ಜಾತಿ ಗಣತಿ ವರದಿ | ಜಾತಿ ಸಮಸ್ಯೆಗೆ ಪರಿಹಾರ ಕೊಟ್ಟಿದ್ದಾರೆಯೇ?: ಎಚ್ ಡಿಕೆ ಪ್ರಶ್ನೆ
x
ಹೆಚ್‌ ಡಿ ಕುಮಾರಸ್ವಾಮಿ

ಜಾತಿ ಗಣತಿ ವರದಿ | ಜಾತಿ ಸಮಸ್ಯೆಗೆ ಪರಿಹಾರ ಕೊಟ್ಟಿದ್ದಾರೆಯೇ?: ಎಚ್ ಡಿಕೆ ಪ್ರಶ್ನೆ

ರಾಜ್ಯ ಸರ್ಕಾರದಲ್ಲಿ ದುಡ್ಡಿಗೇನೂ ಬರವಿಲ್ಲ. ಗಂಜಿ ಕೇಂದ್ರಗಳಿಗಾಗಿ ಬಾಯಿಬಿಟ್ಟುಕೊಂಡು ಹಲವರು ಕಾದಿದ್ದಾರೆ. ಅವರನ್ನು ಸೇರಿಸಿಕೊಂಡು ಸಮಿತಿ ರಚಿಸಿ, ಅವರಿಂದ ಹೊಸದಾಗಿ ಗಣತಿ ಮಾಡಿಸಿ ಎಂದು ಅವರು ಹೇಳಿದರು.


ಜಾತಿಗಣತಿ ವರದಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುತ್ತಲೇ ಇರುತ್ತಾರೆ. ಆದರೆ, ಕಾಂತರಾಜ ವರದಿ ಸರ್ಕಾರದ ಕೈ ಸೇರಿ ಎಷ್ಟು ವರ್ಷವಾಯಿತು? ಜಾತಿಗಳ ಸಮಸ್ಯೆಗಳಿಗೆ ಇವರು ಪರಿಹಾರ ಕೊಟ್ಟಿದ್ದಾರೆಯೇ? ಸಿದ್ದರಾಮಯ್ಯ ಏಳು ವರ್ಷಗಳವರೆಗೆ ಮುಖ್ಯಮಂತ್ರಿ ಆಗಿದ್ದರು. ಹೀಗಿದ್ದರೂ ಏನೂ ಮಾಡಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ 10 ವರ್ಷಗಳ ಹಿಂದೆ ನಡೆಸಿದ ಜಾತಿಗಣತಿಯ ವರದಿಯನ್ನು ಮತ್ತೆ-ಮತ್ತೆ ಪರಿಶೀಲನೆಗೆ ನೀಡಲಾಗುತ್ತಿದೆ. ಆ ವರದಿ ದೋಷಪೂರಿತವಾಗಿದೆ. ಅದನ್ನು ಬಿಡಿ. ರಾಜ್ಯ ಸರ್ಕಾರದಲ್ಲಿ ದುಡ್ಡಿಗೇನೂ ಬರವಿಲ್ಲ. ಗಂಜಿ ಕೇಂದ್ರಗಳಿಗಾಗಿ ಬಾಯಿಬಿಟ್ಟುಕೊಂಡು ಹಲವರು ಕಾದಿದ್ದಾರೆ. ಅವರನ್ನು ಸೇರಿಸಿಕೊಂಡು ಸಮಿತಿ ರಚಿಸಿ, ಅವರಿಂದ ಹೊಸದಾಗಿ ಗಣತಿ ಮಾಡಿಸಿ ಎಂದು ಅವರು ಹೇಳಿದರು.

ಜಾತಿ ಜನಗಣತಿ ಜಾರಿ ಕುರಿತು ಪರ ವಿರೋಧ ಚರ್ಚೆಗಳ ನಡುವೆಯೂ ವರದಿಯ ಅನುಷ್ಠಾನದ ಬಗ್ಗೆ ತೀರ್ಮಾನ ಕೈಗೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಜಯನಗರ ಜಿಲ್ಲೆಯಲ್ಲಿ ರವಿವಾರ ಜಾತಿಗಣತಿ ವರದಿಗೆ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಜಾತಿ ಗಣತಿ ವರದಿಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುವುದು ಸಹಜ. 160 ಕೋಟಿ ರೂ. ವೆಚ್ಚದಲ್ಲಿ ಸಿದ್ಧಪಡಿಸಲಾದ ವರದಿಯನ್ನು ಸ್ವೀಕರಿಸಲಾಗಿದ್ದು, ವರದಿ ಜಾರಿ ಬಗ್ಗೆ ತೀರ್ಮಾನ ಕೈಗೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸಲಾಗುವುದು ಎಂದು ಹೇಳಿದ್ದರು.

ಮುಖ್ಯಮಂತ್ರಿಗಳ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ಚಾಮಿ, ಜಾತಿ ಗಣತಿ ವರದಿಯ ವಿಷಯದಲ್ಲಿ ಸರ್ಕಾರದ ನಿಲುವನ್ನು ಕಟುವಾಗಿ ಟೀಕಿಸಿ ವ್ಯಂಗ್ಯವಾಡಿದ್ದಾರೆ.

Read More
Next Story