Forest Industries Corporations windows and doors are also available on e-commerce
x

ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಇ-ಕಾಮರ್ಸ್‌ ಜಾಲತಾಣಕ್ಕೆ ಚಾಲನೆ ನೀಡಿದರು.

ಅರಣ್ಯ ಕೈಗಾರಿಕಾ ನಿಗಮದ ಪೀಠೋಪಕರಣಗಳು ಇ-ಕಾಮರ್ಸ್‌ನಲ್ಲೂ ಲಭ್ಯ

ಗುಣಮಟ್ಟದ ಪೀಠೋಪಕರಣ ಸಿದ್ಧಪಡಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲು ಇ-ಕಾಮರ್ಸ್ ಅಂತರ್ಜಾಲ ತಾಣ ಸಿದ್ಧಪಡಿಸಲಾಗಿದೆ ಎಂದು ಸಚಿವ ಈಶ್ವರ್‌ ಖಂಡ್ರೆ ತಿಳಿಸಿದರು.


ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತದಿಂದ ಬಾಗಿಲು, ಕಿಟಕಿ ಸೇರಿದಂತೆ ಗುಣಮಟ್ಟದ ಪೀಠೋಪಕರಣಗಳು ಇ-ಕಾಮರ್ಸ್‌ನಲ್ಲಿಯೇ ಲಭ್ಯವಾಗಲಿವೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ವಿಧಾನಸೌಧದಲ್ಲಿ ಬುಧವಾರ ಕೆಎಸ್ಎಫ್ಐಸಿಯ ಇ-ಕಾಮರ್ಸ್ ಅಂತರ್ಜಾಲ ತಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಂಪನಿಗಳ ಕಾಯಿದೆ ಅಡಿ 1973ರಲ್ಲಿ ಸ್ಥಾಪನೆಯಾದ ಕೆಎಸ್ಎಫ್ಐಸಿ ಗುಣಮಟ್ಟದ ಪೀಠೋಪಕರಣ, ಬಾಗಿಲು, ಬಾಗಿಲವಾಡ, ಕಿಟಕಿ ಇತ್ಯಾದಿಗಳನ್ನು ಸಿದ್ಧಪಡಿಸಿ ಸರ್ಕಾರಿ ಕಟ್ಟಡ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುವ ನಿಗಮ ಈಗ ಇಂದಿನ ಅಗತ್ಯಕ್ಕೆ ಅನುಗುಣವಾಗಿ ಇ-ಕಾಮರ್ಸ್ ಅಂತರ್ಜಾಲ ತಾಣ ಸಿದ್ಧಪಡಿಸಿದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳಿಗೆ ಮೇಜು, ಕುರ್ಚಿ, ಬೆಂಚು ಮತ್ತು ಡೆಸ್ಕ್‌ಗಳನ್ನು ಪೂರೈಕೆ ಮಾಡುವ ಕೆಎಸ್ಎಫ್ಐಸಿ ಈಗ https://www.ksficfurniture.com/ ಡಿಜಿಟಲ್ ವಹಿವಾಟಿನ ವಿಸ್ತರಣೆಯೊಂದಿಗೆ ಇನ್ನೂ ಹೆಚ್ಚು ಜನರನ್ನು ತಲುಪಲಿದೆ ಹಾಗೂ ನಿಗಮಕ್ಕೂ ಆದಾಯ ಹೆಚ್ಚಾಗಲಿದ್ದು ಆರ್ಥಿಕವಾಗಿ ಸಬಲವಾಗಲಿದೆ ಎಂದರು.

ಏನಿದು ಕೆಎಸ್‌ಎಫ್‌ಐಸಿ ?

ಬೆಂಗಳೂರಿನಲ್ಲಿರುವ ಕೆಎಸ್ಎಫ್ಐಸಿ ತನ್ನದೇ ಸ್ವಂತದ ಕಾರ್ಖಾನೆ ಹೊಂದಿದ್ದು, ಬಾಗಿಲು ಚೌಕಟ್ಟುಗಳು, ಫಲಕ, ಬಾಗಿಲುಗಳು, ಕಿಟಕಿ ಚೌಕಟ್ಟುಗಳು, ಕಿಟಕಿಗಳು, ಕಚೇರಿ ಮತ್ತು ದೇಶೀಯ ಪೀಠೋಪಕರಣಗಳನ್ನು ತಯಾರಿಸಲು ಪ್ರಸಿದ್ಧಿ ಪಡೆದಿದೆ.

ಇದರ ಜೊತೆಗೆ, ಪೀಠೋಪಕರಣಗಳ ಬೇಡಿಕೆಯನ್ನು ಹೆಚ್ಚಿಸಲು ಕೆಎಸ್ಎಫ್ಐಸಿ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರಸಿದ್ಧ ಪೀಠೋಪಕರಣಗಳನ್ನು ತಯಾರಿಸುತ್ತಿದೆ. ರೋಸ್ವುಡ್, ಟೀಕ್ ಮತ್ತು ಇತರ ಜನಪ್ರಿಯ ಮರದ ಉನ್ನತ ಗುಣಮಟ್ಟದ ಪೀಠೋಪಕರಣಗಳು ಗ್ರಾಹಕರ ವಿಶೇಷಣಗಳ ಪ್ರಕಾರ ತಯಾರಿಸಿ ಸರಬರಾಜು ಮಾಡುತ್ತಿದೆ.

ರಾಜ್ಯದಲ್ಲಿ ಇದುವರೆಗೂ ಸುಮಾರು ಒಂದು ಕೋಟಿ ಸರ್ಕಾರಿ ಸಂಸ್ಥೆಗಳು, ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು, ಅತಿಥಿ ಮನೆಗಳು ಹಾಗೂ ಕಚೇರಿಗಳಿಗೆ ಮರದ ವಸ್ತುಗಳನ್ನು ಮತ್ತು ಪೀಠೋಪಕರಣಗಳನ್ನು ನೀಡಿದೆ. ಎಲ್ಲಾ ಉತ್ಪನ್ನಗಳನ್ನು ಹೆಚ್ಚು ಬಾಳಿಕೆ ಬರುವ ಮರಗಳಿಂದ ತಯಾರಿಸಲಾಗುತ್ತದೆ. ಕೆಲಸದ ಗುಣಮಟ್ಟ ಯಾವಾಗಲೂ ಉತ್ತಮ ಗುಣಮಟ್ಟದಿಂದ ಕೂಡಿದೆ. ನಿಗಮದ ತಯಾರಿಸಿದ ಮರದ ಕೆಲಸ ಮತ್ತು ಪೀಠೋಪಕರಣ ವಸ್ತುಗಳು ಐದು ವರ್ಷಗಳ ಖಾತರಿಯನ್ನು ನೀಡುತ್ತದೆ.

Read More
Next Story