IPL 2024 | ನಿರ್ಣಾಯಕ ಪಂದ್ಯದಲ್ಲಿ RCBಗೆ ಸ್ಪೋಟಕ ಬ್ಯಾಟ್ಸ್‌ಮನ್ ಮ್ಯಾಕ್ಸ್‌ವೆಲ್ ಎಂಟ್ರಿ: CSKಗೆ ನಡುಕ ಶುರು
ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಸಿಎಸ್‌ಕೆ ಗೆದ್ದರೆ ಪ್ಲೇ ಆಫ್‌ಗೆ ಎಂಟ್ರಿ ಕೊಡಲಿದೆ. ಆರ್‌ಸಿಬಿ 18 ಕ್ಕಿಂತ ಅಧಿಕ ರನ್‌ಗಳ ಅಂತರದಿಂದ ಅಥವಾ 11 ಎಸೆತ ಬಾಕಿಯಿರುವಂತೆ ಗೆದ್ದರೆ ಮಾತ್ರ ಪ್ಲೇ ಆಫ್ ಪ್ರವೇಶಿಸಲು ಸಾಧ್ಯ.
ಈ ಪಂದ್ಯ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, ಎರಡೂ ತಂಡಗಳು ಬಲಿಷ್ಟವಾಗಿವೆ. ಈ ನಿರ್ಣಾಯಕ ಪಂದ್ಯಕ್ಕೆ ಇನ್ಫಾರ್ಮ್ ಬ್ಯಾಟರ್ ವಿಲ್ ಜ್ಯಾಕ್ಸ್ ಗೈರಾಗುತ್ತಿದ್ದಾರೆ ಎನ್ನುವ ವಿಚಾರ ತಿಳಿದಾಗ ಆರ್‌ಸಿಬಿ ಅಭಿಮಾನಿಗಳಿಗೆ ಆತಂಕ ಎದುರಾಗಿತ್ತು. ಆದರೆ ಇದೀಗ ಅವರ ಜಾಗಕ್ಕೆ ಆಲ್‌ರೌಂಡರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಬರಲಿದ್ದಾರೆ. ಇದು ಆರ್‌ಸಿಬಿ ಅಭಿಮಾನಿಗಳಿಗೆ ಶುಭಸುದ್ದಿ ಅಂತಲೇ ಹೇಳಬಹುದು.
ಐಪಿಎಲ್ 2024 ರಲ್ಲಿ ಮ್ಯಾಕ್ಸ್‌ವೆಲ್ ಅವರು ಅತ್ಯುತ್ತಮ ಆಟ ಆಡಿಲ್ಲ. ಆದರೆ, ಅವರ ಕೌಶಲ್ಯ ಮತ್ತು ನಾಕೌಟ್ ಎನ್‌ಕೌಂಟರ್ ಪಂದ್ಯಗಳನ್ನು ಅನೇಕ ಬಾರಿ ಆಡಿದ ಅನುಭವ ಇದೆ. ಬೌಲಿಂಗ್‌ನಲ್ಲೂ ಸಾಕಷ್ಟು ಬಾರಿ ವಿಕೇಟ್ ಟೇಕರ್ ಆಗಿ ಮಿಂಚಿದ್ದಾರೆ, ಇದು ಆರ್‌ಸಿಬಿಗೆ ಲಾಭವಾಗಬಹುದು.
ಮ್ಯಾಕ್ಸ್‌ವೆಲ್ ಆಗಮನದಿಂದ ಸಿಎಸ್‌ಕೆ ತಂಡದಲ್ಲಿ ಆತಂಕ ಶುರುವಾಗುವುದು ಖಚಿತ. ಶನಿವಾರದ ಪಂದ್ಯದಲ್ಲಿ ಆರ್‌ಸಿಬಿ ಪರ ಸ್ಫೋಟಕ ಬ್ಯಾಟರ್ ಗ್ಲೇನ್ ಮ್ಯಾಕ್ಸ್ವೆನ್ ಆಡುವುದು ಬಹುತೇಕ ಖಚಿತ ಎನ್ನಲಾಗಿದೆ. ಇದಕ್ಕೆ ಕಾರಣ ಕೂಡ ಇದೆ. ಮಹತ್ವದ ಪಂದ್ಯದಲ್ಲಿ ಅಥವಾ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಈವರೆಗೆ ಮ್ಯಾಕ್ಸ್‌ವೆಲ್ ಅದ್ಭುತ ಪ್ರದರ್ಶನ ತೋರಿದ್ದಾರೆ. ಅಲ್ಲದೆ ಆರ್‌ಸಿಬಿಗೆ ಚೇಜಿಂಗ್ ಅವಕಾಶ ಸಿಕ್ಕರೆ ಬೇಗನೇ ಟಾರ್ಗೆಟ್ ತಲುಪಲು ಮ್ಯಾಕ್ಸ್‌ವೆಲ್ ಬಹುಮುಖ್ಯ ಪಾತ್ರವಹಿಸಲಿದ್ದಾರೆ. ಹೀಗಾಗಿ ಪ್ಲೇಯಿಂಗ್ ಇಲೆವೆನ್‌ಗೆ ಮ್ಯಾಕ್ಸಿ ಕಮ್ಬ್ಯಾಕ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.