
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವರದಿ ಸಲ್ಲಿಸಲಾಯಿತು.
ಆದ್ಯತೆ ಮೇರೆಗೆ 15,000 ಹುದ್ದೆ ಭರ್ತಿ ಮಾಡಿ: ಆಡಳಿತ ಸುಧಾರಣಾ ಆಯೋಗದಿಂದ ಸಿಎಂಗೆ ಶಿಫಾರಸು
ರಾಜ್ಯ ಸರ್ಕಾರದಲ್ಲಿ 7.71 ಲಕ್ಷ ಹುದ್ದೆಗಳು ಮಂಜೂರಾಗಿದ್ದು 4.96 ಲಕ್ಷ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಟ್ಟಾರೆ 2 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿಯಿವೆ. ಅಗತ್ಯವಿರುವ ವಿವಿದ ಇಲಾಖೆಗಳ 15,000 ಹುದ್ದೆಗಳನ್ನು ಭರ್ತಿ ಮಾಡುವಂತೆ ತಿಳಿಸಿದೆ.
ರಾಜ್ಯದ ಆಡಳಿತದಲ್ಲಿ ಪಾರದರ್ಶಕತೆ, ದಕ್ಷತೆ ಹಾಗೂ ಜನಸಾಮನ್ಯರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ 15,000 ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡಬೇಕು ಎಂದು ಆಡಳಿತ ಸುಧಾರಣಾ ಆಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿಫಾರಸು ಮಾಡಿದೆ.
ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಗುರುವಾರ (ಮೇ22) ಎಂಟನೇ ಮಧ್ಯಂತರ ವರದಿಯನ್ನು ಸಿಎಂಗೆ ಸಲ್ಲಿಸಿದರು. ರಾಜ್ಯ ಸರ್ಕಾರದಲ್ಲಿ 7.71 ಲಕ್ಷ ಹುದ್ದೆಗಳು ಮಂಜೂರಾಗಿದ್ದು 4.96 ಲಕ್ಷ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಟ್ಟಾರೆ 2 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿಯಿವೆ. ಅಗತ್ಯವಿರುವ ವಿವಿಛ ಇಲಾಖೆಗಳ 15,000 ಹುದ್ದೆಗಳನ್ನು ಭರ್ತಿ ಮಾಡುವಂತೆ ತಿಳಿಸಿದೆ.
ಖಾಲಿ ಇರುವ ಹುದ್ದೆಗಳು
ಕೃಷಿ ಇಲಾಖೆಯಲ್ಲಿ ಗ್ರೂಪ್ ʼಬಿʼ ವೃಂದದ ಸಹಾಯಕ ಕೃಷಿ ಅಧಿಕಾರಿ(ಎಎಒ) 1870 ಹುದ್ದೆ ಹಾಗೂ ಕೃಷಿ ಅಧಿಕಾರಿ(ಎಒ) 732 ಹುದ್ದೆ, ತೋಟಗಾರಿಕೆ ಇಲಾಕೆಯಲ್ಲಿ ʼಡಿʼ ಗ್ರೂಪ್ 1199 ಹುದ್ದೆ, ಪಶುಸಂಗೋಪನೆ ಹಾಗೂ ಪಶುವೈದ್ಯಕೀಯ ಇಲಾಖೆಯಲ್ಲಿನ ವೈದ್ಯರು ಗ್ರೂಪ್ ʼಎʼ ವೃಂದದ 1043 ಹುದ್ದೆಗಳು, ಮೀನುಗಾರಿಕೆ ಇಲಾಖೆಯ ಗ್ರೂಪ್ ʼಸಿʼ ವೃಂದದ 379 ಹುದ್ದೆಗಳು, ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು 681 ಹುದ್ದೆಗಳು, ವೈದ್ಯಕೀಯ ಕಾಲೀಜಿನ ನರ್ಸಿಂಗ್ ಅಧಿಕಾರಿಗಳು 1397 ಹುದ್ದೆಗಳು, ಇಎಸ್‌ಐ ವಿಮಾ ವೈದ್ಯಕೀಯ ಅಧಿಕಾರಿಗಳು 338 ಹುದ್ದೆಗಳು, ಕೌಶಲ ಅಭಿವೃದ್ಧಿ ಕಿರಿಯ ತರಬೇತಿ ಅಧಿಕಾರಿಗಳು 1521 ಹುದ್ದೆಗಳು, ಸಹಕಾರ, ಪುರಾತತ್ವ, ಪ್ರವಾಸೋದ್ಯಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಲ್ಲಿ ಖಾಲಿ ಇರುವ 15,000 ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಶಿಫಾರಸು ಮಾಡಿದ್ದರೆ.
ಶೀಘ್ರವೇ ಭರ್ತಿ ಮಾಡಲಿ
ಸರ್ಕಾರ ಮಂಜೂರು ಮಾಡಿರುವ ಹುದ್ದೆಗಳಲ್ಲಿ ಮೂರನೇ ಒಂದರಷ್ಟು ಹುದ್ದೆಗಳು ಖಾಲಿ ಉಳಿದಿವೆ. ಸರ್ಕಾರಿ ನೌಕರರು ತೀವ್ರ ಒತ್ತಡದಿಂದ ಕೆಲಸ ಮಾಡುತ್ತಿದ್ದು ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪುತ್ತಿಲ್ಲ. ಒಳಮೀಸಲಾತಿ ಜಾರಿಯಾದ ನಂತರ ಶೀಘ್ರವೇ ಆದ್ಯತೆ ಮೇರೆಗೆ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ತಿಳಿಸಿದ್ದಾರೆ.