
ಮುರ್ಡೇಶ್ವರ ಪ್ರವಾಸಕ್ಕೆಂದು ತೆರಳಿದ ನಾಲ್ವರು ವಿದ್ಯಾರ್ಥಿಗಳು ಸಮುದ್ರ ಪಾಲು
ಶಾಲಾ ಶೈಕ್ಷಣಿಕ ಪ್ರವಾಸಕ್ಕೆಂದು ಖುಷಿಖುಷಿಯಾಗಿ ಹೊರಟಿದ್ದ ಶಾಲಾ ಮಕ್ಕಳು ನೀರಲ್ಲಿ ಮುಳುಗಿ ಧಾರುಣವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರ ಕಡಲತೀರದಲ್ಲಿ ನಡೆದಿದೆ.
ಶಾಲಾ ಶೈಕ್ಷಣಿಕ ಪ್ರವಾಸಕ್ಕೆಂದು ಖುಷಿಖುಷಿಯಾಗಿ ಹೊರಟಿದ್ದ ಶಾಲಾ ಮಕ್ಕಳು ನೀರಲ್ಲಿ ಮುಳುಗಿ ಧಾರುಣವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರ ಕಡಲತೀರದಲ್ಲಿ ನಡೆದಿದೆ.
ಕೋಲಾರದ ಮುಳಬಾಗಿಲಿನಿಂದ ಕೊತ್ತೂರು ಮೂರಾರ್ಜಿ ದೇಸಾಯಿ ವಸತಿ ಶಾಲೆಯ 54 ವಿದ್ಯಾರ್ಥಿಗಳು ಮತ್ತು ಆರು ಶಿಕ್ಷಕರನ್ನು ಒಳಗೊಂಡ ತಂಡವು ಕಳೆದ ಭಾನುವಾರ ಶೈಕ್ಷಣಿಕರ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ತೆರಳಿದ್ದರು. ಮಂಗಳವಾರ ಸಂಜೆ ಮುರ್ಡೇಶ್ವರದ ಕಡಲತೀರದಲ್ಲಿ ಮಕ್ಕಳು ಆಟವಾಡುತ್ತಿದ್ದರು. ಈ ವೇಳೆ ಏಳು ಜನ ವಿದ್ಯಾರ್ಥಿನಿಯರು ಸಮುದ್ರದಲ್ಲಿ ಈಜಲು ಹೋಗಿದ್ದಾಗ ನಾಲ್ವರು ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ . ಈ ಪೈಕಿ ಓರ್ವ ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿದ್ದಾಳೆ. ಮೃತ ವಿಧ್ಯಾರ್ಥಿನಿ 15 ವರ್ಷದ ಶ್ರಾವಂತಿ ಎಂದು ತಿಳಿದು ಬಂದಿದೆ. ಮೂರು ಜನ ವಿದ್ಯಾರ್ಥಿನಿಯರಾದ ಯಶೋಧ, ವೀಕ್ಷಣಾ, ಲಿಪಿಕಾ ಎನ್ನುವರನ್ನು ರಕ್ಷಣೆ ಮಾಡಲಾಗಿದೆ. ಅವರಿಗೆ ಆರ್ಎನ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಪತ್ತೆಯಾದ ಮೂವರು ದೀಕ್ಷಾ, ಲಾವಣ್ಯ, ಲಿಪಿಕಾ ದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ. ಮುಳಬಾಗಲು ತಾಲ್ಲೂಕಿನ ಎನ್.ಗಡ್ಡೂರು ನಿವಾಸಿ ಜೈರಾಮಪ್ಪ ಪುತ್ರಿ ದೀಕ್ಷ, ಹಬ್ಬಣಿ ಗ್ರಾಮದ ಚನ್ನರೆಡ್ಡಪ್ಪ ಪುತ್ರಿ ಲಾವಣ್ಯ, ದೊಡ್ಡಗಟ್ಟಹಳ್ಳಿಯ ಮುನಿರಾಜು ಪುತ್ರಿ ವಂದನ ಕಾಣೆಯಾಗಿದ್ದಾರೆ.
ರಕ್ಷಿಸಲಾಗದೆ ಅಸಹಾಯಕರಾದ ಲೈಫ್ ಗಾರ್ಡ್ಸ್
ನೀರಿನಲ್ಲಿ ಮುಳುಗುತ್ತಿದ್ದ ಮಕ್ಕಳು ಲೈಫ್ ಗಾರ್ಡ್‌ಗಳಿಗೆ ರಕ್ಷಿಸಲು ಸಾಧ್ಯವಾಗಿಲ್ಲ. ಕಳೆದ ಎರಡು ತಿಂಗಳಿನಿಂದ ಯಾವುದೇ ಸಲಕರಣೆ ಪೂರೈಸಲಿಲ್ಲ. ಈ ಬಗ್ಗೆ ಅಗತ್ಯ ಸಲಕರಣೆ ಒದಗಿಸುವಂತೆ ಒತ್ತಾಯಿಸಿದ್ದರೂ ಪ್ರವಾಸೋದ್ಯಮ ಇಲಾಖೆ ಯಾವುದೇ ಸಲಕರಣೆಗಳನ್ನು ಒದಗಿಸಲಿಲ್ಲ ಎನ್ನಲಾಗಿದೆ.
ಐದು ಲಕ್ಷ ಪರಿಹಾರ ಘೋಷಣೆ
ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಮೃತ ವಿದ್ಯಾರ್ಥಿನಿಯ ಕುಟುಂದವರಿಗೆ ತಲಾ ಐದು ಲಕ್ಷ ಪರಿಹಾರ ಘೋಷಣೆ ಮಾಡಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಮಕ್ಕಳನ್ನ ವಾಪಸ್ ಕರೆತರಲು ಪೋಷಕರು ಹಾಗೂ ಸಂಬಂಧಿಕರು ಒತ್ತಾಯಿಸಿದ್ದು, ಮಕ್ಕಳ ಸಂಬಂಧಿಕರು ವಸತಿ ಶಾಲೆ ಎದುರಿನ ಗೇಟ್ ಬಳಿ ಜಮಾಯಿಸುತ್ತಿದ್ದಾರೆ.
ಸ್ಥಳಕ್ಕೆ ತಹಶೀಲ್ದಾರ್ ಭೇಟಿ, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಪ್ರಾಂಶುಪಾಲೆ ಶಶಿಕಲಾ ಅಮಾನತು, ಅತಿಥಿ ಉಪನ್ಯಾಸಕರು ಮತ್ತು ಡಿ ಗ್ರೂಪ್ ಸಿಬ್ಬಂದಿ ಕೆಲಸದಿಂದ ವಜಾ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ತನದ ಆರೋಪದ ಹಿನ್ನೆಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲೆ ಶಶಿಕಲಾ ಅಮಾನತು ಮಾಡಲಾಗಿದೆ. ಅತಿಥಿ ಉಪನ್ಯಾಸಕರು ಮತ್ತು ಡಿ ಗ್ರೂಪ್ ಸಿಬ್ಬಂದಿ ಕೆಲಸದಿಂದ ವಜಾ ಮಾಡಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಕಾಂತರಾಜು ಅವರು ಆದೇಶ ಹೊರಡಿಸಿದ್ದಾರೆ.