಿಶ್ವದ ಇತರೆ ಬಾಹ್ಯಾಕಾಶ ಸಂಸ್ಥೆಗಳಿಗೆ ಪ್ರಬಲ ಸ್ಪರ್ಧೆವೊಡ್ಡಿದೆ. ಹಲವು ಸಾಧನೆಗಳಿಗೆ ಇಸ್ರೋ ಸಂಸ್ಥೆಯು ಮೈಲುಗಲ್ಲಾಗಿದೆ.

ಚಂದ್ರಯಾನ ಸರಣಿ 1, 2 ಮತ್ತು 3, ಮಾರ್ಸ್ ಆರ್ಬಿಟರ್ ಮಿಷನ್ ಮತ್ತು ಕ್ರಯೋಜೆನಿಕ್ ಎಂಜಿನ್ ತಂತ್ರಜ್ಞಾನವು 2008ರಿಂದ ಸಾಧಿಸಲಾದ ಒಂಬತ್ತು ಪ್ರಮುಖ ವಿಶ್ವ ದಾಖಲೆಗಳಲ್ಲಿ ಸೇರಿವೆ. 2008 ರಲ್ಲಿ ಚಂದ್ರಯಾನ-1 ಕಾರ್ಯಾಚರಣೆಯೊಂದಿಗೆ ಚಂದ್ರನ ಮೇಲ್ಮೈ, ಉಪ-ಮೇಲ್ಮೈ ಮತ್ತು ಬಾಹ್ಯಗೋಳದಲ್ಲಿ ನೀರಿನ ಅಣುಗಳನ್ನು ಕಂಡುಹಿಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದ ಅಂತರಿಕ್ಷ ಪ್ರಯಾಣವು ಚಿಕ್ಕ ಸಾಧನಗಳಿಂದ ಆರಂಭವಾದರೂ, ಇಂದು ವಿಶ್ವದ ಅಗ್ರ ರಾಷ್ಟ್ರಗಳ ಸರದಿ ಸಾಲಿಗೆ ಬಂದು ನಿಂತಿದೆ. ವಿಶ್ವದಾಖಲೆಗಳಲ್ಲಿ ಚಂದ್ರಯಾನ ಮತ್ತು ಮಂಗಳಯಾನ ಯೋಜನೆಗಳು, ಕ್ರೈಯೋಜೆನಿಕ್ ಎಂಜಿನ್ ತಂತ್ರಜ್ಞಾನ ಮತ್ತು ಉಡಾವಣಾ ಕಾರ್ಯಕ್ಷಮತೆಯ ನವೀನತೆಗಳನ್ನು ಒಳಗೊಂಡಿವೆ.

2014 ರ ಮಾರ್ಸ್ ಆರ್ಬಿಟರ್ ಮಿಷನ್ ಮೂಲಕ, ಭಾರತವು ತನ್ನ ಮೊದಲ ಪ್ರಯತ್ನದಲ್ಲೇ ಕೆಂಪುಗ್ರಹಕ್ಕೆ ಮಿಷನ್ ಸಾಧಿಸಿದ ಮೊದಲ ದೇಶವಾಗಿದೆ. 2017 ರಲ್ಲಿ ಪಿಎಸ್ಎಲ್‌ವಿ -ಸಿ 37 ಒಂದೇ ಕಾರ್ಯಾಚರಣೆಯಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದೆ. 2019 ರಲ್ಲಿ ಚಂದ್ರಯಾನ-2 ಮಿಷನ್‌ನೊಂದಿಗೆ, ಭಾರತವು ಚಂದ್ರನ ಕಕ್ಷೆಯಲ್ಲಿ ಅತ್ಯುತ್ತಮ ಕ್ಯಾಮೆರಾ (ಆರ್ಬಿಟರ್ ಹೈ-ರೆಸಲ್ಯೂಷನ್ ಕ್ಯಾಮೆರಾ) ಹೊಂದಿದೆ. 2023 ಆ.23 ರಂದು ಚಂದ್ರಯಾನ 3 ಒಂದು ಐತಿಹಾಸಿಕ ದಿನವನ್ನು ಸೃಷ್ಟಿಸಿತು. ಇದು ಭಾರತವನ್ನು ಚಂದ್ರನ ದಕ್ಷಿಣ ಧ್ರುವದ ಬಳಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ದೇಶವನ್ನಾಗಿ ಮಾಡಿದೆ.

ಚಂದ್ರಯಾನ 3 ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಚಂದ್ರನ ಮೇಲ್ಮೈ ಮತ್ತು ಮೇಲ್ಮೈಗೆ ಸಮೀಪವಿರುವ ಪರಿಸರದ ಮೊದಲ ಸ್ಥಳ ಮಾಪನವನ್ನು ಸಾಧಿಸಿದೆ. ಇದಲ್ಲದೆ, ಡಿಸೆಂಬರ್ 2014 ಮತ್ತು ಜೂನ್ 2017 ರ ನಡುವೆ, ಭಾರತವು ಎಲ್‌ವಿಎಂ 3 ಕ್ರಯೋಜೆನಿಕ್ ಹಂತದ ಅಭಿವೃದ್ಧಿಯಲ್ಲಿ ಮೂರು ವಿಶ್ವ ದಾಖಲೆಗಳನ್ನು ಸಾಧಿಸಿದೆ. 2023ರ ಆ.23ರಂದು ಚಂದ್ರಯಾನ 3 ಐತಿಹಾಸಿಕ ದಿನವನ್ನು ಸೃಷ್ಟಿಸಿತು. ಇದು ಭಾರತವನ್ನು ಚಂದ್ರನ ದಕ್ಷಿಣ ಧ್ರುವದ ಬಳಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ದೇಶವನ್ನಾಗಿದೆ. ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಚಂದ್ರನ ಮೇಲ್ಮೈ ಮತ್ತು ಮೇಲ್ಮೈಗೆ ಸಮೀಪವಿರುವ ಪರಿಸರದ ಮೊದಲ ಸ್ಥಳವಾಗಿದೆ ಎಂಬುದು ಇಸ್ರೋ ವಿಜ್ಞಾನಿಗಳ ಅಭಿಪ್ರಾಯವಾಗಿದೆ.

28 ತಿಂಗಳುಗಳಲ್ಲಿ ಸಾಧನೆ:

ಕ್ರಯೋಜೆನಿಕ್ ಹಂತದೊಂದಿಗೆ ಎಲ್‌ವಿಎಂ 3ನ ಮೊದಲ ಹಾರಾಟವನ್ನು ಇಸ್ರೋ 28 ತಿಂಗಳುಗಳಲ್ಲಿ ಸಾಧಿಸಿದೆ. ಇತರ ದೇಶಗಳು 37 ತಿಂಗಳುಗಳಿಂದ 108 ತಿಂಗಳುಗಳವರೆಗೆ ನಡೆಸಿದೆ. ಇತರ ದೇಶಗಳಿಗೆ ಹೋಲಿಸಿದರೆ ಇಸ್ರೋ ಹಾಟ್ ಸ್ಟೇಜ್ ಪರೀಕ್ಷೆಯನ್ನು ಕಡಿಮೆ ಅವಧಿಯಲ್ಲಿ ಅಂದರೆ, 64 ದಿನಗಳಿಂದ 10 ತಿಂಗಳ ಅವಧಿಯಲ್ಲಿ ಸಾಧನೆ ಮಾಡಿದೆ. ಭಾರತೀಯ ನೆಲದಿಂದ 4 ಸಾವಿರಕ್ಕೂ ಹೆಚ್ಚು ರಾಕೆಟ್‌ಗಳಾಗಿವೆ. ದೇಶದ ಆರ್ಥಿಕತೆ ಮತ್ತು ಭದ್ರತೆಯನ್ನು ಪರಿವರ್ತಿಸುವಲ್ಲಿ ಇಸ್ರೋ ಪಾತ್ರ ಮಹತ್ವದ್ದಾಗಿದೆ. ದೇಶವನ್ನು ಜಾಗತಿಕ ಬಾಹ್ಯಾಕಾಶ ನಾಯಕನನ್ನಾಗುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.

ಒಂದೇ ಬಾರಿಗೆ 104 ಉಪಗ್ರಹಗಳು ಕಕ್ಷೆಗೆ - ಭಾರತಕ್ಕೊಂದು ಹೆಮ್ಮೆ

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 44.4 ಮೀಟರ್ ಎತ್ತರದ 320 ಟನ್ ತೂಗುವ ಭಾರತದ ಹೆಮ್ಮೆಯ ಅಂತರಿಕ್ಷ ರಾಕೆಟ್ ಪಿಎಸ್‌ಎಲ್‌ವಿ - ಸಿ- 37 ಬಾನಂಗಳಕ್ಕೆ ಚಿಮ್ಮುವ ಮೂಲಕ ಇಸ್ರೋ ವಿಶ್ವದಾಖಲೆ ಬರೆಯಿತು. ಇದು ವಿಶ್ವದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಒಂದೇ ರಾಕೆಟ್ ನಲ್ಲಿ ಒಂದೇ ಬಾರಿಗೆ 104 ಉಪಗ್ರಹಗಳನ್ನು ಅಂತರಿಕ್ಷ ಕಕ್ಷೆಗೆ ಸೇರಿಸುವ ಪ್ರಯತ್ನದಲ್ಲಿ ಇಸ್ರೋ ಯಶಸ್ವಿಯಾಯಿತು. ಈ ಹಿಂದೆ 2008 ರಲ್ಲಿ ಪಿಎಸ್‌ಎಲ್‌ವಿ - ಸಿ- 10 ರಾಕೆಟ್ ಮೊಲಕ ಇಸ್ರೋ ಒಂದೇ ಬಾರಿಗೆ 10 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿ ದಾಖಲೆ ಬರೆದಿತ್ತು. ಆದರೆ ಬಾಹ್ಯಾಂತರಿಕ್ಷದ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುವ ಅಮೆರಿಕ ಮತ್ತು ರಷ್ಯಾ ಈ ದಾಖಲೆಯನ್ನು ಮುರಿಯಿತು. ಅಮೆರಿಕ ಒಟ್ಟಿಗೆ 29 ಉಪಗ್ರಹಗಳನ್ನು ಹಾರಿಸಿದ್ದರೆ, 2014 ರಲ್ಲಿ ರಷ್ಯಾ, ಒಂದೇ ರಾಕೆಟ್ ನಲ್ಲಿ 37 ಉಪಗ್ರಹಗಳನ್ನು ಹಾರಿಸಿ ದಾಖಲೆ ಬರೆದಿತ್ತು . ಜಾಗತಿಕವಾಗಿ ದೊಡ್ಡಮಟ್ಟದ ಹೆಸರು ಮಾಡಿದ ಇಸ್ರೋ ಅತಿಹೆಚ್ಚು ಉಪಗ್ರಹಗಳನ್ನು ಒಂದೇ ರಾಕೆಟ್‌ನಲ್ಲಿ ಹಾರಿಸಿ ಹೊಸದೊಂದು ವಿಶ್ವದಾಖಲೆ ನಿರ್ಮಿಸಲು 2015 ರ ಜೂನ್ ನಲ್ಲಿ ಒಂದೇ ಬಾರಿಗೆ 23 ಉಪಗ್ರಹಗಳನ್ನು ಯಶಸ್ವಿಯಾಗಿ ಹಾರಿಸಿತ್ತು . ಬಳಿಕ ಬರೋಬ್ಬರಿ 104 ಉಪಗ್ರಹಗಳನ್ನು ಹಾರಿಸುವ ಮೂಲಕ ಅಮೋಘ ವಿಶ್ವ ದಾಖಲೆ ಬರೆಯಿತು.

ಇಸ್ರೋದ ದಾಖಲೆಗಳು :

* ಚಂದ್ರಯಾನ-1: 2008 ಅ.22 ರಂದು ಚಂದ್ರಯಾನ-1 ಉಡಾವಣೆಯಾಯಿತು. ಇದು ಚಂದ್ರನ ಮೇಲೆ ನೀರಿನ ಉಪಸ್ಥಿತಿಯನ್ನು ಪತ್ತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

* ಮಂಗಳಯಾನ : ದೇಶದ ಮೊದಲ ಅಂತರಗ್ರಹ ಕಾರ್ಯಾಚರಣೆಯಾಗಿದೆ. ಕಡಿಮೆ ಪ್ರಯತ್ನದಲ್ಲಿ ಮಂಗಳವನ್ನು ತಲುಪಿದ ಮೊದಲ ಏಷ್ಯನ್ ದೇಶವನ್ನಾಗಿ ಭಾರತ ಸಾಧನೆಗೈದಿದೆ.

* ಪಿಎಸ್‌ಎಲ್‌ವಿ ಉಡಾವಣೆ: ಇದು ದೇಶದ ವಿಶ್ವಾಸಾರ್ಹ ಉಡಾವಣಾ ವಾಹನ. 44.4 ಮೀಟರ್ ಎತ್ತರವಿರುವ ನಾಲ್ಕು ಹಂತದ PSLV ರಾಕೆಟ್ ಅನ್ನು ಬಳಸಿ, ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು.

* ಇಸ್ರೋದಿಂದ ನಿಯಂತ್ರಣ: ಬೆಂಗಳೂರಿನಲ್ಲಿರುವ ಇಸ್ರೋದಿಂದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್(ಐಎಸ್‌ಟಿಆರ್‌ಎಸಿ) ಚಂದ್ರಯಾನ-1 ರ ಟ್ರ್ಯಾಕ್ ಮತ್ತು ಕಂಟ್ರೋಲ್ ಅನ್ನು ನಿಯಂತ್ರಿಸಲಾಯಿತು.

* ಕಕ್ಷೆಯ ಹೆಚ್ಚಳ: ಚಂದ್ರಯಾನ-1 ಅನ್ನು ಭೂಮಿಯ ಸುತ್ತಲಿನ ಕಕ್ಷೆಯನ್ನು ಹೆಚ್ಚಿಸುವ ಮೂಲಕ ಉಡಾವಣೆ ಮಾಡಲಾಯಿತು. ಇದು ಚಂದ್ರನತ್ತ ನೇರ ಮಾರ್ಗವನ್ನು ಬದಲಾಯಿಸಲು ಸಹಾಯ ಮಾಡಿತು.

* ಐತಿಹಾಸಿಕ ಮಾನವ ಕಾರ್ಯಾಚರಣೆ: ರಾಕೇಶ್ ಶರ್ಮಾ ನಂತರ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಏಪ್ರಿಲ್ 2025 ರಲ್ಲಿ ಬಾಹ್ಯಾಕಾಶಕ್ಕೆ ಭೇಟಿ ನೀಡುವ ಮೂಲಕ 1984 ರ ನಂತರ ಮೊದಲ ಬಾರಿಗೆ ಭಾರತೀಯ ಗಗನಯಾತ್ರಿ ಬಾಹ್ಯಾಕಾಶ ತಲುಪಿದರು.

* ಆಕ್ಸಿಯಮ್-4 ಮಿಷನ್: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಸ್ಪೇಸ್‌ಎಕ್ಸ್‌ನ ಫಾಲ್ಕನ್-9 ರಾಕೆಟ್ ಮೂಲಕ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

* ಸಮಗ್ರ ತಂತ್ರಜ್ಞಾನ: ಇಸ್ರೋ ಸಂಸ್ಥೆಯು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಸ್ವಾವಲಂಬನೆಯನ್ನು ಸಾಧಿಸಿದೆ. ಇದು ಉಡಾವಣಾ ವಾಹನಗಳು, ಉಪಗ್ರಹಗಳು ಮತ್ತು ಸಂವಹನ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗಿದೆ.

* ಖಗೋಳಶಾಸ್ತ್ರ ಸಂಶೋಧನೆ: ಭಾರತವು ಖಗೋಳಶಾಸ್ತ್ರ ಸಂಶೋಧನೆಯಲ್ಲಿ ತನ್ನ ಕೊಡುಗೆಯನ್ನು ನೀಡಿದೆ.

8–10 ಹೊಸ ದಾಖಲೆಯತ್ತ ಇಸ್ರೋ:

ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಇಸ್ರೋ ಅಧ್ಯಕ್ಷ ವಿ.ನಾರಾಯಣನ್‌, ಎತ್ತಿನ ಬಂಡಿ ಮತ್ತು ಸೈಕಲ್‌ಗಳ ಯುಗದಿಂದ ಇಂದಿನವರೆಗಿನ ಸಂಸ್ಥೆಯ ಬಾಹ್ಯಾಕಾಶ ಕಾರ್ಯಕ್ರಮಗಳ ಪ್ರಯಾಣ ಅದ್ಭುತವಾಗಿದೆ. 2040ರ ವೇಳೆಗೆ ಮನುಷ್ಯನನ್ನು ಚಂದ್ರನ ಮೇಲೆ ಇಳಿಸುವ ಗುರಿ ಹೊಂದಿದ್ದೇವೆ. ಅಲ್ಲಿ ಭಾರತೀಯ ಧ್ವಜವನ್ನು ಸ್ಥಾಪಿಸುವ ಮೂಲಕ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಹಾದಿಯಲ್ಲಿದೆ ಎಂದು ಹೇಳಿದರು.

ಸಾಧನೆಗಳೆಲ್ಲವು ಇಸ್ರೋ ಸಂಸ್ಥೆಯ ಸಂವೇದನಾಶೀಲ ನಿರ್ವಹಣಾ ಶೈಲಿಯು ಮತ್ತು ಉನ್ನತ ತಾಂತ್ರಿಕ ಸಾಮರ್ಥ್ಯವನ್ನು ತೋರಿಸುತ್ತವೆ. ಈವರೆಗೆ ಇಸ್ರೋ 4ಸಾವಿರಕ್ಕೂ ಹೆಚ್ಚು ರಾಕೆಟ್‌ಗಳನ್ನು ಉಡಾಯಿಸಿ, 133 ಉಪಗ್ರಹಗಳನ್ನು ಕಕ್ಷೆಯಲ್ಲಿ ಸ್ಥಾಪಿಸಿದೆ. ಇದರ ಫಲವಾಗಿ ದೇಶದ ಭದ್ರತೆ, ಆರ್ಥಿಕತೆ, ತಂತ್ರಜ್ಞಾನ ಮತ್ತು ಉದ್ಯಮಶೀಲತೆ ಕ್ಷೇತ್ರಗಳಲ್ಲಿ ಹೊಸ ವೇಗ ಬಂದಿದೆ. ಇಸ್ರೋ ಮುಂದಿನ ವರ್ಷಗಳಲ್ಲಿ ಇನ್ನೂ 8–10 ಹೊಸ ಜಗತ್ತಿನ ದಾಖಲೆಗಳನ್ನು ನಿರ್ಮಿಸುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಕಾರ್ಯೋನ್ಮುಖವಾಗಿದೆ. ಚಂದ್ರನ ಮೇಲೆ ಇಳಿಸುವ ಗುರಿ ಹೊಂದಿರುವುದು ಸಹ ವಿಶ್ವ ದಾಖಲೆಗಳನ್ನು ನಿರ್ಮಿಸುವಲ್ಲಿ ಒಂದಾಗಿದೆ ಎಂದು ತಿಳಿಸಿದರು.

ಮಾನವ ಸಹಿತ ಬಾಹ್ಯಾಕಾಶ ಯೋಜನೆ

ಇಸ್ರೋ ಸಂಸ್ಥೆಯು ತನ್ನ ಮೊದಲ ಮಾನವ ಸಹಿತ ಬಾಹ್ಯಾಕಾಶ ಯೋಜನೆಗೆ ಸಿದ್ಧತೆ ಕೈಗೊಂಡಿದ್ದು, ಯೋಜನೆಯ ಭಾಗವಾಗಿ ವರ್ಷಾಂತ್ಯದ ವೇಳೆಗೆ ಮಾನವ ರಹಿತ ಗಗನನೌಕೆ ಉಡಾವಣೆ ಮಾಡಲು ತಯಾರಿ ನಡೆಸಿದೆ. ಭಾರತದ ಮೊದಲ ಮಾನವ ಸಹಿತ ಗಗನಯಾನ ಯೋಜನೆಗೆ ಸಿದ್ಧತೆಗಳು ನಡೆಯುತ್ತಿವೆ. ದೇಶದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನವು 2027ರಲ್ಲಿ ನಡೆಯಲಿದೆ. ಯೋಜನೆ ಭಾಗವಾಗಿ ವರ್ಷಾಂತ್ಯದ ವೇಳೆಗೆ ಮಾನವ ರಹಿತ ನೌಕೆ ಉಡಾವಣೆ ಮಾಡಲಾಗುವುದು. ಈ ವೇಳೆ ಮೂವರು ಗಗನಯಾತ್ರಿಗಳನ್ನು ಒಳಗೊಂಡ ರಾಕೆಟ್‌ ಉಡಾವಣೆ ಮಾಡಲಾಗುವುದು. ಗಗನಯಾನ ಯೋಜನೆ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಯೋಜನೆಯ ತಾಂತ್ರಿಕ ಕೆಲಸಗಳು ನಡೆಯುತ್ತಿವೆ. ರಾಕೆಟ್‌ನಲ್ಲಿ ಹಲವು ಸುರಕ್ಷಿತ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಬೇಕಿದೆ. ಪ್ಯಾರಾಚೂಟ್‌ ವ್ಯವಸ್ಥೆ ಸೇರಿದಂತೆ ಇತರೆ ಸೌಲಭ್ಯಗಳು ಮತ್ತು ಅವುಗಳ ಕಾರ್ಯನಿರ್ವಹಣೆ ಕುರಿತ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮೊದಲ ಮಾನವ ಸಹಿತ ಗಗನಯಾನ ಯೋಜನೆ 2027 ರ ಮೊದಲ ತ್ರೈಮಾಸಿಕದಲ್ಲಿ ಆರಂಭವಾಗಬಹುದು. ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವಾರು ಯೋಜನೆಗಳು ಮತ್ತು ಪ್ರಾದೇಶಿಕ ಸುಧಾರಣೆಗಳನ್ನು ತರಲಾಗುತ್ತಿದೆ.

ಯೋಜನೆಗೆ 7,700 ಪರೀಕ್ಷೆ

ಮಾನವಸಹಿತ ಗಗನನೌಕೆ ಉಡಾವಣೆ ಹಿನ್ನೆಲೆಯಲ್ಲಿ ಸುಮಾರು 7,700 ಪರೀಕ್ಷೆಗಳನ್ನು ನಡೆಸಲಾಗಿದೆ. ಉಳಿದ 2,300 ಪರೀಕ್ಷೆಗಳು ಮುಂದಿನ ವರ್ಷದ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿವೆ. ಗಗನಯಾನ ಯೋಜನೆಯ ಕಾರ್ಯಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಸಮಗ್ರ ಪರೀಕ್ಷೆ ಮತ್ತು ಸಾಫ್ಟ್‌ವೇರ್ ಮೌಲ್ಯೀಕರಣ ನಡೆಸುತ್ತಿದ್ದೇವೆ. ಸಂಪೂರ್ಣ ಸುರಕ್ಷತೆ ಮತ್ತು ವ್ಯವಸ್ಥೆಯ ವಿಶ್ವಾಸಾರ್ಹತೆ ಖಚಿತಪಡಿಸಿಕೊಳ್ಳಲು ಸಿಬ್ಬಂದಿಗೆ ಹಾರಾಟ ತರಬೇತಿ ನೀಡಲಾಗುತ್ತಿದೆ. ಈ ಯೋಜನೆಗೆ ಆಯ್ಕೆಯಾಗಿರುವ ನಾಲ್ವರು ಗಗನಯಾತ್ರಿಗಳನ್ನು 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದು, ಅವರ ತರಬೇತಿಯು ನಿಕಟ ಮೇಲ್ವಿಚಾರಣೆಯಲ್ಲಿ ಮುಂದುವರಿಯುತ್ತಿದೆ.

Read More
Next Story