Instructions to increase neutering of dogs in the West Municipal Corporation area
x

ಸಭೆಯಲ್ಲಿ ಪಶ್ಚಿಮ ಪಾಲಿಕೆ ಆಯುಕ್ತ ಕೆ.ವಿ. ರಾಜೇಂದ್ರ ಮಾತನಾಡಿದರು.

ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ ಶ್ವಾನಗಳ ಸಂತಾನಹರಣ ಚಿಕಿತ್ಸೆ ಹೆಚ್ಚಿಸಲು ಸೂಚನೆ

ಎಲ್ಲಾ ಇಲಾಖೆಗಳು ಕಾರ್ಯನಿರ್ವಣೆಯ ಕ್ಷಮತೆ ಹೆಚ್ಚಿಸಬೇಕು. ಎಡಬ್ಲ್ಯೂಬಿಐ ಮಾನದಂಡದಂತೆ ಹಾಗೂ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಯುಕ್ತ ಡಾ. ಕೆ.ವಿ. ರಾಜೇಂದ್ರ ತಿಳಿಸಿದರು.


Click the Play button to hear this message in audio format

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಪ್ರಗತಿ ಸಾಧಿಸಬೇಕು ಎಂದು ಆಯುಕ್ತ ಡಾ. ಕೆ.ವಿ. ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೋಮವಾರ(ನ.11) ಪಶುಪಾಲನಾ ವಿಭಾಗದ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಹಾಗೂ ಸರ್ವೋಚ್ಚ ನ್ಯಾಯಾಲಯದ ಬೀದಿ ನಾಯಿ ಆವಳಿ ಮೇಲಿನ ಮೊಕದ್ದಮೆಯ ಆದೇಶದ ಅನುಪಾಲನೆಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಇಲಾಖೆಗಳು ಕಾರ್ಯನಿರ್ವಣೆಯ ಕ್ಷಮತೆ ಹೆಚ್ಚಿಸಿ ಕಾರ್ಯ ಸಾಧನೆಯನ್ನು ಉತ್ತಮಗೊಳಿಸಲು ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗೂ ಎ.ಡಬ್ಲ್ಯೂ.ಬಿ.ಐ ಮಾನದಂಡದಂತೆ ಹಾಗೂ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಪಶ್ಚಿಮ ಪಾಲಿಕೆಯಲ್ಲಿವೆ 63,340 ಶ್ವಾನಗಳು

ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ 63,340 ಸಮುದಾಯ ಶ್ವಾನಗಳಿವೆ. ವಲಯಕ್ಕೆ ಒಂದರಂತೆ ಎರಡು ಎಬಿಸಿ -ಎ.ಆರ್‌.ವಿ ಕೇಂದ್ರಗಳಲ್ಲಿ ಒಟ್ಟಾರೆ 171 ಶ್ವಾನ ಸಾಮರ್ಥ್ಯದ ಕೊಠಡಿಗಳಿವೆ. 2 ಸೇವಾದಾರರ ಮುಖಾಂತರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ಒಟ್ಟಾರೆ 4,068 ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ, 27,581 ನಾಯಿಗಳಿಗೆ ಎ.ಆರ್.ವಿ ಹಾಗೂ ಸಿ.ವಿ ಲಸಿಕೆಯನ್ನು ನೀಡಲಾಗಿದೆ ಎಂದು ಮುಖ್ಯ ಪಶುವೈದ್ಯಾಧಿಕಾರಿ ಮಾಹಿತಿ ನೀಡಿದರು.

ದೀರ್ಘಕಾಲದ ನಿಗಾ ಘಟಕದಲ್ಲಿ ಇರಿಸಿರುವ ಶ್ವಾನಗಳನ್ನು ಸಾಧ್ಯವಾದಷ್ಟು ದತ್ತು ಕಾರ್ಯಕ್ರಮದಲ್ಲಿ ಸೇರಿಸುವಂತೆ ಪ್ರೋತ್ಸಾಹಿಸಬೇಕು. ಶ್ವಾನಗಳಿಗೆ ಆಹಾರ ನೀಡುವ ಸ್ಥಳಗಳನ್ನು ಗುರುತಿಸಬೇಕು. ಇಲಾಖೆಗಳ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಲುಪಿಸುವಂತೆ ತಿಳುವಳಿಕೆ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು.

ಸ್ವಚ್ಛತಾ ಅಭಿಯಾನಕ್ಕೆ ಸೂಚನೆ

ಪಶ್ಚಿಮ ನಗರ ಪಾಲಿಕೆಯ ಪ್ರಮುಖ ರಸ್ತೆಗಳು, ಮಾರುಕಟ್ಟೆಗಳು ಹಾಗೂ ವಸತಿ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಡಿಕೊಳ್ಳಬೇಕು, ಕಸದ ರಾಶಿ ಮತ್ತು 'ಬ್ಲ್ಯಾಕ್‌ಸ್ಪಾಟ್‌ʼ (ಕಸ ಸುರಿಯುವ ಸ್ಥಳ)’ ಪ್ರದೇಶಗಳನ್ನು ತಕ್ಷಣ ತೆರವುಗೊಳಿಸಬೇಕು. ಇಂದಿರಾ ಕ್ಯಾಂಟೀನ್‌ಗಳ ಸುತ್ತಮುತ್ತಲಿನಲ್ಲಿ ಸ್ವಚ್ಛತೆ ಕಾಪಾಡುವತ್ತ ವಿಶೇಷ ಗಮನ ಹರಿಸಬೇಕು. ಪೌರಕಾರ್ಮಿಕರು ಹಾಗೂ ಜೆಹೆಚ್‌ಐಗಳು ಸಕ್ರಿಯವಾಗಿ ಪಾಲ್ಗೊಂಡು ವಿಭಾಗ ಮಟ್ಟದಲ್ಲಿ ಪರಿಣಾಮಕಾರಿಯಾದ ಮೇಲ್ವಿಚಾರಣೆ ನಡೆಸಬೇಕು ಎಂದರು.

ವಾರ್ಡ್ ಸ್ವಚ್ಛ ಸರ್ವೇಕ್ಷಣ ರ‍್ಯಾಂಕಿಂಗ್

ನಗರದಲ್ಲಿ ನಿರಂತರ ಸ್ವಚ್ಛತೆ ಕಾಪಾಡಲು “ವಾರ್ಡ್ ಸ್ವಚ್ಛ ಸರ್ವೇಕ್ಷಣ ರ‍್ಯಾಂಕಿಂಗ್” ಯೋಜನೆಯನ್ನು ಪ್ರತಿ ತಿಂಗಳು ಜಾರಿಗೊಳಿಸಲಾಗುತ್ತದೆ. ವಾರ್ಡ್‌ಗಳ ಸ್ವಚ್ಛತೆ ಪ್ರಮಾಣ ಮತ್ತು ಕಾರ್ಯದಕ್ಷತೆಯ ಆಧಾರದ ಮೇಲೆ ಸ್ಟಾರ್ ರೇಟಿಂಗ್‌ಗಳು ನೀಡಲಾಗುತ್ತದೆ ಎಂದು ತಿಳಿಸಿದರು.


Read More
Next Story