The Federal Interview | ಜಾತಿ ಗಣತಿ ವರದಿ ಜಾರಿಯ ಭವಿಷ್ಯ ಹೇಳಿದ ಸಚಿವ ಶಿವರಾಜ ತಂಗಡಗಿ
x

The Federal Interview | ಜಾತಿ ಗಣತಿ ವರದಿ ಜಾರಿಯ ಭವಿಷ್ಯ ಹೇಳಿದ ಸಚಿವ ಶಿವರಾಜ ತಂಗಡಗಿ

ಕೇಂದ್ರ ಸರ್ಕಾರ ಮಾಡಲಿರುವ ಜಾತಿಗಣತಿಯನ್ನು ಅಧಿಕಾರಿಗಳೇ ಮಾಡಲಿದ್ದಾರೆ. ನಮ್ಮ ಸಾಮಾಜಿಕ ಶೈಕ್ಷಣಿಕ ವರದಿಯನ್ನು ಅಧಿಕಾರಿಗಳೇ ತಯಾರಿಸಿದ್ದಾರೆ. ಆದರೆ, ರಾಜ್ಯದ ಬಿಜೆಪಿ ನಾಯಕರು ರಾಜಕಾರಣ ಮಾಡುವ ಉದ್ದೇಶದಿಂದ ಮಾತನಾಡುತ್ತಾರೆ ಎಂದು ತಂಗಡಗಿ ವಿವರಿಸಿದ್ದಾರೆ.


ಕೇಂದ್ರ ಸರ್ಕಾರದ ಉದ್ದೇಶಿತ ಜಾತಿಗಣತಿ ವರದಿಗೂ ರಾಜ್ಯ ಸರ್ಕಾರದ ಸಾಮಾಜಿಕ, ಶೈಕ್ಷಣಿಕ- ಆರ್ಥಿಕ ಸಮೀಕ್ಷೆಯ ಅಂಕಿ ಅಂಶಗಳಲ್ಲಿ ಯಾವುದೇ ವ್ಯತ್ಯಾಸವಾಗುವುದಕ್ಕೆ ಸಾಧ್ಯವಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರ ಶಿವರಾಜ ತಂಗಡಗಿ ಹೇಳಿದ್ದಾರೆ.

'ದ ಫೆಡರಲ್​ ಕರ್ನಾಟಕ'ಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು ಗಣತಿಯ ಭವಿಷ್ಯದ ಕುರಿತು ಮಾತನಾಡಿದ್ದಾರೆ.

ಕೇಂದ್ರ ಸರ್ಕಾರ ಜನಗಣತಿ ಜತೆ ಜಾತಿ ಗಣತಿಯನ್ನೂ ಮಾಡಲು ಮುಂದಾಗಿರುವುದು ಸರಿಯಿದೆ. ಆದರೆ, ನಾವು ಮಾಡಿರುವ ಸಮೀಕ್ಷೆಯ ವರದಿಗೂ ಅವರು ಮಾಡಿದ ಬಳಿಕ ಪ್ರಕಟಗೊಳ್ಳಲಿರುವ ದತ್ತಾಂಶಗಳಲ್ಲಿ ಯಾವುದೇ ವ್ಯತ್ಯಾಸ ಬರಲು ಸಾಧ್ಯವಿಲ್ಲ. ಇದು ನೂರು ಪ್ರತಿಶತ ಸತ್ಯ ಎಂದು ಅವರು ಹೇಳಿದ್ದಾರೆ.

"ನಾವು ಮಾಡಿರುವುದು ಸಾಮಾಜಿಕ ಮತ್ತು ಶೈಕ್ಷಣಿಕ ವರದಿ.. ಇದು ಜಾತಿಜನಗಣತಿ ವರದಿ ಅಲ್ಲ. ಅಂತೆಯೇ ಕೇಂದ್ರ ಸರ್ಕಾರ ಜಾತಿ ಗಣತಿ ಜೊತೆ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಮೀಕ್ಷೆ ಮಾಡಬೇಕು," ಎಂದು ಅವರು ಹೇಳಿದರು.

ಕರ್ನಾಟಕ ಸರ್ಕಾರ ಈಗಾಗಲೇ ಸಾಮಾಜಿಕ ಹಾಗು ಶೈಕ್ಷಣಿಕ ವರದಿ ಸ್ವೀಕರಿಸಿ ಸಂಪುಟದಲ್ಲಿ ಮಂಡಿಸಿದೆ. ಜತೆಗೆ ಸಚಿವರಿಗೆ ಅದರ ಪ್ರತಿಯನ್ನು ನೀಡಲಾಗಿದೆ. ಮುಂದೆ ಸಂಪುಟ ಸಭೆಯಲ್ಲಿ ಅದರ ಬಗ್ಗೆ ಚರ್ಚೆಯಾಗಿ ಅಂಗೀಕಾರವಾಗಲಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ತಿರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.

ಮುಂದೆ ಕೇಂದ್ರ ಸರ್ಕಾರ ಮಾಡಲಿರುವ ಜಾತಿಗಣತಿಯನ್ನು ಅಧಿಕಾರಿಗಳೇ ಮಾಡಲಿದ್ದಾರೆ. ನಮ್ಮ ಸಾಮಾಜಿಕ ಶೈಕ್ಷಣಿಕ ವರದಿಯನ್ನು ಅಧಿಕಾರಿಗಳೇ ತಯಾರಿಸಿದ್ದಾರೆ. ಆದರೆ, ರಾಜ್ಯದ ಬಿಜೆಪಿ ನಾಯಕರು ರಾಜಕಾರಣ ಮಾಡುವ ಉದ್ದೇಶದಿಂದ ಮಾತನಾಡುತ್ತಾರೆ. ಅವರೆಲ್ಲರ ಬಗ್ಗೆ ನಮಗೆ ಗೊತ್ತಿದೆ ಎಂದು ಹೇಳಿದರು.

ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದನಾ ದಾಳಿಯ ನಂತರ ನರೇಂದ್ರ ಮೋದಿಯವರು ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಳ್ಳದೇ ಬಿಹಾರದಲ್ಲಿ ಚುನಾವಣೆ ಪ್ರಚಾರ ಮಾಡಿದರು. ಭಯೋತ್ಪಾದಕರ ದಾಳಿಯಲ್ಲಿ ಸತ್ತವರ ಕುಟುಂಬದವನ್ನು ಭೇಟಿ ಮಾಡಬೇಕಾಗಿತ್ತು ಎಂದು ಅವರು ಹೇಳಿದರು.

ಸಚಿವ ಶಿವರಾಜ ತಂಗಡಗಿಯವರು ನೀಡಿರುವ ವಿವರವಾದ ಸಂದರ್ಶನದ ಲಿಂಕ್‌ ಕ್ಲಿಕ್‌ ಮಾಡಿ, ಸಚಿವರು ಸ್ಪಷ್ಟನೆ, ವಿವರಣೆ ವೀಕ್ಷಿಸಬಹುದು.

Read More
Next Story