ಪಟಾಕಿ ಪ್ರತಾಪ | ಬೆಂಗಳೂರು ಮಾಲಿನ್ಯ ಪ್ರಮಾಣ ಗಗನಕ್ಕೆ
x

ಪಟಾಕಿ ಪ್ರತಾಪ | ಬೆಂಗಳೂರು ಮಾಲಿನ್ಯ ಪ್ರಮಾಣ ಗಗನಕ್ಕೆ

ದೀಪಾವಳಿ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರದಲ್ಲಿ ಶಬ್ಧ ಮತ್ತು ವಾಯು ಮಾಲಿನ್ಯ ಮಿತಿಮೀರಿದೆ. ನ್ಯಾಯಾಲಯದ ಆದೇಶ, ಪೊಲೀಸರ ಸೂಚನೆ, ಸರ್ಕಾರದ ಮನವಿಗಳ ಹೊರತಾಗಿಯೂ ಪಟಾಕಿ ಹಾವಳಿ ಈ ಬಾರಿ ಮಿತಿಮೀರಿದೆ.


ದೀಪಾವಳಿ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರದಲ್ಲಿ ಶಬ್ಧ ಮತ್ತು ವಾಯು ಮಾಲಿನ್ಯ ಮಿತಿಮೀರಿದೆ. ನ್ಯಾಯಾಲಯದ ಆದೇಶ, ಪೊಲೀಸರ ಸೂಚನೆ, ಸರ್ಕಾರದ ಮನವಿಗಳ ಹೊರತಾಗಿಯೂ ಪಟಾಕಿ ಹಾವಳಿ ಈ ಬಾರಿ ಮಿತಿಮೀರಿದೆ.

ರಾತ್ರಿ 8ರಿಂದ 10ಗಂಟೆಯ ಅವಧಿಯಲ್ಲಿ ಮಾತ್ರ ಪಟಾಕಿ ಸಿಡಿಸಬೇಕು, ಜನ ಸಂಚಾರದ ರಸ್ತೆಗಳಲ್ಲಿ, ಗಲ್ಲಿಗಳಲ್ಲಿ ಪಟಾಕಿ ಸಿಡಿಸಬಾರದು, ಅತಿ ಸದ್ದು ಮಾಡುವ ನಿಷೇಧಿತ ಪಟಾಕಿಗಳನ್ನು ಸಿಡಿಸಬಾರದು, ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸಬೇಕು ಎಂಬ ಕೋರ್ಟ್ ಆದೇಶ ಮತ್ತು ಬೆಂಗಳೂರು ಪೊಲೀಸರ ಸೂಚನೆಯ ಹೊರತಾಗಿಯೂ ರಾತ್ರಿ ಇಡೀ ಭಾರೀ ಸದ್ದು ಮಾಡುವ ಪಟಾಕಿಗಳನ್ನು ಜನಸಂದಣಿಯ ರಸ್ತೆ, ಬೀದಿಗಳಲ್ಲಿ, ವಯಸ್ಕರು, ಮಕ್ಕಳ ನಿದ್ದೆಗೆಡುವ ಭಾರೀ ಸದ್ದಿನ ಪಟಾಕಿಗಳನ್ನು ಸಿಡಿಸಲಾಗುತ್ತಿದೆ.

ಬೆಂಗಳೂರು ಪೊಲೀಸ್ ಆಯುಕ್ತರು ಪಟಾಕಿ ಸಿಡಿಸುವ ಕುರಿತ ನಿಬಂಧನೆಗಳನ್ನು ಉಲ್ಲೇಖಿಸಿ, ನಿಯಮ ಮೀರಿ ಪಟಾಕಿ ಸಿಡಿಸಿದರೆ ಕ್ರಮ ಜರುಗಿಸುವ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ, ಇಡೀ ಬೆಂಗಳೂರಿನಾದ್ಯಂತ ಮನಸೋ ಇಚ್ಛೆ ಪಟಾಕಿ ಸಿಡಿಸಲಾಗುತ್ತಿದ್ದರೂ ಒಂದೇ ಒಂದು ಪ್ರಕರಣ ದಾಖಲಾದ ಮಾಹಿತಿ ಇಲ್ಲ.

ಪೊಲೀಸರು ಮತ್ತು ಸ್ಥಳೀಯ ಆಡಳಿತಗಳ ಈ ನಿರ್ಲಕ್ಷ್ಯದ ನಡುವೆ ಗುರುವಾರ(ಅ.31) ರಾತ್ರಿ ಇಡೀ ಪಟಾಕಿ ಹೊಗೆ ಹಾಗೂ ಶಬ್ಧದ್ದೇ ಸದ್ದಾಗಿತ್ತು. ಹಾಗಾಗಿ ಒಂದೇ ದಿನದಲ್ಲಿ ಸಿಲಿಕಾನ್ ಸಿಟಿಯ ವಾಯು ಗುಣಮಟ್ಟ ದಿಢೀರ್ ಕುಸಿತ ಕಂಡಿದೆ. ನಿಯಮಗಳನ್ನು ಗಾಳಿಗೆ ತೂರಿ ಜನ ಪಟಾಕಿ ಸಿಡಿಸಿದ ಪರಿಣಾಮ ಗಾಳಿಯ ಗುಣಮಟ್ಟ ಸೂಚ್ಯಂಕ 150ಕ್ಕೆ ಕುಸಿದಿದ್ದು, ದಾಖಲೆಯ ಮಟ್ಟದ ಮಾಲಿನ್ಯವಾಗಿದೆ. ಕಳೆದ ಒಂದು ತಿಂಗಳಿಂದ ಕಡಿಮೆ ಮಾಲಿನ್ಯ ಇತ್ತು. ಆದ್ರೆ, ದೀಪಾವಳಿ ಹಬ್ಬ ಹಿನ್ನೆಲೆ ಪಟಾಕಿಯ ಸದ್ದಿಗೆ ನಗರದಲ್ಲಿ ಮಾಲಿನ್ಯ ಹೆಚ್ಚಾಗಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ ದೀಪಾವಳಿ ಹಬ್ಬಕ್ಕೆ ಹಸಿರು ಪಟಾಕಿ ಮಾರುವುದಕ್ಕೆ ಮಾತ್ರ ಅನುಮತಿ ನೀಡಿತ್ತು. ಸರ್ಕಾರ ಕೂಡ ಹಸಿರು ಪಟಾಕಿ ಮಾಡಬೇಕು. ಅಲ್ಲದೇ ರಾತ್ರಿ 8ರಿಂದ 10ರ ಅವಧಿಯಲ್ಲಿ ಮಾತ್ರ ಪಟಾಕಿ ಸಿಡಿಸಬೇಕೆಂದು ಸಮಯ ನಿಗದಿ ಮಾಡಿತ್ತು. ಆದರೂ ಪಟಾಕಿ ಹಾವಳಿಗೆ ಬ್ರೇಕ್ ಬಿದ್ದಿಲ್ಲ. ಪರಿಣಾಮವಾಗಿ ನಗರಾದ್ಯಂತ ವಾಯು ಮಾಲಿನ್ಯ ಮಟ್ಟ ಆತಂಕಕಾರಿ ಪ್ರಮಾಣದಲ್ಲಿ ಕುಸಿದಿದೆ.

ಬೆಂಗಳೂರಿನ ಪ್ರದೇಶವಾರು ವಾಯು ಮಾಲಿನ್ಯ ಮಟ್ಟ(AQನಲ್ಲಿ)

ಪ್ರದೇಶ

ಕಳೆದ ವಾರ

ಈಗ

ಬಿಟಿಎಂ ಲೇಔಟ್

48

143

ಬಾಪುಜಿನಗರ

79

117

ಮೆಜೆಸ್ಟಿಕ್

78

150

ಹೆಬ್ಬಾಳ

64

126

ಹೊಂಬೇಗೌಡನಗರ

47

99

ಜಯನಗರ 5th ಬ್ಲಾಕ್

59

113

ಜಿಗಣಿ

53

131

ಕಸ್ತೂರಿ ನಗರ

58

131

ಶಿವಪುರ

58

128

ಸಿಲ್ಕ್ ಬೋರ್ಡ್

108

110

Read More
Next Story