MahaKumbh Stampede | ಸಹಾಯವಾಣಿ ಆರಂಭಿಸಿದ ರಾಜ್ಯ ಸರ್ಕಾರ; ಪ್ರಯಾಗ್‌ರಾಜ್‌ಗೆ ಅಧಿಕಾರಿಗಳ ತಂಡ ರವಾನೆ
x
ಸಚಿವ ಕೃಷ್ಣಬೈರೇಗೌಡ

MahaKumbh Stampede | ಸಹಾಯವಾಣಿ ಆರಂಭಿಸಿದ ರಾಜ್ಯ ಸರ್ಕಾರ; ಪ್ರಯಾಗ್‌ರಾಜ್‌ಗೆ ಅಧಿಕಾರಿಗಳ ತಂಡ ರವಾನೆ

ಮಹಾಕುಂಭಮೇಳಕ್ಕೆ ಹೊರಟು ಕುಟುಂಬಸ್ಥರ ಸಂಪರ್ಕಕ್ಕೆ ಸಿಗದವರ ಬಗ್ಗೆ ಸಹಾಯವಾಣಿ 080-22340676 ಸಂಖ್ಯೆಗೆ ಮಾಹಿತಿ ನೀಡುವಂತೆ ಸರ್ಕಾರ ಕೋರಿದೆ.


ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ನಾಪತ್ತೆಯಾದವರ ಕನ್ನಡಿಗರ ನೆರವಿಗಾಗಿ ರಾಜ್ಯ ಸರ್ಕಾರ ಸಹಾಯವಾಣಿ ಆರಂಭಿಸಿದೆ. ಮಹಾಕುಂಭಮೇಳಕ್ಕೆ ಹೊರಟು ಕುಟುಂಬಸ್ಥರ ಸಂಪರ್ಕಕ್ಕೆ ಸಿಗದವರ ಬಗ್ಗೆ ಸಹಾಯವಾಣಿ 080-22340676 ಸಂಖ್ಯೆಗೆ ಮಾಹಿತಿ ನೀಡುವಂತೆ ಸರ್ಕಾರ ಕೋರಿದೆ.

ಬೆಳಗಾವಿ ಜಿಲ್ಲೆಯಿಂದ 500 ಕ್ಕಿಂತ ಹೆಚ್ಚು ಯಾತ್ರಿಗಳು ಮಹಾಕುಂಭಮೇಳಕ್ಕೆ ತೆರಳಿರುವ ಮಾಹಿತಿ ಇದೆ. ಉತ್ತರ ಪ್ರದೇಶ ಸರ್ಕಾರ ಈವರೆಗೆ ಮೃತಪಟ್ಟವರು ಹಾಗೂ ಗಾಯಾಳುಗಳ ವಿವರ ನೀಡಿಲ್ಲ. ಹಾಗಾಗಿ ಕನ್ನಡಿಗರ ಹಿತರಕ್ಷಣೆಗಾಗಿ ಒಬ್ಬ ಐಎಎಸ್‌ ಅಧಿಕಾರಿ, ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ಹಾಗೂ ಪೊಲೀಸ್ ಅಧಿಕಾರಿಯನ್ನು ಒಳಗೊಂಡ ತಂಡವನ್ನು ಪ್ರಯಾಗ್‌ರಾಜ್‌ಗೆ ಕಳುಹಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ರಾಜ್ಯದ ವಿಪತ್ತು ನಿರ್ವಹಣಾ ತಂಡದ ಅಧಿಕಾರಿಗಳು ಉತ್ತರಪ್ರದೇಶ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಆದರೆ, ಉತ್ತರಪ್ರದೇಶ ಸರ್ಕಾರ ಸರಿಯಾದ ಮಾಹಿತಿ ವಿನಿಮಯ ಮಾಡುತ್ತಿಲ್ಲ. ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಅವರೇ ಖುದ್ದು ಕುಂಭಮೇಳಕ್ಕೆ ತೆರಳಿದವರ ಕುಟುಂಬದವರನ್ನು ಸಂಪರ್ಕಿಸಿ ಮಾಹಿತಿ ಪಡೆಯುತ್ತಿದ್ದಾರೆ. ಇದರಿಂದಾಗಿ ನಾಲ್ವರು ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದರು.

Read More
Next Story