ಪದವಿ ಪ್ರವೇಶಕ್ಕೆ ಸಿಇಟಿ | ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಸೀಟ್ ಲಭ್ಯ
ರಾಜ್ಯದ ಖಾಸಗಿ ಕಾಲೇಜುಗಳಲ್ಲಿ ಇನ್ನು ಮುಂದೆ 40% ಸರ್ಕಾರಿ ಕೋಟಾದಡಿಯಲ್ಲಿ ಪದವಿ ಸೀಟ್ ಗಳನ್ನ ಸರ್ಕಾರಕ್ಕೆ ಪಡೆಯಲು ಉನ್ನತ್ತ ಶಿಕ್ಷಣ ಇಲಾಖೆ ಮುಂದಾಗಿದೆ.
ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಸೀಟ್ ಹಂಚಿಕೆ ಮಾದರಿಯಂತೆ ಪದವಿ ಕೋರ್ಸ್ ಗಳಿಗೂ ಸೀಟ್ ಹಂಚಿಕೆಗೆ ಉನ್ನತ್ತ ಶಿಕ್ಷಣ ಇಲಾಖೆ ಮುಂದಾಗಿದ್ದು, ರಾಜ್ಯದ ಖಾಸಗಿ ಕಾಲೇಜುಗಳಲ್ಲಿ ಇನ್ನು ಮುಂದೆ ಸರ್ಕಾರಿ ಕೋಟಾದಡಿ 40% ಪದವಿ ಸೀಟ್ ಗಳನ್ನು ಸರ್ಕಾರಕ್ಕೆ ಪಡೆಯಲು ಉನ್ನತ್ತ ಶಿಕ್ಷಣ ಇಲಾಖೆ ಮುಂದಾಗಿದೆ.
ಈ ಹಿಂದೆ ಖಾಸಗಿ ಪದವಿ ಕಾಲೇಜುಗಳು 100 ಕ್ಕೆ 100 ಮ್ಯಾನೇಜಮೆಂಟ್ ಕೋಟಾದಡಿ ಸೀಟ್ ನೀಡಿ ಪದವಿ ದಾಖಲಾತಿ ಪಡೆಯುತ್ತಿದ್ದರು. ಇದ್ದರಿಂದ ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಓದಲು ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಶುಲ್ಕ ಕಟ್ಟಲಾಗದೆ ಪರದಾಡುತ್ತಿದ್ದರು.
ಹೀಗಾಗಿ ಸರ್ಕಾರ ಪದವಿ ಖಾಸಗಿ ಕಾಲೇಜುಗಳಲ್ಲಿ ಕಾನೂನಾತ್ಮಕವಾಗಿ ಬರಬೇಕಾದ 40% ಸರ್ಕಾರಿ ಕೋಟಾದ ಸೀಟ್ ಗಳನ್ನು ಈ ವರ್ಷದಿಂದ ಪಡೆಯಲು ಮುಂದಾಗಿದೆ. ಈ ಸೀಟ್ ಗಳ ಹಂಚಿಕೆಗೆ ಮುಂದಿನ ವರ್ಷದಿಂದ ಎಲ್ಲ ವಿವಿಗಳ ಪದವಿ ಕೋರ್ಸ್ ಗೆ ಹಾಗೂ ಪಿಜಿ ಕೋರ್ಸ್ ಗೆ CET ಪರೀಕ್ಷೆ ನಡೆಸಲು ಮುಂದಾಗಿದೆ.
ಈಗಾಗಲೇ 17 ಖಾಸಗಿ ವಿಶ್ವವಿದ್ಯಾಲಯಗಳಿಂದಲೂ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಬಹುತೇಕ ಖಾಸಗಿ ವಿವಿಗಳು ಈಗಾಗಲೇ CET ಪರೀಕ್ಷೆ ನಡೆಸಲು ಒಪ್ಪಿಕೊಂಡಿವೆ. 2024-25 ನೇ ಸಾಲಿನ ಪದವಿ ಕೋರ್ಸ್ ಗಳ ದಾಖಲಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಸರ್ಕಾರಿ ಹಾಗೂ ಖಾಸಗಿ ವಿವಿಗಳಲ್ಲಿನ ಸೀಟ್ ಹಂಚಿಕೆಗೆ ಉನ್ನತ್ತ ಶಿಕ್ಷಣ ಇಲಾಖೆ ಮುಂದಾಗಿದೆ.
CET ಪರೀಕ್ಷೆಯ ಮೂಲಕವೇ ಪದವಿ ಸೀಟ್ ಹಂಚಿಕೆಗೆ ಪ್ಲಾನ್ ರೂಪಿಸಿದ್ದು, ಎಲ್ಲ ವಿವಿಗಳ ನಡುವೆ ಕಾಮನ್ ಎಂಟ್ರೆನ್ಸ್ ಪರೀಕ್ಷೆ ನಡೆಸಿ 2025-26 ರಿಂದ ಖಾಸಗಿ ವಿವಿಗಳಲ್ಲಿಯೂ ಸೀಟ್ ಹಂಚಿಕೆಗೆ ಇಲಾಖೆ ಮುಂದಾಗಿದೆ.
ಕೆಇಎ ಅಥವಾ ಕಾಮೆಡ್ ಕೆ ಮಾದರಿಯಲ್ಲಿ ಪರೀಕ್ಷೆ ಅಥವಾ ಆಯ್ಕೆ ಪ್ರಕ್ರಿಯೆ ನಡೆಸಿ ವಿದ್ಯಾರ್ಥಿಗಳಿಗೆ ಖಾಸಗಿ ಕಾಲೇಜುಗಳಲ್ಲಿ ಪದವಿ ಕೋರ್ಸ್ ಸೀಟ್ ಗಳನ್ನ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.