ಮೆಟ್ರೊ ಪ್ರಯಾಣಿಕರಿಗೆ ಸಿಹಿ ಸುದ್ದಿ, ಜೂನ್‌ನಲ್ಲಿ ಹಳದಿ ಮಾರ್ಗ ಸಂಚಾರ ಆರಂಭ?
x

ನಮ್ಮ ಮೆಟ್ರೊ ಹಳದಿ ರೈಲು (ಎಕ್ಸ್‌ ಖಾತೆಯಿಂದ)

ಮೆಟ್ರೊ ಪ್ರಯಾಣಿಕರಿಗೆ ಸಿಹಿ ಸುದ್ದಿ, ಜೂನ್‌ನಲ್ಲಿ ಹಳದಿ ಮಾರ್ಗ ಸಂಚಾರ ಆರಂಭ?

ಬೊಮ್ಮಸಂದ್ರ - ಆರ್‌.ವಿ. ರಸ್ತೆ ನಡುವಿನ ಈ ಮಾರ್ಗದಲ್ಲಿ ರೈಲು ಆರಂಭಗೊಳ್ಳಲು ಕನಿಷ್ಠ ಮೂರು ರೈಲುಗಳ ಅಗತ್ಯವಿದೆ. ಎರಡು ರೈಲುಗಳು ಈಗಾಗಲೇ ತಲುಪಿದ್ದು, ಮೂರನೇ ರೈಲಿಗಾಗಿ ಬಿಎಂಆರ್‌ಸಿಎಲ್‌ ಕಾಯುತ್ತಿದೆ.


ಪಶ್ಚಿಮ ಬಂಗಾಳದ ಟಿಟಾಗಢ ರೈಲ್‌ ಸಿಸ್ಟಂ ಲಿಮಿಟೆಡ್‌ ಕಾರ್ಯಾಗಾರದಲ್ಲಿ ʼನಮ್ಮ ಮೆಟ್ರೊʼ ಹಳದಿ ಮಾರ್ಗದ ಮೂರನೇ ರೈಲು ತಯಾರಾಗಿ ಪೂರೈಕೆಗೆ ಸಿದ್ಧವಾಗಿದ್ದು, ಕೆಲವೇ ದಿನಗಳಲ್ಲಿ ಬೆಂಗಳೂರಿಗೆ ಬರಲಿದೆ. ಜೂನ್‌ ವೇಳೆಗೆ ಹಳದಿ ಮಾರ್ಗದ ಮೆಟ್ರೋ ರೈಲು ಆರಂಭಿಸುವ ಗುರಿಯನ್ನು ಹೊಂದಲಾಗಿದೆ ಎಂದು ಬೆಂಗಳೂರು ಮೆಟ್ರೊ ರೈಲ್‌ ಕಾರ್ಪೋರೆಶನ್‌ ಲಿಮಿಟೆಡ್‌ (ಬಿಎಂಆರ್‌ಸಿಎಲ್‌) ತಿಳಿಸಿದೆ.

ಬೊಮ್ಮಸಂದ್ರ - ಆರ್‌.ವಿ. ರಸ್ತೆ ನಡುವಿನ ಈ ಮಾರ್ಗದಲ್ಲಿ ರೈಲು ಆರಂಭಗೊಳ್ಳಲು ಕನಿಷ್ಠ ಮೂರು ರೈಲುಗಳ ಅಗತ್ಯವಿದ್ದು, ಚಾಲಕ ರಹಿತ ಎಂಜಿನ ಹೊಂದಿರುವ ಎರಡು ರೈಲುಗಳು ಈಗಾಗಲೇ ಪೂರೈಕೆಯಾಗಿದ್ದು ಮೂರನೇ ರೈಲಿಗಾಗಿ ಬಿಎಂಆರ್‌ಸಿಎಲ್‌ ಕಾಯುತ್ತಿದೆ.

ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರು ರಸ್ತೆ, ಇನ್ಫೋಸಿಸ್‌ ಫೌಂಡೇಶನ್‌, ಎಲೆಕ್ಟ್ರಾನಿಕ್‌ ಸಿಟಿ, ಬೆರೆಟೇನ ಅಗ್ರಹಾರ, ಹೊಸ ರಸ್ತೆ, ಕೂಡ್ಲು ಗೇಟ್‌, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್‌ ಸಿಲ್ಕ್‌ ಬೋರ್ಡ್, ಬಿಟಿಎಂ ಲೇಔಟ್‌, ಜಯದೇವ, ರಾಗಿಗುಡ್ಡ, ಆರ್‌ವಿ ರಸ್ತೆ ನಿಲ್ದಾಣಗಳಿರುವ ಹಳದಿ ಮಾರ್ಗವು 18.8 ಕಿಲೋಮೀಟರ್‌ ಇದೆ. ಐಟಿ ಕಂಪನಿಗಳೇ ಹೆಚ್ಚಿರುವ (ಎಲೆಕ್ಟ್ರಾನಿಕ್‌ ಸಿಟಿ) ಬೆಂಗಳೂರು ದಕ್ಷಿಣ ಭಾಗಕ್ಕೆ ಸಂಪರ್ಕ ಕಲ್ಪಿಸುತ್ತದೆ.

ಈ ಮಾರ್ಗದಲ್ಲಿ ಒಟ್ಟು ಹದಿನಾಲ್ಕು ರೈಲುಗಳ ಅಗತ್ಯವಿದ್ದು, ಪ್ರತಿ ಹದಿನೈದು ನಿಮಿಷಗಳಿಗೆ ಒಂದು ರೈಲು ಸಂಚರಿಸಲು 8 ರೈಲುಗಳು ಇರಬೇಕಿದೆ. ಅರ್ಧಗಂಟೆಗೆ ಒಂದು ಟ್ರಿಪ್‌ ನಡೆಸಲು ಮೂರು ರೈಲುಗಳ ಅಗತ್ಯವಿದೆ. ಟಿಆರ್‌ಎಸ್‌ಎಲ್‌ ಕಾರ್ಯಾಗಾರದಲ್ಲಿ ಮೇಕ್‌ ಇನ್‌ ಇಂಡಿಯಾ ಅಡಿಯಲ್ಲಿ 36 ರೈಲುಗಳನ್ನು ತಯಾರಿಸಲಾಗುತ್ತಿದ್ದು ಅದರಲ್ಲಿ 34 ರೈಲುಗಳು ಬಿಎಂಆರ್‌ಸಿಎಲ್‌ಗೆ ಬರಲಿವೆ. 14 ರೈಲುಗಳು ಹಳದಿ ಮಾರ್ಗಕ್ಕೆ ಬಳಕೆಯಾಗಲಿದ್ದು, ಉಳಿದವು ಹಸಿರು ಮತ್ತು ನೇರಳೆ ಮಾರ್ಗದಲ್ಲಿರುವ ರೈಲುಗಳ ಕೊರತೆಯನ್ನು ನೀಗಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read More
Next Story