ಚುನಾವಣಾ ಕೆಲಸದಿಂದ ವೈದ್ಯರು, ನರ್ಸ್‌ಗಳಿಗೆ ವಿನಾಯಿತಿ ನೀಡಿದ ಹೈಕೋರ್ಟ್
x
ಹೈಕೋರ್ಟ್‌

ಚುನಾವಣಾ ಕೆಲಸದಿಂದ ವೈದ್ಯರು, ನರ್ಸ್‌ಗಳಿಗೆ ವಿನಾಯಿತಿ ನೀಡಿದ ಹೈಕೋರ್ಟ್

ಚುನಾವಣಾ ಕೆಲಸದಿಂದ ವೈದ್ಯರು, ನರ್ಸ್‌ಗಳು ಹಾಗೂ ಫಾರ್ಮಸಿ ಸಿಬ್ಬಂದಿಗೆ ವಿನಾಯಿತಿ ನೀಡುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ. ಚುನಾವಣಾ ಕೆಲಸದಿಂದ ವಿನಾಯಿತಿ ನೀಡಲು ಕೋರಲಾಗಿತ್ತು.


ಚುನಾವಣಾ ಕೆಲಸದಿಂದ ವೈದ್ಯರು, ನರ್ಸ್‌ಗಳು ಹಾಗೂ ಫಾರ್ಮಸಿ ಸಿಬ್ಬಂದಿಗೆ ವಿನಾಯಿತಿ ನೀಡುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.

ಚುನಾವಣಾ ಕೆಲಸದಿಂದ ವಿನಾಯಿತಿ ನೀಡುವಂತೆ ಕೋರಿ ಯಶವಂತಪುರದ ಇಎಸ್ಐ ಡಿಸ್ಪೆನ್ಸರಿಯ ಫಾರ್ಮಸಿ ಅಧಿಕಾರಿ ಕೆ.ಪ್ರದೀಪ್ ಸೇರಿದಂತೆ ಮತ್ತಿತರರು ಅರ್ಜಿ ಸಲ್ಲಿಸಿದ್ದರು. ಚುನಾವಣಾ ಕರ್ತವ್ಯದಿಂದ ವೈದ್ಯರು, ನರ್ಸ್‌ಗಳು ಹಾಗೂ ಫಾರ್ಮಸಿ ಸಿಬ್ಬಂದಿಯನ್ನು ಹೊರಗುಳಿಸಬೇಕು ಎಂದು ಅರ್ಜಿದಾರರ ಪರ ವಕೀಲ ಬಿ.ಎಂ.ಸಂತೋಷ್ ವಾದಿಸಿದರು.

ಈಗಾಗಲೇ ವೈದ್ಯರು, ನರ್ಸ್ ಗಳು, ಫಾರ್ಮಸಿ ಅಧಿಕಾರಿಗಳಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಲಾಗಿದೆ. ಆದರೆ, ಬಿಬಿಎಂಪಿಯು ಕಾನೂನು ಬಾಹಿರ ಆದೇಶ ಹೊರಡಿಸಿದೆ. ಚುನಾವಣಾ ಕರ್ತವ್ಯಕ್ಕೆ ಫಾರ್ಮಸಿ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗುಬೇಕು ಎಂದು ಸೂಚನೆ ನೀಡಿದೆ ಎಂದು ತಿಳಿಸಿದರು.

ಈ ವಾದವನ್ನು ಕೇಳಿದ ನ್ಯಾಯಪೀಠಮನವಿಯನ್ನು ಮಾನ್ಯ ಮಾಡಿದ್ದು, ವೈದ್ಯರು, ನರ್ಸ್‌ಗಳು ಹಾಗೂ ಎಎನ್ಎಂಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬಾರದು ಎಂದು ಚುನಾವಣಾ ಆಯೋಗವೇ ಆದೇಶಿಸಿದ್ದು, ಅವರಿಗೆ ಸೇವೆಯಿಂದ ವಿನಾಯಿತಿ ನೀಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗೆ ಸೂಚಿಸಲಾಗಿದೆ. ಅಲ್ಲದೇ ಈ ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಕೇಂದ್ರ ಚುನಾವಣಾ ಆಯೋಗ, ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಚುನಾವಣಾಧಿಕಾರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ವಿಚಾರಣೆ ಮುಂದೂಡಲಾಗಿದೆ.

Read More
Next Story