ಡಿ.11ರ ಜಿಟಿಟಿಸಿ ಪರೀಕ್ಷೆ ಡಿ.12 ಕ್ಕೆ ಮುಂದೂಡಿಕೆ
ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿನ (ಜಿಟಿಟಿಸಿ) ಖಾಲಿ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಡಿ.11ರಂದು ನಿಗದಿಯಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಡಿಸೆಂಬರ್ 12 ಕ್ಕೆ ಮುಂದೂಡಿಕೆ ಮಾಡಲಾಗಿದೆ.
ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಸರ್ಕಾರ ಶೋಕಾಚರಣೆ ಹಾಗೂ ಸಾರ್ವಜನಿಕ ರಜೆ ಘೋಷಿಸಿದೆ. ಹೀಗಾಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿನ (ಜಿಟಿಟಿಸಿ) ಖಾಲಿ ಹುದ್ದೆಗಳ ನೇಮಕಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಡಿ.11ರಂದು ನಿಗದಿ ಮಾಡಿದ್ದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಡಿಸೆಂಬರ್ 12 ಕ್ಕೆ ಮುಂದೂಡಿಕೆ ಮಾಡಲಾಗಿದೆ.
ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಡಿ.11ರಂದು ಜಿಟಿಟಿಸಿ ನೇಮಕ ಪರೀಕ್ಷೆ ಡಿ.12ಕ್ಕೆ ಮುಂದೂಡಿಕೆಯಾಗಿದೆ. ಉಳಿದಂತೆ ಡಿ.14ರಂದು ನಿಗದಿಯಾಗಿದ್ದ ಗ್ರೇಡ್ 2 ಅಧಿಕಾರಿಗಳ ಹುದ್ದೆ ಪರೀಕ್ಷೆ ವೇಳಾ ಪಟ್ಟಿ ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದೆ.
ಪಿಜಿ ವೈದ್ಯಕೀಯ ದಾಖಲೆ ಸಲ್ಲಿಕೆ
GTTC ಜೊತೆಗೆ, PG ವೈದ್ಯಕೀಯ ಕೋರ್ಸ್‌ಗಳಿಗೆ ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸುವ ಅರ್ಹ ಅಭ್ಯರ್ಥಿಗಳಿಗೆ ದಾಖಲೆ ಸಲ್ಲಿಕೆಗಳನ್ನು KEA ಪ್ರಕಟಿಸಿದೆ. ಅಭ್ಯರ್ಥಿಗಳು ಡಿಸೆಂಬರ್ 6 ಮತ್ತು 17 ರ ನಡುವೆ ತಮ್ಮ ವರ್ಗವನ್ನು ಆಧರಿಸಿ KEA ಕಚೇರಿಯಲ್ಲಿ ಮೂಲ ದಾಖಲೆಗಳನ್ನು ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗಾಗಿ, KEA ವೆಬ್‌ಸೈಟ್‌ಗೆ ಭೇಟಿ ನೀಡಬಹುದು.