ದರ್ಶನ್‌ ಕೊರಳಿಗೆ ಮತ್ತೊಂದು ಉರುಳು; ಒಬ್ಬ ಮ್ಯಾನೇಜರ್‌ ನಾಪತ್ತೆ, ಇನ್ನೋರ್ವ ಆತ್ಮಹತ್ಯೆ!
x

ದರ್ಶನ್‌ ಕೊರಳಿಗೆ ಮತ್ತೊಂದು ಉರುಳು; ಒಬ್ಬ ಮ್ಯಾನೇಜರ್‌ ನಾಪತ್ತೆ, ಇನ್ನೋರ್ವ ಆತ್ಮಹತ್ಯೆ!

ದರ್ಶನ್‌ ಮ್ಯಾನೇಜರ್‌ ಶಂಕಾಸ್ಪದ ಸಾವಿನ ಮರು ತನಿಖೆಗೆ ಪೊಲೀಸರು ಮುಂದಾಗಿದ್ದು, ದರ್ಶನ್‌ ಕೊರಳಿಗೆ ಕಾನೂನಿನ ಕುಣಿಕೆ ಬಿಗಿಯಾಗುತ್ತಿರುವ ಲಕ್ಷಣಗಳು ಕಂಡುಬಂದಿವೆ. ಒಬ್ಬ ಮ್ಯಾನೇಜರ್‌ ನಾಪತ್ತೆಯಾಗಿದ್ದರೆ, ಇನ್ನೊಬ್ಬ ಮ್ಯಾಜೇನರ್‌ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬಯಲಿಗೆ ಬಂದಿದ್ದು, ದರ್ಶನ್‌ ಕರಾಳ ಲೋಕ ಈಗ ಒಂದೊಂದಾಗಿ ಬಯಲಿಗೆ ಬರುತ್ತಿವೆ.


ತನ್ನದೇ ಅಭಿಮಾನಿ ರೇಣುಕಾಸ್ವಾಮಿಯ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರನಟ ದರ್ಶನ್‌ ತೂಗುದೀಪ್‌ ಅವರ ಇನ್ನೊಬ್ಬ ಮ್ಯಾನೇಜರ್‌ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಎರಡು ತಿಂಗಳ ಬಳಿಕ ಬೆಳಕಿಗೆ ಬಂದಿದ್ದು, ಅದೊಂದು ಶಂಕಾಸ್ಪದ ಘಟನೆಯಾಗಿದೆ. ಈ ಸಾವಿನ ಬಗ್ಗೆ ಮರು ತನಿಖೆಗೆ ಪೊಲೀಸರು ಮುಂದಾಗಿದ್ದು, ದರ್ಶನ್‌ ಕೊರಳಿಗೆ ಕಾನೂನಿನ ಕುಣಿಕೆ ಬಿಗಿಯಾಗುತ್ತಿರುವ ಲಕ್ಷಣಗಳು ಕಂಡುಬಂದಿವೆ. ಒಬ್ಬ ಮ್ಯಾನೇಜರ್‌ ನಾಪತ್ತೆಯಾಗಿದ್ದರೆ, ಇನ್ನೊಬ್ಬ ಮ್ಯಾಜೇನರ್‌ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬಯಲಿಗೆ ಬಂದಿದ್ದು, ದರ್ಶನ್‌ ಕರಾಳ ಲೋಕ ಈಗ ಒಂದೊಂದಾಗಿ ಬಯಲಿಗೆ ಬರುತ್ತಿವೆ.

ದರ್ಶನ್‌ನ ಆನೆಕಲ್‌ ಬಳಿಯ ತೋಟದಮನೆಯಲ್ಲಿದ್ದ ಆತನ ಮ್ಯಾನೇಜರ್‌ ಆಗಿದ್ದ ಶ್ರೀಧರ್ ಎಂಬಾತ ಏಪ್ರಿಲ್ 17 ರಂದು ಆತ್ಮಹತ್ಯೆಗೆ ಶರಣಾಗಿದ್ದು ಆ ಪ್ರಕರಣದ ಮರು ತನಿಖೆ ನಡೆಯುವ ಸಾಧ್ಯತೆ ಇದೆ. ಮರುತನಿಖೆಯಲ್ಲಿ ದರ್ಶನ್‌ ವಿಚಾರಣೆ ನಡೆಯಲಿದ್ದು, ಆತನ ಕೈವಾಡ ಇದ್ದಲ್ಲಿ ಪ್ರಕರಣ ಮತ್ತಷ್ಟು ಜಟಿಲವಾಗುವ ಸಾಧ್ಯತೆ ಇದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಈಗಾಗಲೇ ದರ್ಶನ್‌ನ ಓರ್ವ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಎಂಬವರು ಕಳೆದ ಎಂಟು ವರ್ಷಗಳಿಂದ ಕಾಣೆಯಾಗಿದ್ದು ಆತನ ಹುಡುಕಾಟಕ್ಕೆ ಪೊಲೀಸರು ಯತ್ನಿಸುತ್ತಿದ್ದಾರೆ. ಆತನ ಪತ್ತೆಯಾದಲ್ಲಿ ಅನೇಕ ರಹಸ್ಯಗಳು ಹೊರಬೀಳುವ ಸಾಧ್ಯತೆಗಳಿವೆ ಎನ್ನಲಾಗಿದೆ. ಆತನ ತಾನು ಜೀವಂತ ಇರುವುದಾಗಿ ಮತ್ತು ಸಾಲದ ಸಂಕಷ್ಟದಲ್ಲಿದ್ದು ಮರುಪಾವತಿಗಾಗಿ ಪ್ರಯತ್ನಿಸುತ್ತಿರುವುದಾಗಿ ಪತ್ನಿಗೆ ಪತ್ರ ಬರೆದಿದ್ದಾನೆ ಎನ್ನಲಾಗಿದೆ. ಆದರೆ, ಆತ ನಾಪತ್ತೆಯಾಗಿರುವ ವಿಚಾರದಲ್ಲೂ ದರ್ಶನ್‌ ಪಾತ್ರದ ಬಗ್ಗೆ ತನಿಖಾಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ.

ಕಾಣೆಯಾಗಿರುವ ಮ್ಯಾನಜೇರ್‌ ಮಲ್ಲಿಕಾರ್ಜುನ್‌ ಜತೆ ದರ್ಶನ್‌ (ಹಳೆಯ ಚಿತ್ರ)

ಆದರೆ, ಈಗ ದರ್ಶನ್‌ ಇನ್ನೊಬ್ಬ ಮಾಜಿ ಮ್ಯಾನೇಜರ್‌ ಶ್ರೀಧರ್‌ ಏಪ್ರಿಲ್‌ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮರುತನಿಖೆಯಾಗಬೇಕು ಮತ್ತು ದರ್ಶನ್‌ ಮತ್ತು ತಂಡದ ಪಾತ್ರವಿದೆಯೇ ಎಂಬ ಬಗ್ಗೆ ತನಿಖೆ ಆಗಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಮರುತನಿಖೆ ನಡೆಸಲು ಇಲಾಖೆ ಸದ್ಯದಲ್ಲೇ ನಿರ್ಧರಿಸಲಿದೆ.

ಶ್ರೀಧರ್‌ ಮೃತದೇಹ ಆನೇಕಲ್ ತಾಲೂಕಿನ ಬಗ್ಗನದೊಡ್ಡಿಯಲ್ಲಿರುವ ದರ್ಶನ್‌ನ ತೋಟದಮನೆಯಲ್ಲಿ ಪತ್ತೆಯಾಗಿತ್ತು. ಎರಡೂವರೆ ಎಕರೆಯಷ್ಟು ವಿಸ್ತೀರ್ನದ ಆ ತೋಟದ ಕಲ್ಲುಬಂಡೆಯಲ್ಲಿ ಶ್ರೀಧರ್‌ ಶವ ಪತ್ತೆಯಾಗಿತ್ತು. ಆತನ ಬಳಿ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂಬ ಡೆತ್‌ ನೋಟ್‌ ಕೂಡಾ ಪತ್ತೆಯಾಗಿತ್ತು. ಆದರೆ, ಅದೊಂದು ಆತ್ಮಹತ್ಯೆಯೇ ಅಥವಾ ಬೇರೆ ಹಿನ್ನೆಲೆ ಇದೆಯೇ ಎಂಬ ಬಗ್ಗೆ ತನಿಖೆಯಾಗಬೇಕಿದೆ. ಮತ್ತು ಆತ ವಿಷ ಸೇವಿಸಿ ಆತ್ಮಹತ್ಯೆ ಮಾಡಿರುವುದು ನಿಜವೇ ಅಥವಾ ಒತ್ತಾಯಪೂರ್ವಕವಾಗಿ ವಿಷ ಸೇವಿಸುವಂತೆ ಮಾಡಲಾಗಿದೆಯೇ ಎಂಬ ಪ್ರಶ್ನೆಗಳು ಈ ಹಂತದಲ್ಲಿ ಉದ್ಭವಿಸಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸಲಿದ್ದಾರೆ.

ಆದರೆ, ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಗ್ರಾಮಾಂತರ ಎಸ್​ಪಿ ಮಲ್ಲಿಕಾರ್ಜುನ, ಅವರು ಶ್ರೀಧರ್‌ಗೆ ಮದುವೆ ಆಗಿರಲಿಲ್ಲ. ತಾನು ಒಂಟಿತನದಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರ ಬರೆದಿಟ್ಟಿದ್ದ,ʼ ಎಂದು ಹೇಳಿದ್ದಾರೆ. ಆದರೆ ಮರಣೋತ್ತರ ವರದಿಯ ಪ್ರಕಾರ ವಿಷ ಸೇವನೆ ಆತ್ಮಹತ್ಯೆಗೆ ಕಾರಣ ಎಂದು ಗೊತ್ತಾಗಿದ್ದರೂ, ಅಂತಿಮ ವರದಿ ಇನ್ನೂ ಬಂದಿಲ್ಲ. ಈ ಪ್ರಕರಣದ ಸಂಬಂಧ ದರ್ಶನ್‌ ತೋಟದ ಮನೆಯ ಇನ್ನೂ ಕೆಲವರ ವಿಚಾರಣೆ ನಡೆಯಬೇಕಿದೆ ಎಂದು ಹೇಳಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ನ ಆತ್ಮೀಯ ಬಳಗದ ಹಲವರನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಈಗ ದರ್ಶನ್‌ನ ಮಾಜಿ ಮ್ಯಾನೇಜರ್‌ ಶ್ರೀಧರ್‌ನ ಶಂಕಾಸ್ಪದ ಸಾವಿನ ಬಗ್ಗೆಯೂ ದರ್ಶನ್‌ ಮತ್ತು ಇತರ ಆರೋಪಿಗಳನ್ನು ಪ್ರಶ್ನಿಸಲಾಗುವುದು. ರೇಣುಕಾಸ್ವಾಮಿ ಕೊಲೆ ನಡೆಸಿದ ಸಂದರ್ಭದಲ್ಲಿ ಭಾಗಿಯಾಗಿದ್ದ ಎಲ್ಲ ಆರೋಪಿಗಳನ್ನು ಪ್ರತ್ಯೇಕವಾಗಿ ತನಿಖೆಗೆ ಒಳಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Read More
Next Story