ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ: ಭಾರತದಲ್ಲಿಯೂ ಮುಂದೆ ಅದೇ ಸ್ಥಿತಿ ಎಂದು ಎಚ್ಚರಿಸಿದ ಯತ್ನಾಳ್‌
x

ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ: ಭಾರತದಲ್ಲಿಯೂ ಮುಂದೆ ಅದೇ ಸ್ಥಿತಿ ಎಂದು ಎಚ್ಚರಿಸಿದ ಯತ್ನಾಳ್‌

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಹೈಕಮಾಂಡ್‌ ಹೇಳಿದಂತೆ ಕೇಳುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಟೀಕಿಸಿದ್ದಾರೆ.


ನಕಲಿ ಮತದಾರರನ್ನು ಮತ್ತು ಅಕ್ರಮ ನುಸುಳುಕೋರರನ್ನು ಭಾರತದ ಗಡಿಯಾಚೆ ಕಳುಹಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆಯಾಗುತ್ತಿರುವಂತೆ ಮುಂದೊಂದು ದಿನ ಭಾರತದಲ್ಲಿಯೂ ಅದೇ ಪರಿಸ್ಥಿತಿ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಕೋಗಿಲು ಲೇಔಟ್‌ನಲ್ಲಿ ಮುಸ್ಲಿಮರಿಗೆ ವಸತಿ ಕಲ್ಪಿಸುತ್ತಿರುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಮಾತನಾಡಿದ ವೇಳೆ ಈ ವಿಷಯವನ್ನು ತಿಳಿಸಿದರು. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವು ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಅಕ್ರಮ ವಲಸಿಗರ ವಿಚಾರವು ಈಗ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಚರ್ಚಾರ್ಹ ವಿಷಯವಾಗಿದೆ ಎಂದರು.

ರಾಜ್ಯದಲ್ಲಿ ಅಡಗಿರುವ ನುಸುಳುಕೋರರ ಪತ್ತೆ ಮಾಡಬೇಕಿದೆ. ಬಾಂಗ್ಲಾದೇಶದವರು ಮತ್ತು ರೋಹಿಂಗ್ಯಾಗಳು ರಾಜ್ಯದ ವಿವಿಧೆಡೆ ಆಶ್ರಯ ಪಡೆದಿದ್ದು, ಅವರನ್ನು ಪತ್ತೆಹಚ್ಚಲು ಯಾವುದೇ ಗಂಭೀರ ತನಿಖೆ ನಡೆಯುತ್ತಿಲ್ಲ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಲಕ್ಷಾಂತರ ನಕಲಿ ಮತದಾರರು ಪತ್ತೆಯಾಗಿರುವ ಬೆನ್ನಲ್ಲೇ, ಕರ್ನಾಟಕದಲ್ಲಿಯೂ 'ಎಸ್‌ಐಆರ್' ಮಾದರಿಯ ತನಿಖೆ ಆರಂಭವಾಗಬೇಕು. ವಿಜಯಪುರದ ವಿಧಾನಸಭಾ ಕ್ಷೇತ್ರವೊಂದರಲ್ಲಿ 19 ಸಾವಿರ ನಕಲಿ ಮತದಾರರು ಪತ್ತೆಯಾಗಿರುವುದು ಕೇವಲ ಒಂದು ಉದಾಹರಣೆಯಾಗಿದ್ದು, ಇದು ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲ್ಲಾಡಿಸುವ ಗಂಭೀರ ವಿದ್ಯಮಾನವಾಗಿದೆ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರವು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ 'ತುಷ್ಟೀಕರಣದ ಪರಾಕಾಷ್ಟೆ' ತಲುಪಿದೆ. ದಶಕಗಳಿಂದ ಕೂಲಿ ಮತ್ತು ಜೀವನೋಪಾಯಕ್ಕಾಗಿ ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬಂದು ನೆಲೆಸಿರುವ ಅಪ್ಪಟ ಕನ್ನಡಿಗರಿಗೆ, ಮೂಲನಿವಾಸಿಗಳಿಗೆ ಪುನರ್ ವಸತಿ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಆದರೆ, ಹೈಕಮಾಂಡ್ ಸೂಚನೆಯ ಮೇರೆಗೆ ಗುರುತು ಪತ್ತೆಯಿಲ್ಲದ, ರಾಜ್ಯದ ಸಂಸ್ಕೃತಿಗೆ ಸಂಬಂಧವಿಲ್ಲದ ಜನರಿಗೆ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದು ಕನ್ನಡಿಗರಿಗೆ ಮಾಡುವ ಅಪಮಾನ ಮಾತ್ರವಲ್ಲದೆ, ರಾಜ್ಯದ ಸಂಪನ್ಮೂಲಗಳ ದುರ್ಬಳಕೆಯೂ ಹೌದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಸತಿ ಸಚಿವ ಜಮೀರ್ ಅಹ್ಮದ್ ವಿರುದ್ಧ ನೇರ ವಾಗ್ದಾಳಿ ನಡೆಸಿರುವ ಯತ್ನಾಳ್, ಅವರಿಗೆ ದೇಶಕ್ಕಿಂತ ಅವರ ಧರ್ಮ ಮತ್ತು ಜನರೇ ಮುಖ್ಯವಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಅವರು ಜಾತ್ಯತೀತತೆಯ ಹೆಸರಿನಲ್ಲಿ ಒಂದು ವರ್ಗದ ಓಲೈಕೆ ಮಾಡುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯಗಳನ್ನು ಇಲ್ಲಿನ ಪರಿಸ್ಥಿತಿಗೆ ಹೋಲಿಸಿರುವುದು, ಭಾರತದ ಆಂತರಿಕ ಭದ್ರತೆಯ ಬಗ್ಗೆ ಇರುವ ಆತಂಕವನ್ನು ಪ್ರತಿಬಿಂಬಿಸುತ್ತದೆ. ಅಕ್ರಮ ವಲಸಿಗರನ್ನು ನಿಯಂತ್ರಿಸದಿದ್ದರೆ ಭವಿಷ್ಯದಲ್ಲಿ ಸಾಮಾಜಿಕ ಅಸ್ಥಿರತೆ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಬಸನಗೌಡ ಪಾಟೀಲ್‌ ಯತ್ನಾಳ್‌ ಟೀಕೆಗಳು ಕೇವಲ ರಾಜಕೀಯ ಪ್ರೇರಿತ ಎಂದು ಮೇಲ್ನೋಟಕ್ಕೆ ಕಂಡರೂ, ಅವರು ಎತ್ತಿರುವ ನಕಲಿ ಮತದಾರರ ಮತ್ತು ಅಕ್ರಮ ನುಸುಳುಕೋರರ ಪ್ರಶ್ನೆಗಳು ಅತ್ಯಂತ ಗಂಭೀರವಾಗಿವೆ. ಒಂದು ದೇಶದ ಭದ್ರತೆ ಮತ್ತು ಪ್ರಜಾಪ್ರಭುತ್ವದ ಪವಿತ್ರತೆ ಮತದಾರರ ಪಟ್ಟಿಯ ನಿಖರತೆಯನ್ನು ಅವಲಂಬಿಸಿದೆ. ರಾಜ್ಯ ಸರ್ಕಾರವು ಈ ಆರೋಪಗಳನ್ನು ಕೇವಲ ರಾಜಕೀಯ ಟೀಕೆ ಎಂದು ತಳ್ಳಿಹಾಕದೆ, ನೈಜ ಕನ್ನಡಿಗರ ಹಿತರಕ್ಷಣೆ ಮತ್ತು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಪಾರದರ್ಶಕ ತನಿಖೆಗೆ ಮುಂದಾಗಬೇಕಿದೆ.

Read More
Next Story