ಐಎಂಎಫ್ ನಿಯೋಗದ ಸದಸ್ಯರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿದರು.
ಹಣಕಾಸಿನ ಸುಸ್ಥಿರತೆಯೊಂದಿಗೆ ಹವಾಮಾನ ಕೇಂದ್ರಿತ ನೀತಿ ಮುಂದುವರಿಸಲು ಐಎಂಎಫ್ ಸಲಹೆ
ಅಂತರರಾಷ್ಟ್ರೀಯ ಹಣಕಾಸು ನಿಧಿ ನಿಯೋಗ ತಂಡವು ಸ್ಥೂಲ ಆರ್ಥಿಕ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುವುದರೊಂದಿಗೆ ಹಣಕಾಸು ಸಚಿವಾಲಯ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಇತರ ಸರ್ಕಾರಿ ಅಧಿಕಾರಿಗಳಿಗೆ ನೀತಿ ಸಲಹೆಗಳನ್ನು ನೀಡುತ್ತದೆ.
ರಾಜ್ಯದಲ್ಲಿ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡುವುದು, ಹಣಕಾಸಿನ ಸುಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಮತ್ತು ಮಾನವ ಬಂಡವಾಳವನ್ನು ಬಲಪಡಿಸುವುದರೊಂದಿಗೆ, ಹವಾಮಾನ ಕೇಂದ್ರಿತ ನೀತಿಗಳನ್ನು ಮುಂದುವರಿಸುವಂತೆ ಐಎಂಎಫ್ ನಿಯೋಗ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿತು.
ಶನಿವಾರ ವಿಧಾನಸೌಧದಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿದ ಅಂತರರಾಷ್ಟ್ರೀಯ ಹಣಕಾಸು ನಿಧಿ ನಿಯೋಗ (IMF) ತಂಡ, ವಾರ್ಷಿಕ ಆರ್ಟಿಕಲ್ IV ಸಮಾಲೋಚನೆಯ ಭಾಗವಾಗಿ ಹೂಡಿಕೆ ಹಾಗೂ ಹಣಕಾಸಿನ ಸ್ಥಿರತೆ ಕುರಿತು ಚರ್ಚೆ ನಡೆಸಿತು.
ಅಂತರರಾಷ್ಟ್ರೀಯ ಹಣಕಾಸು ನಿಧಿ ನಿಯೋಗ ತಂಡವು ಸ್ಥೂಲ ಆರ್ಥಿಕ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುವುದರೊಂದಿಗೆ ಹಣಕಾಸು ಸಚಿವಾಲಯ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಇತರ ಸರ್ಕಾರಿ ಅಧಿಕಾರಿಗಳಿಗೆ ನೀತಿ ಸಲಹೆಗಳನ್ನು ನೀಡುತ್ತದೆ.
ಅಂತರರಾಷ್ಟ್ರೀಯ ಹಣಕಾಸು ನಿಧಿ ನಿಯೋಗ ತಂಡದಲ್ಲಿ ಸಹಾಯಕ ನಿರ್ದೇಶಕ ಮತ್ತು ಮಿಷನ್ ಮುಖ್ಯಸ್ಥರಾದ ಹೆರಾಲ್ಡ್ ಫಿಂಗರ್, ಭಾರತದ ಹಿರಿಯ ನಿವಾಸಿ ಪ್ರತಿನಿಧಿ ರನಿಲ್ ಸಲ್ಗಾಡೊ, ಏಷ್ಯಾ ಮತ್ತು ಪೆಸಿಫಿಕ್ ಇಲಾಖೆಯ ಹಿರಿಯ ಅರ್ಥಶಾಸ್ತ್ರಜ್ಞೆ ನುಜಿನ್ ಸುಫಾಫಿಫಟ್ ಮತ್ತು ಐಎಂಎಫ್ ಅರ್ಥಶಾಸ್ತ್ರಜ್ಞೆ ಗೀತಿಕಾ ಡ್ಯಾಂಗ್ ಹಾಜರಿದ್ದರು.