ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ; ಸಿಎಂ ತವರು ಕ್ಷೇತ್ರದಲ್ಲಿ ಬಿಗುವಿನ ವಾತಾವರಣ
x

ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಹಾನಿ ಉಂಟುಮಾಡಿದ ಕಿಡಿಗೇಡಿಗಳು 

ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ; ಸಿಎಂ ತವರು ಕ್ಷೇತ್ರದಲ್ಲಿ ಬಿಗುವಿನ ವಾತಾವರಣ

ಡಾ. ಅಂಬೇಡ್ಕರ್ ಅವರ ಫ್ಲೆಕ್ಸ್, ಕಟೌಟ್ ಗಳನ್ನು ಹರಿದು, ಸಗಣಿ ಎರಚಿ ವಿಕೃತ ಮೆರೆಯಲಾಗಿದೆ. ನೀಲಿ‌ ಧ್ವಜಗಳನ್ನು ಹರಿದು ಹಾಕಲಾಗಿದೆ. ಈ ಕೃತ್ಯದಿಂದ ರೊಚ್ಚಿಗೆದ್ದಿರುವ ಗ್ರಾಮಸ್ಥರು ಬೀದಿಗಿಳಿದಿದ್ದಾರೆ.


ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಆಚರಣೆಯ ಹಿನ್ನೆಲೆಯಲ್ಲಿ ಮೈಸೂರು ತಾಲೂಕು ವಾಜಮಂಗಲ ಗ್ರಾಮದಲ್ಲಿ ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸಗಣಿ ಬಳಿದು, ಫ್ಲೆಕ್ಸ್ ಗಳನ್ನು ಹರಿದು, ಚಪ್ಪಲಿ ಹಾರ ಹಾಕಿ, ನೀಲಿ ಧ್ವಜಗಳನ್ನು ಧ್ವಂಸಗೊಳಿಸಿ ವಿಕೃತಿ ಮೆರೆದಿರುವ ದುರ್ಘಟನೆ ನಡೆದಿದೆ.

ಶುಕ್ರವಾರ ಮಧ್ಯರಾತ್ರಿ ಈ ಕೃತ್ಯ ನಡೆದಿದ್ದು ವಾಜಮಂಗಲ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣಾ ವ್ಯಾಪ್ತಿಗೆ ಬರುವ ವಾಜಮಂಗಲದಲ್ಲಿ ಈ ಕೃತ್ಯ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.

ಏಪ್ರಿಲ್‌ 14 ರಂದು ಇಲ್ಲಿನ ಸಿದ್ಧಾರ್ಥ ಯುವಕರ ಸಂಘವು ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರ 134 ನೇ ಜಯಂತಿಯನ್ನು ಆಚರಿಸಿ, ಮೆರವಣಿಗೆ, ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಿತ್ತು.

ಈ ಹಿನ್ನೆಲೆಯಲ್ಲಿ ಅಳವಡಿಸಲಾಗಿದ್ದ ಡಾ. ಅಂಬೇಡ್ಕರ್ ಅವರ ಫ್ಲೆಕ್ಸ್, ಕಟೌಟ್ ಗಳನ್ನು ಹರಿದು, ಸಗಣಿ ಎರಚಿ ವಿಕೃತ ಮೆರೆಯಲಾಗಿದೆ. ನೀಲಿ‌ ಧ್ವಜಗಳನ್ನು ಹರಿದು ಹಾಕಲಾಗಿದೆ. ಈ ಕೃತ್ಯದಿಂದ ರೊಚ್ಚಿಗೆದ್ದಿರುವ ಗ್ರಾಮಸ್ಥರು ಬೀದಿಗಿಳಿದಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ತಹಸಿಲ್ದಾರ್ ಮಹೇಶ್ ಕುಮಾರ್ ಆಗಮಿಸಿದ್ದಾರೆ.

Read More
Next Story