ಇಕ್ಬಾಲ್‌ ಹುಸೇನ್‌ ವಿಡಿಯೋ ವೈರಲ್‌ | ಅಶ್ಲೀಲ ವಿಡಿಯೋ ಅಲ್ಲ, ತಂದೆ-ಮಗಳ ಸಂಬಂಧ ಎಂದ ಸಂತ್ರಸ್ತೆ
x

ಇಕ್ಬಾಲ್‌ ಹುಸೇನ್‌ ವಿಡಿಯೋ ವೈರಲ್‌ | ಅಶ್ಲೀಲ ವಿಡಿಯೋ ಅಲ್ಲ, ತಂದೆ-ಮಗಳ ಸಂಬಂಧ ಎಂದ ಸಂತ್ರಸ್ತೆ


ಶಾಸಕ ಇಕ್ಬಾಲ್‌ ಹುಸೇನ್‌ ಮತ್ತು ಯುವತಿಯ ವಾಟ್ಸಪ್‌ ವಿಡಿಯೋ ಕಾಲ್ ವೈರಲ್‌ ಆದ ಬೆನ್ನಲ್ಲೇ ರಾಮನಗರ ಮೂಲದ ಯುವತಿ ಸೆನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಎಫ್‌ಐಆರ್‌ನಲ್ಲಿ‌ ಯುವತಿ ಹೇಳಿದ್ದೇನು?

ʻʻನನ್ನ ಹಾಗೂ ಇಕ್ಬಾಲ್ ಹುಸೇನ್ ಅವರದ್ದು ತಂದೆ-ಮಗಳ ಸಂಬಂಧ. ನನ್ನ ಅವರ ವಿಡಿಯೋ ಕರೆಯನ್ನು ದುರುಪಯೋಗ ಮಾಡಲಾಗಿದೆ. ವಿಡಿಯೋ ಒಳ ಉಡುಪಿನಲ್ಲಿ ಇರುವ ಹಾಗೇ ಸೃಷ್ಟಿಸಿ ತೇಜೋವಧೆ ಮಾಡಿದ್ದಾರೆ. ತಮ್ಮಣ್ಣಗೌಡ ಗುಂಡ್ಕಲ್ ಎಂಬುವರ ಫೇಸ್​ಬುಕ್ ಖಾತೆಯಲ್ಲಿ ವಿಡಿಯೋ ವೈರಲ್ ಆಗಿದೆ. ಶಾಸಕರು ಮತ್ತು ನಾನು ಮಾತನಾಡಿರುವುದನ್ನು ತಿರುಚಲಾಗಿದೆ. ಈ ಬಗ್ಗೆ ಕ್ರಮವಹಿಸಬೇಕುʼʼ ಎಂದು ಸಂತ್ರಸ್ತೆ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸುದ್ದಿಗೆ ಗ್ರಾಸವಾದ ವಾಟ್ಸಪ್ ಕಾಲ್

ರಾಮನಗರ ಕಾಂಗ್ರೆಸ್ ಶಾಸಕ ಎಚ್‌.ಎ.ಇಕ್ಬಾಲ್ ಹುಸೇನ್ ಅವರು ಮಹಿಳೆಯೊಬ್ಬರ ಜತೆಗಿನ ವಾಟ್ಸ್‌ಆ್ಯಪ್‌ ಕಾಲ್‌ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಯೂ ಆಗಿರುವ ಮಹಿಳೆ ಜತೆ ಹುಸೇನ್ ಅವರು, ಆಪ್ತವಾಗಿ ಮಾತನಾಡುತ್ತಿರುವ 2 ನಿಮಿಷ 27 ಸೆಕೆಂಡ್‌ನ ವಿಡಿಯೊ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದೇನು?

ʻʻನಾನೇ ಮಾತನಾಡಿರುವ ವಿಡಿಯೊ ಇರಬಹುದು. ನಾನು ಗೆದ್ದಿರುವುದಕ್ಕೆ ಎದುರಾಳಿಗಳು ಈ ರೀತಿಯ ವಿಡಿಯೊ ಹರಿಬಿಟ್ಟಿದ್ದಾರೆ. ಇಂತಹವೆಲ್ಲಾ ಬರುತ್ತಿರುತ್ತವೆ. ಅದರಲ್ಲಿರುವ ಸತ್ಯಾಂಶವೇನು ಎಂದು ನೋಡುವೆ. ಪೊಲೀಸ್ ದೂರು ಸೇರಿದಂತೆ ಕಾನೂನು ಕ್ರಮ ಕುರಿತು ಇನ್ನೂ ನಿರ್ಧರಿಸಿಲ್ಲʼʼ ಎಂದು ಇಕ್ಬಾಲ್‌ ಹುಸೇನ್‌ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Read More
Next Story