ಲೈಂಗಿಕ ದೌರ್ಜನ್ಯ ಕುರಿತ ಹೇಳಿಕೆ: ಸಾರ್ವಜನಿಕ ಟೀಕೆ ಬಳಿ ಗೃಹ ಸಚಿವ ಜಿ. ಪರಮೇಶ್ವರ್​ ವಿಷಾದ
x

ಜಿ ಪರಮೇಶ್ವರ್‌ ಸಾರ್ವಜನಿಕವಾಗಿ ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಕೋರಿದ್ದಾರೆ. 

ಲೈಂಗಿಕ ದೌರ್ಜನ್ಯ ಕುರಿತ ಹೇಳಿಕೆ: ಸಾರ್ವಜನಿಕ ಟೀಕೆ ಬಳಿ ಗೃಹ ಸಚಿವ ಜಿ. ಪರಮೇಶ್ವರ್​ ವಿಷಾದ

ನನ್ನ ಹೇಳಿಕೆಯನ್ನು ತಿರುಚಿಸಲಾಗಿದೆ. ಇದು ಯಾರಿಗಾದರೂ, ವಿಶೇಷವಾಗಿ ಮಹಿಳೆಯರಿಗೆ ನೋವುಂಟುಮಾಡಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಜಿ. ಪರಮೇಶ್ವರ್‌ ತಿಳಿಸಿದ್ದಾರೆ.


ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಇತ್ತೀಚೆಗೆ ನಡೆದ ಲೈಂಗಿಕ ದೌರ್ಜನ್ಯ ಘಟನೆಯ ಕುರಿತು ಗೃಹ ಸಚಿವ ಜಿ ಪರಮೇಶ್ವರ್ ಅವರು ನೀಡಿದ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಅವರು ಮಂಗಳವಾರ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ಮಂಗಳವಾರ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ರಮೇಶ್ವರ್, 'ನನ್ನ ಹೇಳಿಕೆಯನ್ನು ನೀವು (ಮಾಧ್ಯಮ) ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಮತ್ತು ಇತರ ವೇದಿಕೆಗಳು ಸಹ ವಿಭಿನ್ನವಾಗಿ ಅರ್ಥಮಾಡಿಕೊಂಡಿವೆ. ನಾನು ಮಹಿಳೆಯರ ಸುರಕ್ಷತೆಯ ಬಗ್ಗೆ ಯಾವಾಗಲೂ ಕಾಳಜಿ ವಹಿಸುವ ವ್ಯಕ್ತಿ. ನನ್ನ ಹೇಳಿಕೆಯನ್ನು ತಿರುಚಿಸಲಾಗಿದೆ. ಇದು ಯಾರಿಗಾದರೂ, ವಿಶೇಷವಾಗಿ ಮಹಿಳೆಯರಿಗೆ ನೋವುಂಟುಮಾಡಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆʼʼ ಎಂದು ಅವರು ಹೇಳಿದ್ದಾರೆ.

'ಇತರ ರಾಜ್ಯಗಳಿಗೆ ಹೋಲಿಸಿದರೆ ನಾವು ಹೆಚ್ಚು ನಿರ್ಭಯಾ ನಿಧಿ ಬಳಿಸಿದ್ದೇವೆ. ಮಹಿಳೆಯರ ರಕ್ಷಣೆಗಾಗಿ ನಾವು ಏನು ಮಾಡಿದ್ದೇವೆ ಎಂಬುದನ್ನು ವಿವರವಾಗಿ ನೀಡಬಹುದು. ಕೆಲವು ಹೇಳಿಕೆಗಳನ್ನು ತಿರುಚುವುದು ಮತ್ತು ನನ್ನ ಬಗ್ಗೆ ಮಾತನಾಡುವುದು ಸರಿಯಲ್ಲ. ನಮ್ಮ ಸಹೋದರಿಯರು ಮತ್ತು ತಾಯಂದಿರ ರಕ್ಷಣೆಗಾಗಿ ನಾನು ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದೇನೆ. ಆದ್ದರಿಂದ ನನ್ನ ಹೇಳಿಕೆ ತಿರುಚುವ ಮೂಲಕ ತಪ್ಪಾಗಿ ಬಿಂಬಿಸಬಾರದು,'' ಎಂದು ಮನವಿ ಮಾಡಿದರು.

ಏಪ್ರಿಲ್ 3 ರಂದು ಸುದ್ದುಗುಂಟೆಪಾಳ್ಯದಲ್ಲಿ ನಡೆದು ಹೋಗುತ್ತಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆಗೆ ಪ್ರತಿಕ್ರಿಯಿಸಿದ್ದ ಪರಮೇಶ್ವರ, ''ಪೊಲೀಸರು ಮಳೆ ಮತ್ತು ಚಳಿ ಲೆಕ್ಕಿಸದೆ ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಬೆಂಗಳೂರಿನಲ್ಲಿ ಶಾಂತಿ ನೆಲೆಸಿದೆ. ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಅಲ್ಲೊಂದು ಇಲ್ಲೊಂದು ಇಂಥ ಘಟನೆಗಳು ನಡೆಯುತ್ತವೆ,'' ಎಂದು ಹೇಳಿದ್ದರು.

ಈ ಹೇಳಿಕೆಯು ವಿವಾದ ಸೃಷ್ಟಿಸಿತ್ತು, ಪ್ರತಿಪಕ್ಷ ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಕ್ಷಮೆಯಾಚಿಸುವಂತೆ ಒತ್ತಾಯಿಸಿತ್ತು.

Read More
Next Story