ಕನಿಷ್ಠ ವೇತನಕ್ಕೆ ಆಗ್ರಹ | ಬೆಂಗಳೂರಿನಲ್ಲಿ ಗ್ರಾ.ಪಂ. ನೌಕರರ ಬೃಹತ್‌ ಪ್ರತಿಭಟನೆ | Gram Panchayat employees Demand to pay a minimum wage
ಕನಿಷ್ಠ ವೇತನಕ್ಕೆ ಆಗ್ರಹ | ಬೆಂಗಳೂರಿನಲ್ಲಿ ಗ್ರಾ.ಪಂ. ನೌಕರರ ಬೃಹತ್‌ ಪ್ರತಿಭಟನೆ
x

ಕನಿಷ್ಠ ವೇತನಕ್ಕೆ ಆಗ್ರಹ | ಬೆಂಗಳೂರಿನಲ್ಲಿ ಗ್ರಾ.ಪಂ. ನೌಕರರ ಬೃಹತ್‌ ಪ್ರತಿಭಟನೆ


ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡುವ ವಾಹನ ಚಾಲಕರ ಮತ್ತು ಸಹಾಯಕಿಯರಿಗೆ ಮಾಸಿಕ ಕನಿಷ್ಠ 26 ಸಾವಿರ ವೇತನವನ್ನು ನಿಗದಿಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಸದಸ್ಯರು ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.

ಈ ಪ್ರತಿಭಟನೆಯಲ್ಲಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಸಂಚಾಲಕರಾದ ಎಂ.ಬಿ. ನಾಡಗೌಡ, ಡಿ.ಎಂ. ಮಲಿಯಪ್ಪ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಗ್ರಾಮ ಪಂಚಾಯಿತಿ ಚಾಲಕರು ಹಾಗೂ ನೂರಾರು ಮಹಿಳಾ ಸಿಬ್ಬಂದಿ ಭಾಗವಹಿಸಿದ್ದರು.

ನೌಕರರ ಬೇಡಿಕೆಗಳು

  • ಗ್ರಾಮ ಪಂಚಾಯಿತಿಯ ಒಂದು ವಾಹನಕ್ಕೆ ಒಬ್ಬ ಚಾಲಕನನ್ನು ನೇಮಿಸಬೇಕು.
  • ಕೆಲಸದ ಸಂದರ್ಭದಲ್ಲಿ ಮರಣ ಹೊಂದಿದರೆ ಚಾಲಕರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಬೇಕು.
  • ಪ್ರತಿ ತಿಂಗಳ 5ನೇ ತಾರೀಖಿನೊಳಗೆ ವೇತನ ನೀಡಬೇಕು.
  • ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಗುರುತಿನ ಚೀಟಿ ವಿತರಿಸಬೇಕು.
  • ಮಹಿಳಾ ಸಿಬ್ಬಂದಿಗೆ 6 ತಿಂಗಳ ಹೆರಿಗೆ ರಜೆ ನೀಡಬೇಕು.
  • ತರಬೇತಿ ಪಡೆದ ಎಲ್ಲ ಸ್ವಚ್ಛ ವಾಹಿನಿಯ ಚಾಲಕರಿಗೆ ವಾಹನ ನೀಡಬೇಕು.
  • ಕಸ ವಿಲೇವಾರಿ ತರಬೇತಿ ಪಡೆದವರಿಗೆ ಕೆಲಸ ನೀಡಬೇಕು.
Read More
Next Story