ಹಾಸನ ಚಲೋ| ಪ್ರಜ್ವಲ್ ಗೆದ್ದರೂ- ಸೋತರೂ ಆತನನ್ನು ಒಪ್ಪಿಕೊಳ್ಳಬೇಡಿ: ಕೆ ನೀಲಾ
x

ಹಾಸನ ಚಲೋ| ಪ್ರಜ್ವಲ್ ಗೆದ್ದರೂ- ಸೋತರೂ ಆತನನ್ನು ಒಪ್ಪಿಕೊಳ್ಳಬೇಡಿ: ಕೆ ನೀಲಾ


ಹಾನಸದ ಜನತೆಯೇ ನಿಮ್ಮಲ್ಲಿ ವಿನಂತಿ, ಪ್ರಜ್ವಲ್ ಗೆದ್ದರೂ- ಸೋತರೂ ಆತನನ್ನು ಒಪ್ಪಿಕೊಳ್ಳಬೇಡಿ. ಹುಚ್ಚಾಸ್ಪತ್ರೆಯಲ್ಲಿ ಇರಬೇಕಾದವನನ್ನು ಎಂಪಿ ಮಾಡಿದಿರಿ. ಅದರ ಪರಿಣಾಮವೇ ಹಾಸನದ ಹೆಣ್ಣುಮಕ್ಕಳನ್ನು ಶೋಷಣೆ ಮಾಡುವಂತಾಯಿತು. ಇಡೀ ಕರ್ನಾಟಕದ ಜನವೇ ಹಾಸನಕ್ಕೆ ಬರುವಂತಾಗಿದೆ” ಎಂದು ʻಹೋರಾಟದ ನಡಿಗೆ – ಹಾಸನ ಕಡೆಗೆ’ ಬೃಹತ್ ಹೋರಾಟ ಸಭೆಯಲ್ಲಿ ಸಾಮಾಜಿಕ ಹೋರಾಟಗಾರ್ತಿ ಕೆ. ನೀಲಾ ಹೇಳಿದರು.

ಪ್ರಜ್ವಲ್‌ ಲೈಂಗಿಕ ಪ್ರಕರಣ ಖಂಡಿಸಿ ನಡೆದ ಹಾಸನ ಚಲೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯವ್ರು ರಾಮಾಯಣ- ಮಹಾಭಾರತ ನಮ್ಮವು ಅಂತ ಹೇಳಿಕೊಳ್ತಾರೆ. ಇಂತಹ ಸಂದರ್ಭದಲ್ಲಿ ಮಹಾಭಾರತದ ದ್ರೌಪದಿ ಕತೆಯನ್ನ ನೆನಪು ಮಾಡುವೆ. ಆಕೆಯ ವಸ್ತ್ರವನ್ನು ಸೆಳೆದಾಗ ಆಕೆಯ ಐವರು ಗಂಡಂದಿರು ಸಹಾಯಕ್ಕೆ ಬರುವುದಿಲ್ಲ. ಆಕೆ ಪ್ರತಿಜ್ಞೆ ಮಾಡಿದಂತೆ ದುಶ್ಯಾಸನನ ತೊಡೆ ಸೀಳಿ ಆ ರಕ್ತದಿಂದ ಮುಡಿಕಟ್ಟಿದಳು. ಹಾಗಾಗಿ ಪ್ರಜ್ವಲ ನೀನು ನನ್ನ ಮೊಮ್ಮಗನ ವಯಸ್ಸಿನವನು. 4ನೇ ತಾರೀಖಿನ ನಂತರ ಗೆದ್ದಬಿಡಬಹುದು ಎಂಬ ಅಹಂಕಾರ ನಿನಗಿದ್ರೆ ಎಚ್ಚರಿಕೆ, ನಿನ್ನ ಅಟ್ಟಹಾಸಕ್ಕೆ ಕೊನೆಯಿದೆʼʼ ಎಂದು ಗುಡುಗಿದರು.

ಹಾನಸದ ಜನತೆಯೇ ನಿಮ್ಮಲ್ಲಿ ವಿನಂತಿ, ಪ್ರಜ್ವಲ್ ಗೆದ್ದರೂ- ಸೋತರೂ ಆತನನ್ನು ಒಪ್ಪಿಕೊಳ್ಳಬೇಡಿ. ಹುಚ್ಚಾಸ್ಪತ್ರೆಯಲ್ಲಿ ಇರಬೇಕಾದವನನ್ನು ಎಂಪಿ ಮಾಡಿಬಿಟ್ಟಿರಿ, ಅದರ ಪರಿಣಾಮವೇ ಹಾಸನದ ಹೆಣ್ಣುಮಕ್ಕಳನ್ನು ಶೋಷಣೆ ಮಾಡೋದಕ್ಕೆ ಕಾರಣವಾಗಿದೆ. ಇಡೀ ಕರ್ನಾಟಕದ ಜನವೇ ಹಾಸನಕ್ಕೆ ಬರುವಂತಾಗಿದೆ. ಹೆಣ್ಣುಮಕ್ಕಳನ್ನು ಅಸಹಾಯಕತೆಯ ಖೆಡ್ಡಾಗೆ ತೋಡಿ ವಿಡಿಯೋ ಮಾಡಿ ಅವರ ಘನತೆಯನ್ನು ಉಲ್ಲಂಘಿಸಲಾಗಿದೆ ಎಂದರು.

ಪ್ರಧಾನಿ ತಾನು ಜೈವಿಕವಾಗಿ ಬಂದಿಲ್ಲ, ದೇವರು ಕಳಿಸಿದ್ದಾನೆ ಅಂತಾರೆ. ಆದರೆ, ಈಗ ಹೇಳ್ತಾ ಇದೀನಿ ಈ ದೇಶದ ಪ್ರಧಾನಿ ತಾಯಿದ್ರೋಹಿ. ರಕ್ತ ಸುರಿಸಿ ಜನ್ಮ ಕೊಡುವವಳನ್ನು ಪೆನ್‌ಡ್ರೈವ್‌ನಲ್ಲಿ ನೋಡುದ್ವಿ ಅಂತ ಹೇಳುತ್ತೀರಿ. ನಾಚಿಕೆಯಾಗಬೇಕು. ವಿಡಿಯೋ ಆಡಿದ ಪ್ರಜ್ವಲ್ ಹಾಗೂ ಪೆನ್ಡ್ರೈವ್ ಹಂಚಿದವರು ಮತ್ತು ಜಿಲ್ಲಾಡಳಿತಕ್ಕೆ ಪ್ರಶ್ನಿಸಬೇಕಿದೆ. ಪ್ರಸಾರವಾಗುವುದಕ್ಕೆ ಬಿಡಬೇಡಿ ಅಂತ ಮನವಿ ಮಾಡುದ್ರು ಕ್ರಮವಹಿಸಲಿಲ್ಲ. ಹಾಸನದ ಡಿಸಿ, ಎಸ್ಪಿ ನೀವು ಮಹಿಳೆಯಾಗಿದ್ದುಕೊಂಡು ನೀವು ತಪ್ಪು ಮಾಡಿದೀರಿ, ನೀವು ತಪ್ಪಿತಸ್ಥರೆ… ಆ ವಿಡಿಯೋಗಳು ಹೆಚ್ಚಿನ ಪ್ರಮಾಣದಲ್ಲಿ ಹರಡುವುದನ್ನು ತಡೆಯುವುದರಲ್ಲಿ ನೀವುಗಳು ವಿಫಲವಾಗಿದ್ದೀರಿʼʼ ಎಂದು ಅಧಿಕಾರಸ್ಥರ ವಿರುದ್ಧ ಕಿಡಿಕಾರಿದರು.

ಸಂತ್ರಸ್ತ ಮಹಿಳೆ ಅನ್ನಬೇಡಿ, ಆ ಪದವನ್ನು ಕಿತ್ತಾಕಿ. ತೊಂದರೆಗೆ ಒಳಗಾದ ಮಹಿಳೆಯರ ಜತೆ ನಾವಿದ್ದೇವೆ ಎಂದು ಹೇಳುವುದಕ್ಕೆ ನಾವಿಲ್ಲಿ ಬಂದಿದ್ದೀವಿ. ಈ ಸರ್ಕಾರ ಮಹಿಳೆಯರನ್ನ ರಕ್ಷಿಸಬೇಕು. ಅವರಿಗೆ ಘಟನೆ ಬದುಕನ್ನು ರಕ್ಷಿಸಲು ಮುಧಾಗಿ ಅಂತ ಕೇಳುದ್ರೆ ಸಿದ್ದರಾಮಯ್ಯ ಅವರೇ ನಿಮ್ಮ ಬೇಳೆ ಬೇಯಿಸಿಕೊಂಡ್ರಿ ಜವಾಬ್ದಾರಿಯಿಂದ ವಂಚಿತರಾದ್ರಿ. ಇನ್ನೂ ಬಿಜೆಪಿಯವ್ರೇ, ನೇಹಾ ಪ್ರಕರಣಕ್ಕೆ ಕೋಮು ಬಣ್ಣ ಬಳಿದಿರಿ. ಹಾನಸಕ್ಕೆ ಬಂದು ಅತ್ಯಾಚಾರಿ ಪ್ರಜ್ವಲನಿಗೆ ವೋಟಾಕಿ ಅಂತ ಕೇಳಿದ್ರಿ, ಪ್ರಧಾನಿ ಮೋದಿ, ಶೋಭಕ್ಕ, ಅಮಿತ್ ಶಾ ಎಲ್ಲರೂ ಎಲ್ಲಿದ್ದೀರಿ. ಹಾನಸಕ್ಕೆ ಕಾಂಗ್ರೆಸ್, ಬಿಜೆಪಿ- ಜೆಡಿಎಸ್ ಮೂರು ಪಕ್ಷದವರು ಯಾರು ಒಳ್ಳೆದನ್ನ ಮಾಡಿಲ್ಲ. ಹಾಸನದ ಜನತೆಯ ಬದುಕಲ್ಲಿ ಆಟ ಆಡಿದ್ದಾರೆ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಜ್ವಲ್ ದೇವಲಾಪುರ ಅರಣ್ಯದಲ್ಲಿ ಪ್ರಾಣಿಗಳನ್ನು ಭೇಟೆಯಾಡುತ್ತಾನೆ. ಡಿಸಿ-ಎಸ್‌ಪಿ ತಾಕತ್ತಿದ್ದರೆ ತನಿಖೆ ಮಾಡಿ ಎಂದು ಸವಾಲು ಹಾಕಿದರು.

ಈ ಪ್ರಕರಣದ ಮೂಲಕ ಹಾಸನದ ಗಂಡಸರು ಹೆಣ್ಣನ್ನು ಒಂಟಿಯಾಗಿ ಆಚೆ ಹೋಗದಂತೆ ಕಟ್ಟಿಹಾಕಲು ದಾರಿಮಾಡಿದ್ದೀರಿ. ಮನಸ್ಮೃತಿಯ ಅಣತಿಯನ್ನ ಮಹಿಳೆಯರನ್ನು ಕಟ್ಟಿಹಾಕುವ ಕೆಲಸಕ್ಕೆ ಬಿಜೆಪಿಯವರೇ ಅವಕಾಶಮಾಡಿಕೊಟ್ಟಿದ್ದೀರಿ. ಇನ್ನು ಎರಡನೇಯದಾಗಿ, ಕುಮಾರಸ್ವಾಮಿ, ದೇವೇಗೌಡ ಹಾಗೂ ರೇವಣ್ಣ ನಿಮ್ಮ ಮನೆಯ ಮಗನ್ನನ್ನು ಬೆಂಬಲಿಸಿ ಆ ಮೂಲಕ ಒಂದು ಪ್ರಾದೇಶಿಕ ಪಕ್ಷವನ್ನು ನಾಶ ಮಾಡಿದ್ದಾರೆ ಎಂದು ಹೇಳಿದರು.

ನೊಂದ ಮಹಿಳೆಯರಿಗೆ ಕರೆ

ಹಾಸನದ ಮಹಿಳೆಯರ ಕಣ್ಣೀರ ಹನಿಗಳನ್ನು ಬಾವುಟವಾಗಿಸಿ ರಾಜ್ಯಾದ್ಯಂತ ಹೋರಾಟ ಮಾಡೋಣ. ಸ್ವಾಭಿಮಾನದ, ಮಹಿಳಾ ಅಸ್ಮಿತೆಯ ಚಳುವಳಿಯ ಕಟ್ಟೋಣ ಅಂಜಬೇಡಿ. ನಿಮ್ಮೊಂದಿಗೆ ನಾವಿದ್ದೇವೆʼʼ ಎಂದು ಕೆ ನೀಲಾ ಅವರು ಹಾಸನದ ಹೆಣ್ಣು ಮಕ್ಕಳಿಗೆ ಧೈರ್ಯದ ಮಾತುಗಳನ್ನು ಹೇಳಿದರು.

Read More
Next Story