Mahakumbh Stampede | ಕಾಲ್ತುಳಿತದಲ್ಲಿ ನಾಲ್ವರು ಕನ್ನಡಿಗರು ಸಾವು
x
ಅರುಣ್‌ ಕೋಪರ್ಡೆ ಹಾಗೂ ಮಹಾದೇವಿ ಬಾವನೂರ

Mahakumbh Stampede | ಕಾಲ್ತುಳಿತದಲ್ಲಿ ನಾಲ್ವರು ಕನ್ನಡಿಗರು ಸಾವು

ಕಾಲ್ತುಳಿತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳಗಾವಿ ನಗರದ ಶೆಟ್ಟಿ ಗಲ್ಲಿಯ ನಿವಾಸಿ ಅರುಣ್‌ ಕೋಪರ್ಡೆ ಹಾಗೂ ಶಿವಾಜಿನಗರ ಮಹಾದೇವಿ ಬಾವನೂರ ಮೃತಪಟ್ಟಿದ್ದಾರೆ.


ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ಕನ್ನಡಿಗರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನಕ್ಕೆ ಇಳಿಯುವ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ಮತ್ತಿಬ್ಬರು ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

ಕಾಲ್ತುಳಿತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳಗಾವಿ ನಗರದ ಶೆಟ್ಟಿ ಗಲ್ಲಿಯ ನಿವಾಸಿ ಅರುಣ್‌ ಕೋಪರ್ಡೆ ಹಾಗೂ ಶಿವಾಜಿನಗರ ಮಹಾದೇವಿ ಬಾವನೂರ ಮೃತಪಟ್ಟಿದ್ದಾರೆ. ಇದಕ್ಕೂ ಮುನ್ನ ಬೆಳಗಾವಿಯ ತಾಯಿ-ಮಗಳಾದ ಜ್ಯೋತಿ ಹಾಗೂ ಮೇಘಾ ಅವರು ಮೃತಪಟ್ಟಿದ್ದರು.

ಬುಧವಾರ ಬೆಳಿಗ್ಗೆ ಬೆಳಗಾವಿ ನಗರದ ಅರುಣ್‌ ಕೋಪರ್ಡೆ ಹಾಗೂ ಪತ್ನಿ ಕಾಂಚನಾ ಕೋಪರ್ಡೆ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ಪುತ್ರ ಓಂಕಾರ್‌ ಮಾಧ್ಯಮಗಳಿಗೆ ತಿಳಿಸಿದ್ದರು.

ಅರುಣ್‌ ದಂಪತಿ ಹಾಗೂ ಇತರರು ಒಟ್ಟುಇ ಎರಡು ಬಸ್‌ಗಳಲ್ಲಿ ಭಾನುವಾರ ಮಹಾಕುಂಭ ಮೇಳಕ್ಕೆ ತೆರಳಿದ್ದರು.

Read More
Next Story