
ಸಾಂದರ್ಭಿಕ ಚಿತ್ರ
ಪದವಿ ಪೂರೈಸಿದ್ದೀರಾ? ಬ್ಯಾಂಕಿಂಗ್ ಕ್ಷೇತ್ರದಲ್ಲಿವೆ ವಿಪುಲ ಅವಕಾಶ, ಇಂದೇ ಅರ್ಜಿ ಸಲ್ಲಿಸಿ!
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ ಪದವಿ, ಎಂಬಿಎ, ಪಿಜಿಡಿಬಿಎಂ, ಪಿಜಿ, ಸಿಎ ಅಥವಾ ಸಿಎಂಎ ಪದವಿ ಪಡೆದಿರಬೇಕು. ಅಧಿಸೂಚನೆಯಲ್ಲಿ ಸೂಚಿಸಿದಂತೆ ಅವರು ಸಂಬಂಧಿತ ಕೆಲಸದ ಅನುಭವವನ್ನು ಹೊಂದಿರಬೇಕು.
ಪದವಿ ಪೂರೈಸಿರುವ ನಿರುದ್ಯೋಗ ಯುವಕ ಯುವತಿಯರಿಗೆ ಬ್ಯಾಂಕ್ ಆಪ್ ಇಂಡಿಯಾ ಸಿಹಿಸುದ್ದಿ ನೀಡಿದೆ. 514 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಸಲು ಜನವರಿ 5 ಕೊನೆಯ ದಿನಾಂಕವಾಗಿದೆ.
ದೇಶಾದ್ಯಂತ ತನ್ನ ಶಾಖೆಗಳಲ್ಲಿ ಜನರಲ್ ಬ್ಯಾಂಕಿಂಗ್ ಆಫೀಸರ್ ಸ್ಟ್ರೀಮ್‌ನಲ್ಲಿ ನಿಯಮಿತವಾಗಿ ಕ್ರೆಡಿಟ್ ಆಫೀಸರ್ (MMGS 3, MMGS 2, SMGS 4) ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು,ಅರ್ಹ ಅಭ್ಯರ್ಥಿಗಳು ಡಿಸೆಂಬರ್ 20 ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಶೈಕ್ಷಣಿಕ ಅರ್ಹತೆ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ ಪದವಿ, ಎಂಬಿಎ, ಪಿಜಿಡಿಬಿಎಂ, ಪಿಜಿ, ಸಿಎ ಅಥವಾ ಸಿಎಂಎ ಪದವಿ ಪಡೆದಿರಬೇಕು. ಅಧಿಸೂಚನೆಯಲ್ಲಿ ಸೂಚಿಸಿದಂತೆ ಅವರು ಸಂಬಂಧಿತ ಕೆಲಸದ ಅನುಭವವನ್ನು ಹೊಂದಿರಬೇಕು.
ಯಾವ್ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನ ?
ಕ್ರೆಡಿಟ್ ಆಫೀಸರ್ (SMGS 4) 36, ಕ್ರೆಡಿಟ್ ಆಫೀಸರ್ (MMGS 3) 60 ಹಾಗೂ ಕ್ರೆಡಿಟ್ ಆಫೀಸರ್ (MMGS 2) 418 ಸೇರಿ ಒಟ್ಟು 514 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಶುಲ್ಕ
ಅರ್ಜಿ ಸಲ್ಲಿಸುವ ಸಾಮಾನ್ಯ ಅಭ್ಯರ್ಥಿಗಳು 850 ರೂ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ತಲಾ 175 ರೂ. ಅರ್ಜಿ ಶುಲ್ಕ ಪಾವತಿಸಬೇಕಾಗಿದ್ದು, ಆನ್‌ಲೈನ್ ಮೂಲಕ ಲಿಖಿತ ಪರೀಕ್ಷೆ ನಡೆಯಲಿದ್ದು, ವೈಯಕ್ತಿಕ ಸಂದರ್ಶನ ಮೂಲಕ ಅಂತಿಮ ಆಯ್ಕೆಯನ್ನು ಮಾಡಲಾಗುತ್ತದೆ.
ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 25 ರಿಂದ 40 ವರ್ಷಗಳ ನಡುವಿನ ವಯೋಮಿತಿ ಹೊಂದಿರಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ವೇತನ
ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಎಂಎಂಜಿಎಸ್ 2 ಹುದ್ದೆಗಳಿಗೆ 64,820 - 93,960 ರೂ. ಎಸ್‌ಎಂಜಿಎಸ್ 4 ಹುದ್ದೆಗಳಿಗೆ 1,02,300 - 1,20,940 ರೂ. ಮತ್ತು ಎಂಎಂಜಿಎಸ್ 3 ಹುದ್ದೆಗಳಿಗೆ 85,920 -1,05,280 ರೂ. ರವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

