ಒಳ ಮೀಸಲಾತಿ | ಮತ್ತೊಂದು ಆಯೋಗ ಅನಗತ್ಯ: ಮಾಜಿ ಸಚಿವ ಎ.ನಾರಾಯಣಸ್ವಾಮಿ
ಕಾಂತರಾಜ ವರದಿ ಮತ್ತು ಸದಾಶಿವ ಆಯೋಗದ ವರದಿಯ ಮಾಹಿತಿ ಆಧಾರದಲ್ಲಿ ಒಳ ಮೀಸಲಾತಿ ನೀಡಬೇಕು. ಮತ್ತೊಂದು ಆಯೋಗ ರಚನೆಯ ಅಗತ್ಯವಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಕಾಂತರಾಜ ವರದಿ ಮತ್ತು ಸದಾಶಿವ ಆಯೋಗದ ವರದಿಯ ಮಾಹಿತಿ ಆಧಾರದಲ್ಲಿ ಒಳಮೀಸಲಾತಿ ನೀಡಬೇಕು. ಮತ್ತೊಂದು ಆಯೋಗ ರಚನೆಯ ಅಗತ್ಯವಿಲ್ಲ ಎಂದು ಕೇಂದ್ರದ ಮಾಜಿ ಸಚಿವ, ಬಿಜೆಪಿ ಮುಖಂಡ ಎ.ನಾರಾಯಣಸ್ವಾಮಿ ಹೇಳಿದರು.
ಈ ಬಗ್ಗೆ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 'ಕಾಂತರಾಜ ವರದಿ ಸರ್ಕಾರದ ಬಳಿಯೇ ಇದೆ. ನಮ್ಮ ಕಣ್ಮರೆಸಲು, ಸಮಾಜದ ದಿಕ್ಕು ತಪ್ಪಿಸಲು, ಒಳ ಮೀಸಲಾತಿ ಕೊಡುವುದನ್ನು ತಪ್ಪಿಸಲು ಸರ್ಕಾರ ಹೊಸ ಆಯೋಗ ರಚನೆಗೆ ಮುಂದಾಗಿದೆ' ಎಂದರು.
ಮತ್ತೊಮ್ಮೆ ಅಂಕಿ-ಅಂಶ ಪಡೆಯಲು 8 ವರ್ಷ ಆಗಲಿದೆ. ಆ ಪದವನ್ನು ನಮ್ಮ ಮೇಲೆ ಹೇರಿ ಅದನ್ನು ತೋರಿಸಿ ಒಳ ಮೀಸಲಾತಿ ಜಾರಿಗೊಳಿಸಲು ಮುಂದಾಗಿದ್ದು, ಒಳಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್ಸಿಗೆ ಇಚ್ಛಾಶಕ್ತಿ ಇಲ್ಲವೆಂಬ ಮಾನಸಿಕತೆ ನಮಗೆ ಬಂದಿದೆ ಎಂದು ತಿಳಿಸಿದರು.
ನೀವು ತಮಿಳುನಾಡಿನ ಜನಾರ್ದನ್ ಕಮಿಷನ್ ವರದಿ, ಆಂಧ್ರದ ರಾಮಚಂದ್ರ ಆಯೋಗದ ವರದಿ, ಮಹಾರಾಷ್ಟ್ರದ ವರದಿ ತೆಗೆದರೆ ಯಾವ ಸಮಾಜ ಚಮ್ಮಾರಿಕೆ ವೃತ್ತಿಯ ಮಾದಿಗ ಸಮುದಾಯದ ಉಪ ಜಾತಿಗಳೆಲ್ಲ ಎಲ್ಲ ರಂಗಗಳಲ್ಲಿ ಹಿಂದುಳಿದಿವೆ ಎಂದರು.
Next Story