ಅಧಿಕಾರಕ್ಕಾಗಿ ಹಿಂದೂ ಸಮಾಜ ಒಡೆಯುತ್ತಿರುವ ಸಿಎಂ; ಮಾಜಿ ಸಂಸದ ಪ್ರತಾಪ್‌ ಸಿಂಹ ಆರೋಪ
x

ಅಧಿಕಾರಕ್ಕಾಗಿ ಹಿಂದೂ ಸಮಾಜ ಒಡೆಯುತ್ತಿರುವ ಸಿಎಂ; ಮಾಜಿ ಸಂಸದ ಪ್ರತಾಪ್‌ ಸಿಂಹ ಆರೋಪ

2016 ಲ್ಲಿ ಸಿದ್ದರಾಮಯ್ಯ ಅವರು ಅಹಿಂದ ಹೆಸರಲ್ಲಿ ಹಿಂದುಳಿದವರು, ದಲಿತರನ್ನು ಹಿಂದೂ ಧರ್ಮದಿಂದ ಪ್ರತ್ಯೇಕಿಸಿದರು. ಈಗ ಇಡೀ ಹಿಂದೂ ಧರ್ಮವನ್ನೇ ಜಾತಿಗಣತಿ ಹೆಸರಲ್ಲಿ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರತಾಪ್‌ ಸಿಂಹ ಆರೋಪಿಸಿದ್ದಾರೆ.


ಗೌಡ, ಲಿಂಗಾಯತ, ಒಬಿಸಿ, ಎಸ್ಸಿ-ಎಸ್ಟಿ, ಕುರುಬ ಎಂದು ಜಾತಿ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡಬೇಡಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಕ್ಕಾಗಿ ಹಿಂದೂ ಸಮಾಜವನ್ನುಒಡೆಯುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ 2016 ರಲ್ಲಿ ಅಹಿಂದ ಹೆಸರಲ್ಲಿ ಹಿಂದುಳಿದವರು ಹಾಗೂ ದಲಿತರನ್ನು ಹಿಂದೂ ಧರ್ಮದಿಂದ ಪ್ರತ್ಯೇಕಿಸಿದ್ದರು. ಈಗ ಇಡೀ ಹಿಂದೂ ಸಮುದಾಯವನ್ನು ಜಾತಿಗಣತಿ ಹೆಸರಲ್ಲಿ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಸೌಲಭ್ಯ ಹಂಚಿಕೆಗಾಗಿ ಹಿಂದುಳಿದವರ ಸಮೀಕ್ಷೆ ನಡೆಸುತ್ತದೆ. ಗ್ರಾಮೀಣ ಹಾಗೂ ನಗರ ಭಾಗದ ಜನರ ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ದಾಖಲಿಸಲಿದೆ. ಆದರೆ, ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಜಾತಿಗಣತಿ ವರದಿ ಜಾರಿ ನೆಪದಲ್ಲಿ ಜಾತಿಗಳ ಮಧ್ಯೆ ದ್ವೇಷ ಬಿತ್ತುತ್ತಿದ್ದಾರೆ. ಕೇವಲ ಅಧಿಕಾರದಲ್ಲಿ ಮುಂದುವರಿಯಲು ಇಡೀ ಹಿಂದೂ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಾದರೂ ಹಿಂದೂಗಳು ತಾನು ಲಿಂಗಾಯತ, ಗೌಡ, ಒಕ್ಕಲಿಗ, ದಲಿತ ಎಂದು ಹೇಳುವುದನ್ನು ಬಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಇರುವ ಯೋಚನೆ ಮಾಡಬೇಕು. ಸಿದ್ದರಾಮಯ್ಯ ಅವರ ಕಾರ್ಯತಂತ್ರ ಎಲ್ಲರಿಗೂ ಅರ್ಥವಾಗಿದೆ. ಜಾತಿ ಆಧಾರದ ಮೇಲೆ ಅಪಸ್ವರ ಎತ್ತುವುದು ಬೇಡ. ಹಿಂದೂ ಸಮಾಜದ ಪ್ರತಿನಿಧಿಗಳಂತೆ ಮಾತನಾಡಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Read More
Next Story