The taste of the elite at Manik Shah Maidan was appreciated: Government recognizes prison bakery products
x

ಕಾರಾಗೃಹದಲ್ಲಿ ತಯಾರಿಸಿದ ಸಿಹಿ ತಿನಿಸುಗಳನ್ನು ಪ್ಯಾಕ್‌ ಮಾಡುತ್ತಿರುವುದು. 

ಕೈದಿಗಳ ಕೈರುಚಿ: ಗಣರಾಜ್ಯೋತ್ಸವದಲ್ಲಿ ಗಣ್ಯರು ಚಪ್ಪರಿಸಿದರು ಬೇಕರಿ ಖಾದ್ಯ!

ಬೇಕರಿ ಉತ್ಪನ್ನಗಳನ್ನು ತಯಾರಿಸಲು ತರಬೇತಿ ಪಡೆದುಕೊಳ್ಳುವ ಮೂಲಕ ಕೈದಿಗಳು ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲಿದ್ದಾರೆ. ಇದರಿಂದ ಜೈಲಿನೊಳಗೆ ಮಾನಸಿಕವಾಗಿ ಕುಗ್ಗಿಹೋಗಿರುವವರಿಗೆ ಮನೋಬಲವು ಹೆಚ್ಚಾಗಲಿದೆ.


Click the Play button to hear this message in audio format

ನಾಡಿನಾದ್ಯಂತ ಗಣರಾಜ್ಯೋತ್ಸವದ ಸಂಭ್ರಮ ಎಲ್ಲಡೆ ಪಸರಿಸಿದ್ದರೆ, ಬೆಂಗಳೂರಿನ ಮಾಣಿಕ್‌ ಷಾ ಮೈದಾನದಲ್ಲಿ ರಾಜ್ಯಪಾಲರು ಕಾರ್ಯಕ್ರಮ ಮುಗಿಸಿದ ನಂತರ ಸಿಹಿಯ ಕಂಪು ಎಲ್ಲೆಡೆ ಆವರಿಸಿತ್ತು. ಅದಕ್ಕೆ ಕಾರಣ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ತಯರಾದದ ಬೇಕರಿ ಉತ್ಪನ್ನಗಳು!

ಕಾರಾಗೃಹದ ಒಳಗಡೆ ಇರುವ ಪರಿವರ್ತನಾ ಬೇಕರಿಯಲ್ಲಿ ತಯಾರಿಸುವ ಬ್ರೆಡ್‌, ಕಪ್‌ಕೇಕ್‌, ಮಿಕ್ಶ್ಚರ್‌, ಬಿಸ್ಕಿಟ್ ಸೇರಿದಂತೆ ಹಲವು ಖಾದ್ಯಗಳನ್ನು ತಯಾರಿಸಿ ʼನವ ಸಂಕಲ್ಪʼ ಬಾಕ್ಸ್‌ಗಳನ್ನು ಮೂಲಕ ಗಣರಾಜ್ಯೋತ್ಸವಕ್ಕೆ ಆಗಮಿಸಿದ ಅತಿಥಿಗಳು ಹಾಗೂ ಗಣ್ಯರಿಗೆ ನೀಡಲಾಗಿದೆ. ಈ ಮೂಲಕ ಜೈಲಿನಲ್ಲಿ ತಯಾರಿಸುವ ಉತ್ಪನ್ನಗಳಿಗೆ ಸರ್ಕಾರ ಪ್ರಚಾರ ನೀಡಿದಂತಾಗಿದೆ.

ತರಬೇತಿ ಹೇಗೆ ?

ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿವಿಧ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರವ ಆಸಕ್ತ ಕೈದಿಗಳಿಗೆ ಗುಣಮಟ್ಟದ ಬೇಕರಿ ಉತ್ಪನ್ನಗಳನ್ನು ತಯಾರಿಸಲು ಎಚ್‌ಸಿಎಲ್‌ ಕಂಪನಿಯು ತರಬೇತಿ ನೀಡಿದ್ದರ ಫಲವಾಗಿ ಇಂದು ಉತ್ಕೃಷ್ಟ ಸಿಹಿ ತಿನಿಸುಗಳು ಗಣ್ಯರ ಹಾಗೂ ಗ್ರಾಹಕರ ಕೈ ಸೇರುತ್ತಿವೆ.

ಸಿಹಿ ತಿನಿಸು ತಯಾರಿಸುತ್ತಿರುವ ಕೈದಿಗಳು

ಮನೋಬಲ ಹೆಚ್ಚಳ

ಬೇಕರಿ ಉತ್ಪನ್ನಗಳನ್ನು ತಯಾರಿಸಲು ತರಬೇತಿ ಪಡೆದುಕೊಳ್ಳುವ ಮೂಲಕ ಕೈದಿಗಳು ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲಿದ್ದಾರೆ. ಇದರಿಂದ ಜೈಲಿನೊಳಗೆ ಮಾನಸಿಕವಾಗಿ ಕುಗ್ಗಿಹೋಗಿರುವವರಿಗೆ ಈ ರೀತಿಯಾದ ಕೆಲಸ ನೀಡುವುದರಿಂದ ಕೈದಿಗಳ ಮನೋಬಲವು ಹೆಚ್ಚಾಗತ್ತದೆ. ತಾವು ದುಡಿದ ಹಣವನ್ನು ತಮ್ಮ ಕುಟುಂಬಕ್ಕೆ ನೀಡುವ ಮೂಲಕ ಆರ್ಥಿಕ ಸಹಾಯವೂ ಮಾಡಿದಂತಾಗುತ್ತದೆ.

ಈವರೆಗೂ ಕೇವಲ ಕಾರಾಗೃಹದ ಒಳಗಡೆ ಇರುವ ಮಳಿಗೆಗಳು ಹಾಗೂ ಹೊರಗಡೆ ಇರುವ ಅಂಗಡಿ ಮಳಿಗೆಗಳಿಗೆ ಬೇಕರಿ ಉತ್ಪನ್ನಗಳನ್ನು ನೀಡಲಾಗುತ್ತಿದ್ದು, ಮಂದಿನ ದಿನಗಳಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಸಿದ್ಧತೆ ನಡೆಸಿದ್ದಾರೆ.

ಪ್ಯಾಕ್‌ ಮಾಡುತ್ತಿರುವ ಕೈದಿಗಳು

ಜೈಲಿನಲ್ಲಿ ತಯಾರಾಗುವ ಇತರೆ ಉತ್ಪನ್ನಗಳು

ಕಾರಾಗೃಹದಲ್ಲಿ ತಯಾರಾಗುವ ಜಮಖಾನ ಮತ್ತು ರತ್ನಗಂಬಳಿಗಳಗೆ ಹೆಚ್ಚಿನ ಬೇಡಿಕೆಯಿದೆ, ಇಲ್ಲಿಯೇ ಗಾರ್ಮೆಂಟ್ ಘಟಕವಿದ್ದು, ಕೈದಿಗಳು ವಿವಿಧ ಬಟ್ಟೆಗಳನ್ನು ಹೊಲಿಯುತ್ತಾರೆ. ರಾಜ್ಯ ಪೊಲೀಸ್ ಸಿಬ್ಬಂದಿಯ ಸಮವಸ್ತ್ರಗಳನ್ನು ಹೊಲಿಯುವ ಯೋಜನೆಯೂ ಇದರಲ್ಲಿ ಸೇರಿದೆ. ಮರಗೆಲಸದ ಘಟಕದಲ್ಲಿ ವಿವಿಧ ರೀತಿಯ ಪೀಠೋಪಕರಣಗಳನ್ನು ತಯಾರಿಸಲಾಗುತ್ತದೆ. ಸ್ವಚ್ಛತೆಗೆ ಬಳಸುವ ಸೋಪು ಮತ್ತು ಶೌಚಾಲಯ ಶುದ್ಧೀಕರಿಸುವ ಫಿನೈಲ್‌ನಂತಹ ದ್ರಾವಣಗಳನ್ನು ಕೈದಿಗಳು ತಯಾರಿಸುತ್ತಾರೆ. ಈ ಉತ್ಪನ್ನಗಳ ಮಾರಾಟದಿಂದ ಬರುವ ಆದಾಯದ ಒಂದು ಭಾಗವನ್ನು ಕೈದಿಗಳ ಕಲ್ಯಾಣ ನಿಧಿಗೆ ಬಳಸಲಾಗುತ್ತದೆ.

ಕಾರಾಗೃಹ ಮತ್ತು ಸೇವಾ ಸುಧಾರಣಾ ಇಲಾಖೆಯ ಡಿಜಿಪಿ ಅಲೋಕ್‌ ಕುಮಾರ್‌ ತಮ್ಮ ಸಾಮಾಜಿಕ ಜಾಲತಾಣ ʼಎಕ್ಸ್‌ʼನಲ್ಲಿ ಕಾರಾಗೃದಲ್ಲಿ ತಯಾರಿಸುವ ಸಿಹಿ ತಿನಿಸುಗಳ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ.

Read More
Next Story