Heavy Rain | ಬೆಂಗಳೂರು ಸೇರಿ ಹಲವೆಡೆ ಧಾರಾಕಾರ ಮಳೆ ; ರಸ್ತೆ, ಬಡಾವಣೆಗಳು ಜಲಾವೃತ
x

Heavy Rain | ಬೆಂಗಳೂರು ಸೇರಿ ಹಲವೆಡೆ ಧಾರಾಕಾರ ಮಳೆ ; ರಸ್ತೆ, ಬಡಾವಣೆಗಳು ಜಲಾವೃತ

ಶಾಂತಿನಗರ, ರಿಚ್ಮಂಡ್ ಸರ್ಕಲ್, ಕಾರ್ಪೊರೇಷನ್, ಕಬ್ಬನ್ಪಾರ್ಕ್, ಚಿನ್ನಸ್ವಾಮಿ ಮೈದಾನ, ವಿಧಾನಸೌಧ, ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್‌, ರಾಜಾಜಿನಗರ, ಲಾಲ್ಬಾಗ್, ಜಯನಗರ ಸೇರಿ ಹಲವೆಡೆ ಜೋರು ಮಳೆಯಾಗಿದೆ


ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದೆ. ಶನಿವಾರ ರಾತ್ರಿ ಸುರಿದ ಭಾರೀ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ಬೆಂಗಳೂರಿನ ಸಾಯಿ ಲೇಔಟ್ ಮಳೆ ನೀರಿನಿಂದ ಸಂಪೂರ್ಣ ಜಲಾವೃತಗೊಂಡಿದೆ. ರಸ್ತೆಗಳಲ್ಲಿ ನೀರು ಉಕ್ಕಿ ಹರಿದಿದ್ದು, ವಾಹನ ಸವಾರರು ಪರದಾಡಿದರು.

ಸಾಯಿ ಲೇಔಟ್‌ನ ಸಾಯಿ ಮಂದಿರಕ್ಕೂ ಮಳೆ ನೀರು ನುಗ್ಗಿದೆ. ಬೆಳಿಗ್ಗೆವರೆಗೂ ನೀರು ಖಾಲಿ ಆಗಿರಲಿಲ್ಲ. ರಾಜಕಾಲುವೆ ನೀರು ರಸ್ತೆಗಳಲ್ಲಿ ಹರಿದು ಮನೆಗಳಿಗೂ ನುಗ್ಗಿದೆ. ಇದರಿಂದ ಜನರು ಹೊರಗೆ ಬರಲು ಪರಿತಪಿಸುವಂತಾಯಿತು.

ಶನಿವಾರ ಸಂಜೆಯಿಂದಲೂ ಆರಂಭವಾದ ಮಳೆಗೆ ನಗರದ ಹಲವು ರಸ್ತೆಗಳಲ್ಲಿ ಸಂಚಾರ ದಟ್ಟಣೆ ತೀವ್ರವಾಗಿತ್ತು.

ಶಾಂತಿನಗರ, ರಿಚ್ಮಂಡ್ ಸರ್ಕಲ್, ಕಾರ್ಪೊರೇಷನ್, ಕಬ್ಬನ್ಪಾರ್ಕ್, ಚಿನ್ನಸ್ವಾಮಿ ಮೈದಾನ, ವಿಧಾನಸೌಧ, ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್‌, ರಾಜಾಜಿನಗರ, ಲಾಲ್ಬಾಗ್, ಜಯನಗರ ಸೇರಿ ಹಲವೆಡೆ ಜೋರು ಮಳೆಯಾಗಿದೆ.

ಜಯನಗರ ಈಸ್ಟ್ ಎಂಡ್‌ ರಸ್ತೆಯಲ್ಲಿ ಮರ ಧರೆಗೆ ಉರುಳಿದ್ದು, ವಾಹನ ಸವಾರರು ಪರದಾಡಿದರು. ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದರು.

ಸಂಚಾರ ದಟ್ಟಣೆ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್‌ ನಡುವಿನ ಐಪಿಎಲ್‌ ಪಂದ್ಯ ನಿಗದಿಯಾಗಿದ್ದ ಹಿನ್ನೆಲೆ ಹಾಗೂ ಮಳೆಯಿಂದಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು.

ರಾಜ್ಯದಲ್ಲಿ ಮೇ 16 ರಿಂದ ವ್ಯಾಪಕ ಮಳೆಯಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

Read More
Next Story