Shiva Rajkumar | ಕ್ಯಾನ್ಸರ್‌ ಗೆದ್ದ ಹ್ಯಾಟ್ರಿಕ್‌ ಹೀರೋ; ಜ.25ಕ್ಕೆ ಬೆಂಗಳೂರಿಗೆ ಮರಳಲಿರುವ ಶಿವಣ್ಣ
x
ಡಾ.ಶಿವರಾಜಕುಮಾರ್‌ ದಂಪತಿ

Shiva Rajkumar | ಕ್ಯಾನ್ಸರ್‌ ಗೆದ್ದ ಹ್ಯಾಟ್ರಿಕ್‌ ಹೀರೋ; ಜ.25ಕ್ಕೆ ಬೆಂಗಳೂರಿಗೆ ಮರಳಲಿರುವ ಶಿವಣ್ಣ

ಶಸ್ತ್ರಚಿಕಿತ್ಸೆಯ ಬಳಿಕ ಒಂದು ತಿಂಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದ ಹಿನ್ನೆಲೆಯಲ್ಲಿ ಅಂದಿನಿಂದ ಶಿವರಾಜಕುಮಾರ್‌ ಹಾಗೂ ಗೀತಾ ಶಿವರಾಜಕುಮಾರ್‌ ಅವರು ಅಮೆರಿಕದಲ್ಲಿಯೇ ಉಳಿದಿದ್ದರು.

ಅಮೆರಿಕದ ಮಿಯಾಮಿಯಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿ ಗುಣಮುಖರಾಗಿರುವ ಹ್ಯಾಟ್ರಿಕ್ ಹೀರೊ ಡಾ.ಶಿವರಾಜಕುಮಾರ್ ಅವರು ಜ.25 ರಂದು ಸ್ವದೇಶಕ್ಕೆ ವಾಪಸಾಗಲಿದ್ದಾರೆ.

ಮೂತ್ರಕೋಶದ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಾಗಿ ಡಿ.18 ರಂದು ಮಿಯಾಮಿಗೆ ತೆರಳಿದ್ದ ಅವರಿಗೆ ಡಿ.24 ರಂದು ಡಾ. ಮನೋಹರ್ ನೇತೃತ್ವದ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿತ್ತು. ಕ್ಯಾನ್ಸರ್‌ ಸೋಂಕಿನ ಮೂತ್ರಕೋಶವನ್ನು(ಬ್ಲಾಡರ್‌) ತೆರವು ಮಾಡಿ, ಕೃತಕ ಮೂತ್ರಕೋಶ ಅಳವಡಿಸಲಾಗಿದೆ.

ಶಸ್ತ್ರಚಿಕಿತ್ಸೆಯ ಬಳಿಕ ಒಂದು ತಿಂಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದ ಹಿನ್ನೆಲೆಯಲ್ಲಿ ಅಂದಿನಿಂದ ಶಿವರಾಜಕುಮಾರ್‌ ಹಾಗೂ ಗೀತಾ ಶಿವರಾಜಕುಮಾರ್‌ ಅವರು ಅಮೆರಿಕದಲ್ಲಿಯೇ ಉಳಿದಿದ್ದರು.

ಶಿವಣ್ಣ ಅವರ ಆರೋಗ್ಯ ಸಹಜ ಸ್ಥಿತಿಗೆ ಮರಳಿರುವ ಹಿನ್ನೆಲೆಯಲ್ಲಿ ತಾಯ್ನಾಡಿಗೆ ವಾಪಸಾಗಬಹುದು ಎಂದು ಸಲಹೆ ಹಿನ್ನೆಲೆಯಲ್ಲಿ ಶಿವರಾಜಕುಮಾರ್‌ ದಂಪತಿ 25ರಂದು ಬೆಂಗಳೂರಿಗೆ ವಾಪಸಾಗಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸೋಮವಾರವಷ್ಟೇ ಶಿವಣ್ಣ ಅವರು ಮಿಯಾಮಿಯಲ್ಲಿ ʼನಂದಿ ಕನ್ನಡ ಕೂಟʼದ ಆಹ್ವಾನದ ಮೇರೆಗೆ ಕನ್ನಡಿಗರನ್ನು ಭೇಟಿ ಮಾಡಿ, ಹಾಡು ಹರಟೆಯಲ್ಲಿ ತೊಡಗಿಸಿಕೊಂಡಿದ್ದರು. ಕ್ಯಾನ್ಸರ್‌ ದೃಢಪಟ್ಟ ನಂತರದಲ್ಲಿ ತಮಗಾದ ಅನುಭವ, ಮಿಯಾಮಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮುಂಚಿನ ಆತಂಕಗಳ ಕುರಿತು ನೆನೆದು ಭಾವುಕರಾಗಿ ಮಾತನಾಡಿದ್ದರು.

Read More
Next Story