UKP Project| ಕೇಂದ್ರ ವಿಳಂಬದ ನಡುವೆಯೂ ಆಲಮಟ್ಟಿ ಜಲಾಶಯ ಎತ್ತರಿಸಲು ಕರ್ನಾಟಕ ಪಣ
ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವುದರಿಂದ ಹೆಚ್ಚುವರಿ ನೀರು ಸಂಗ್ರಹವಾಗಲಿದೆ. ಕರ್ನಾಟಕಕ್ಕೆ 177ಟಿಎಂಸಿ ಜೊತೆಗೆ ಹೆಚ್ಚುವರಿ ನೀರು ದೊರೆಯಲಿದೆ. ಈಗಾಗಲೇ ಕೃಷ್ಣಾ ಮೇಲ್ದಂಡೆ ಯೋಜನೆ ಮೊದಲ ಹಾಗೂ ಎರಡನೇ ಹಂತದ ಮೂಲಕ ಸಾಕಷ್ಟು ಬರಪೀಡಿತ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದಿಂದ 130.90 ಟಿಎಂಸಿ ನೀರು ದೊರೆಯಲಿದೆ. ಹಾಗಾಗಿ ಜಲಾಶಯ ಎತ್ತರಿಸಲು ನಿರ್ಧರಿಸಿದೆ.
ಆಲಮಟ್ಟಿ ಜಲಾಶಯ ಎತ್ತರಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಪುನರುಚ್ಚರಿಸಿದೆ. ಜಲಾಶಯದ ಎತ್ತರವನ್ನು 519.60 ಮೀಟರ್‌ನಿಂದ 524.25 ಮೀಟರ್‌ಗೆ ಎತ್ತರಿಸಿ, ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ ಪೂರ್ಣಗೊಳಿಸುವ ವಾಗ್ದಾನವನ್ನೂ ನೀಡಿದೆ.
ಇತ್ತ ಜಲಾಶಯ ಎತ್ತರಿಸುವ ರಾಜ್ಯದ ಪ್ರಸ್ತಾವಕ್ಕೆ ತಗಾದೆ ತೆಗೆದಿದ್ದ ಆಂಧ್ರಪ್ರದೇಶ ಹೆಚ್ಚುವರಿ ನೀರಿನ ಭರವಸೆ ಬಳಿಕ ಸುಮ್ಮನಾಗಿದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಜಲಾಶಯ ಎತ್ತರಿಸುವ ಹಾಗೂ ಕೃಷ್ಣ ನಾಯ್ಯಾಧೀಕರಣ-2ರ ತೀರ್ಪಿನ ಅಧಿಸೂಚನೆ ಪ್ರಕಟಿಸಲು ಮೀನಾಮೇಷ ಎಣಿಸುತ್ತಿದೆ.
ಆಲಮಟ್ಟಿ ಅಣೆಕಟ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕ ರಾಜ್ಯಗಳೊಂದಿಗೆ ಚರ್ಚೆ ನಡೆಸಿ, ಇತ್ಯರ್ಥಪಡಿಸಬೇಕು. ಕೃಷ್ಣಾ ನ್ಯಾಯಾಧೀಕರಣ-2ರ ಅಂತಿಮ ತೀರ್ಪಿಗೆ ಗೆಜೆಟ್ ಅಧಿಸೂಚನೆ ಪ್ರಕಟಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಕೆಲ ತಿಂಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದರು.
ಹೀಗಿರುವಾಗ ರಾಜ್ಯ ಸರ್ಕಾರದ "ಆಲಮಟ್ಟಿ ಜಲಾಶಯ ಎತ್ತರಿಸುವ" ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಕಾನೂನು ಸಚಿವ ಎಚ್.ಕೆ. ಪಾಟೀಲ್ ಹಾಗೂ ಉತ್ತರ ಕರ್ನಾಟಕದ ನೀರಾವರಿ ಹೋರಾಟಗಾರರ ಸಭೆಯಲ್ಲಿ ಆಲಮಟ್ಟಿ ಜಲಾಶಯದ ನೀರಿನ ಸoಗ್ರಹ ಮಟ್ಟ ಎತ್ತರಿಸಿ ಕೃಷ್ಣಾ ಮೇಲ್ದoಡೆ ಯೋಜನೆ ಹoತ-3 ಪೂರ್ಣಗೊಳಿಸಲು ನಿರ್ಧಾರ ಪ್ರಕಟವಾಗಿದೆ.
ಈ ಸಂಬಂಧ ಕೇಂದ್ರ ಸರ್ಕಾರದ ವಿಳಂಬ ನೀತಿ ನಡುವೆ ಸರ್ಕ ನಡೆ ಏನು, ಕೃಷ್ಣ ಮೇಲ್ದಂಡೆ ಯೋಜನೆ ಮೂರನೇ ಹಂತದ ಅನುಕೂಲಗಳೇನು ಎಂಬ ವಿವರ ಇಲ್ಲಿದೆ.
ಜಲಾಶಯ ಎತ್ತರದ ವಿವಾದ
ಆಲಮಟ್ಟಿ ಜಲಾಶಯದ ಎತ್ತರವನ್ನು ಸುಪ್ರೀಂಕೋರ್ಟ್ 160 ಅಡಿಗೆ ನಿರ್ಬಂಧಿಸಿತ್ತು.ಆದರೆ, ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಸಂಗ್ರಹಿಸಲು ಜಲಾಶಯದ ಮಟ್ಟ ಎತ್ತರಿಸುವ ಸಂಬಂಧ ಕರ್ನಾಟಕ ಸರ್ಕಾರ ಪ್ರಸ್ತಾವ ಸಲ್ಲಿಸಿತ್ತು. 2013 ನ.29 ರಲ್ಲಿ ಕೃಷ್ಣಾ ನ್ಯಾಯಾಧೀಕರಣ-2 ರಾಜ್ಯ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿತ್ತು. ಜಲಾಶಯದಲ್ಲಿ ಸುಮಾರು 200 ಟಿಎಂಸಿ ಸಂಗ್ರಹ ಸಾಮರ್ಥ್ಯದೊಂದಿಗೆ 524 ಮೀಟರ್ ಎತ್ತರಿಸಲು ಆದೇಶ ನೀಡಿತ್ತು. ಆದರೆ, ಆಂಧ್ರಪ್ರದೇಶ ಸರ್ಕಾರ ವಿರೋಧ ವ್ಯಕ್ತಪಡಿಸಿ ಪ್ರಶ್ನಿಸಿತ್ತು. ನಾಗಾರ್ಜುನ ಸಾಗರ, ಶ್ರೀಶೈಲಂ ಅಣೆಕಟ್ಟೆಗಳಿಗೆ ನೀರಿನ ಹರಿವು ಕಡಿಮೆಯಾಗಲಿದೆ ಎಂಬುದು ಆಂಧ್ರದ ವಾದವಾಗಿತ್ತು. ಆದರೆ, ಆಂಧ್ರದ ಅರ್ಜಿಯನ್ನು ತಿರಸ್ಕರಿಸಿದ್ದ ನ್ಯಾಯಾಧೀಕರಣ 4 ಟಿಎಂಸಿ ಹೆಚ್ಚುವರಿ ನೀರು ಕೊಡಲು ಆದೇಶಿಸಿತ್ತು.
ಈ ಹಿಂದೆ ಕೃಷ್ಣ ನ್ಯಾಯಾಧೀಕರಣ 1 ರ ತೀರ್ಪಿನಲ್ಲಿ ಮಹಾರಾಷ್ಟ್ರಕ್ಕೆ 81ಟಿಎಂಸಿ, ಕರ್ನಾಟಕಕ್ಕೆ 177 ಟಿಎಂಸಿ ಹಾಗೂ ಆಂಧ್ರಪ್ರದೇಶಕ್ಕೆ 190 ಟಿಎಂಸಿ ನೀರು ಹಂಚಿಕೆ ಮಾಡಲಾಗಿತ್ತು.
ಜಲಾಶಯ ಎತ್ತರಿಸಿದರೆ ರಾಜ್ಯಕ್ಕೆ ಲಾಭವೇನು?
ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವುದರಿಂದ ಹೆಚ್ಚುವರಿ ನೀರು ಸಂಗ್ರಹವಾಗಲಿದೆ. ಕರ್ನಾಟಕಕ್ಕೆ 177ಟಿಎಂಸಿ ಜೊತೆಗೆ ಹೆಚ್ಚುವರಿ ನೀರು ದೊರೆಯಲಿದೆ. ಈಗಾಗಲೇ ಕೃಷ್ಣಾ ಮೇಲ್ದಂಡೆ ಯೋಜನೆ ಮೊದಲ ಹಾಗೂ ಎರಡನೇ ಹಂತದ ಮೂಲಕ ಸಾಕಷ್ಟು ಬರಪೀಡಿತ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದಿಂದ 130.90 ಟಿಎಂಸಿ ನೀರು ದೊರೆಯಲಿದೆ. ಹಾಗಾಗಿ ಜಲಾಶಯ ಎತ್ತರಿಸಲು ನಿರ್ಧರಿಸಿದೆ.
ಜಲಾಶಯ ಎತ್ತರವನ್ನು 524.256 ಮೀಟರ್‌ಗೆ ಹೆಚ್ಚಿಸುವುದರಿಂದ ಸುಮಾರು 188 ಗ್ರಾಮಗಳು ಮುಳುಗಡೆಯಾಗಲಿವೆ. ಮುಳುಗಡೆ ಸಂತಸ್ಥರಿಗೆ ಪುನರ್ವಸತಿ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಮುಳುಗಡೆ ಗ್ರಾಮಗಳೆಷ್ಟು?
ಅಣೆಕಟ್ಟು ಎತ್ತರಿಸುವುದರಿಂದ 188 ಹಳ್ಳಿಗಳು ಹಿನ್ನೀರಿನಿಂದ ಮುಳುಗಡೆ ಆಗಲಿವೆ. ಭೂಮಿ ಕಳೆದುಕೊಂಡ ರೈತರಿಗೆ ಅಗತ್ಯ ಪುನರ್ವಸತಿ ಹಾಗೂ ಕಾಲುವೆ ನಿರ್ಮಾಣಕ್ಕಾಗಿ 1,33,867 ಎಕರೆ ಭೂಮಿ ಅಗತ್ಯವಾಗಿದೆ. ಇದರಲ್ಲಿ ಈಗಾಗಲೇ 28,967 ಎಕರೆ ಸ್ವಾಧೀನವಾಗಿದೆ. ಉಳಿದ 1,04,963 ಎಕರೆ ಸ್ವಾಧೀನಕ್ಕೆ ಬಾಕಿ ಇದೆ. ಭೂಸ್ವಾಧೀನ ಹಾಗೂ ವೈಜ್ಞಾನಿಕ ಪರಿಹಾರ ಕೋರಿ ನ್ಯಾಯಾಲಯದಲ್ಲಿ 20 ಸಾವಿರ ಪ್ರಕರಣಗಳು ದಾಖಲಾಗಿವೆ. ಈಗ ಆ ಪ್ರಕರಣಗಳನ್ನು ಹಿಂಪಡೆದು ಸಹಮತ ಮೂಲಕ ಬಗೆಹರಿಸಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. 2022ರಲ್ಲಿ ಹಿಂದಿನ ಸರ್ಕಾರ ಮುಳುಗಡೆಯಾಗುವ ಜಮೀನನ್ನು ಎರಡು ಹಂತದಲ್ಲಿ ಸ್ವಾಧೀನಕ್ಕೆ ನಿರ್ಧರಿಸಿತ್ತು. ಈಗ ಒಂದೇ ಹಂತದಲ್ಲಿ ಭೂಸ್ವಾಧೀನಕ್ಕೆ ಸರ್ಕಾರ ನಿರ್ಧರಿಸಿದೆ.
ವೈಜ್ಞಾನಿಕವಾದ ಪರಿಹಾರ ವಿತರಣೆ
ಜಲಾಶಯದ ಹಿನ್ನೀರಿನಿಂದ ಜಮೀನು ಕಳೆದುಕೊಳ್ಳುವ ರೈತರಿಗೆ ಭೂಸ್ವಾಧೀನ ಕಾಯ್ದೆಯಂತೆ ಜಮೀನಿನ ಮಾರುಕಟ್ಟೆ ದರ, ಆಸ್ತಿಯ ಮಾರ್ಗದರ್ಶಿ ಮೌಲ್ಯವನ್ನು ಗಮನದಲ್ಲಿರಿಸಿಕೊಂಡು ನ್ಯಾಯಯುತ ಪರಿಹಾರ ಒದಗಿಸಲು ಸರ್ಕಾರ ತೀರ್ಮಾನಿಸಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಅನುಷ್ಠಾನ ರೈತರಿಗಾಗಿಯೇ ನಡೆಯುತ್ತಿದೆ. ಪರಿಹಾರದ ವಿಷಯದಲ್ಲಿ ಸಹಮತದ ದರ ನಿಗದಿಪಡಿಸಲು ಎಲ್ಲರೂ ಮುಂದೆ ಬರಬೇಕು. ರೈತರಿಗೂ ಅನ್ಯಾಯವಾಗಬಾರದು, ಸರ್ಕಾರಕ್ಕೂ ಹೊರೆಯಾಗದoತೆ ನಿರ್ಣಯಕ್ಕೆ ಬರಬೇಕು ಎಂದು ಸರ್ಕಾರ ಕೋರಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ ಸುವರ್ಣ ವಿಧಾನಸೌಧದ ಸಮಿತಿ ಸಭಾಂಗಣದಲ್ಲಿ ಕೃಷ್ಣ ಮೇಲ್ದಂಡೆ ಯೋಜನೆ ಸಂಬಂಧ ಭೂಸ್ವಾಧೀನ, ಪುನರ್ವಸತಿ, ಪುನರ್ ನಿರ್ಮಾಣ ವಿಷಯಗಳ ಕುರಿತ ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಗಿದೆ.
ಮೇಲ್ದಂಡೆ ಯೋಜನೆ ಹಂತಗಳ ಪ್ರಯೋಜನ ಏನು?
1976ರಲ್ಲಿ ನ್ಯಾ. ಆರ್.ಎಸ್.ಬಚಾವತ್ ನೇತೃತ್ವದ ಕೃಷ್ಣಾ ನ್ಯಾಯಾಧೀಕರಣ -1ರ ಪ್ರಕಾರ ಕರ್ನಾಟಕಕ್ಕೆ 173 ಟಿಎಂಸಿ ಅಡಿ ನೀರು ನಿಗದಿಯಾಗಿತ್ತು. ಈ ನೀರನ್ನು ಉತ್ತರ ಕರ್ನಾಟಕದ ಬರ ಪೀಡಿತ ಜಿಲ್ಲೆಗಳ ನೀರಾವರಿಗೆ ಒದಗಿಸಲು ಕೃಷ್ಣ ಮೇಲ್ದಂಡೆ ಯೋಜನೆ 1 ಹಾಗೂ 2 ನೇ ಹಂತ ಸಿದ್ಧಪಡಿಸಿತ್ತು. ಮೊದಲ ಹಂತದಲ್ಲಿ ನಾರಾಯಣಪುರ, ಆಲಮಟ್ಟಿ ಡ್ಯಾಂಗಳ ಮೂಲಕ 4.25 ಲಕ್ಷ ಹೆಕ್ಟೇರ್ ನೀರಾವರಿ ಕಲ್ಪಿಸಿದರೆ, 2ನೇ ಹಂತದಲ್ಲಿ 1.97 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿತ್ತು. 1ನೇ ಹಂತ 1990ರಲ್ಲಿ ಪೂರ್ಣವಾದರೆ, 2ನೇ ಹಂತ 2000 ನೇ ಸಾಲಿನಲ್ಲಿ ಪೂರ್ಣಗೊಂಡಿತ್ತು.