Golden opportunity for PUC and degree graduates; Applications invited for many positions
x

ಸಾಂದರ್ಭಿಕ ಚಿತ್ರ

ಪಿಯುಸಿ, ಪದವಿ ಪೂರೈಸಿದವರಿಗೆ ಸುವರ್ಣ ಅವಕಾಶ; ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು ಅಭ್ಯರ್ಥಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಸರ್ಕಾರ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷ ವಯೋ ಸಡಿಲಿಕೆ ನೀಡಲಾಗಿದೆ.


Click the Play button to hear this message in audio format

ಒಳ ಮೀಸಲಾತಿ ಗೊಂದಲದ ನಡುವೆಯೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ನಿಗಮದಲ್ಲಿ ಖಾಲಿಯಿರುವ 44 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ನ.14 ಕೊನೆಯ ದಿನಾಂಕವಾಗಿದೆ.

ಸರ್ಕಾರ ಒಳಮೀಸಲಾತಿ ಘೋಷಿಸಿದ ನಂತರ ಕೆಇಎ ಹೊರಡಿಸಿರುವ ಎರಡನೇ ನೇಮಕ ಅಧಿಸೂಚನೆಯಾಗಿದ್ದು, ಪದವಿ ಪೂರ್ವ ಹಾಗೂ ಪದವಿ ಪೂರೈಸಿರುವ ಸ್ಪರ್ಧಾತ್ಮಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಪರೀಕ್ಷೆಗೆ ಹಾಜರಾಗಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

ಯಾವೆಲ್ಲಾ ಹುದ್ದೆಗಳಿಗೆ ಅರ್ಜಿ ಆಹ್ವಾನ ?

ವ್ಯವಸ್ಥಾಪಕರು (ಗ್ರೂಪ್-ಎ), ಸಹಾಯಕ ವ್ಯವಸ್ಥಾಪಕರು (ಗ್ರೂಪ್-ಬಿ), ಹಿರಿಯ ಸಹಾಯಕರು ಮತ್ತು ಕಿರಿಯ ಸಹಾಯಕರು (ಗ್ರೂಪ್-ಸಿ), ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಸಿವಿಲ್)(ಗ್ರೂಪ್ -ಎ), ಸಹಾಯಕ ಎಂಜಿನಿಯರ್‌ (ಸಿವಿಲ್) (ಗ್ರೂಪ್-ಬಿ), ಸಹಾಯಕ ಎಂಜಿನಿಯರ್‌ (ವಿದ್ಯುತ್) (ಗ್ರೂಪ್-ಬಿ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವೇತನ

ವ್ಯವಸ್ಥಾಪಕರು (ಗ್ರೂಪ್-ಎ) ಹುದ್ದೆಗೆ 43,100 ರೂ, ಸಹಾಯಕ ವ್ಯವಸ್ಥಾಪಕರು (ಗ್ರೂಪ್-ಬಿ) ಹುದ್ದೆಗೆ 37,900 ರೂ, ಹಿರಿಯ ಸಹಾಯಕರು ಹುದ್ದೆಗೆ 30,350 ರೂ, ಕಿರಿಯ ಸಹಾಯಕರು (ಗ್ರೂಪ್-ಸಿ) ಹುದ್ದೆಗೆ 21,400 ರೂ , ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಸಿವಿಲ್) 52,620 ರೂ (ಗ್ರೂಪ್ -ಎ), ಸಹಾಯಕ ಎಂಜಿನಿಯರ್‌ (ಸಿವಿಲ್) ಹಾಗೂ ಸಹಾಯಕ ಎಂಜಿನಿಯರ್‌ (ವಿದ್ಯುತ್) (ಗ್ರೂಪ್-ಬಿ) ಹುದ್ದೆಗಳಿಗೆ 43,100 ರೂಪಾಯಿ ನಿಗದಿಪಡಿಸಲಾಗಿದೆ.

ವಯೋಮಿತಿ

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು ಅಭ್ಯರ್ಥಿಗೆ ಕನಿಷ್ಠ 18ವರ್ಷ ತುಂಬಿರಬೇಕು. ಸರ್ಕಾರ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷ ಸಡಿಲಿಕೆ ನೀಡಿರುವ ಕಾರಣ ಸಾಮಾನ್ಯ ಅಭ್ಯರ್ಥಿಗಳಿಗೆ 38 ವರ್ಷ, ಪ್ರವರ್ಗ 2ಎ, 3ಎ ಹಾಗೂ 3ಬಿ ಅಭ್ಯರ್ಥಿಗಳಿಗೆ 41 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ -1 ಅಭ್ಯರ್ಥಿಗಳಿಗೆ 43 ವರ್ಷ ವಯೋಮಿತಿ ನಿಗದಿಪಡಿಸಿದೆ.

ಪರೀಕ್ಷಾ ಪದ್ದತಿ ಹಾಗೂ ಶುಲ್ಕ

ಪರೀಕ್ಷೆಯನ್ನು ಆಪ್‌ಲೈನ್‌ - ಒಎಂಆರ್‌ ಮಾದರಿಯ ಮೂಲಕ ನಡೆಸಲಾಗುತ್ತದೆ. ಸಾಮಾನ್ಯ ಹಾಗೂ ಪ್ರವರ್ಗ 2ಎ, 3ಎ ಹಾಗೂ 3ಬಿ ಅಭ್ಯರ್ಥಿಗಳಿಗೆ750 ರೂ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ -1, ಮಾಜಿ ಸೈನಿಕರು ಹಾಗೂ ತೃತೀಯ ಲಿಂಗಿಗಳಿಗೆ 500 ರೂಪಾಯಿ ಮತ್ತು ವಿಶೇಷ ಚೇತನ ಅಭ್ಯರ್ಥಿಗಳಿಗೆ 250 ರೂ. ಶುಲ್ಕ ವಿಧಿಸಿದೆ.

Read More
Next Story